;

ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ನದಿಯ ದಡದ ಜನರ ಜನಜೀವನ ಅಸ್ತವ್ಯಸ್ತ…!!!

ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣನ ಆರ್ಭಟ ಮುಂದುವರೆದಿದ್ದು ನದಿಯ ದಡದ ಜನರ ಜನಜೀವನ ಅಸ್ತವ್ಯಸ್ತ.
ಚಳ್ಳಕೆರೆ ತಾಲ್ಲೂಕಿನಲ್ಲಿ ವರುಣ ಅಬ್ಬರಿಸಿ ಬೊಬ್ಬರಿಸುತ್ತಿದ್ದು ತಾಲೂಕಿನ ಎಲ್ಲಾ ಕೆರೆಗಳು ಸಂಪೂರ್ಣ ಬರ್ತಿಯಾಗಿ ಕೊಡಿಬಿದ್ದು ಹೆಚ್ಚಿನ ನೀರು ಹರಿದು ಹೋಗುತ್ತಿದು. ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ ಅಲ್ಲದೆ ವೇದಾವತಿ ನದಿಯ ದಡದ ಊರುಗಳಿಗು ಮನೆಗಳಿಗೂ ಪ್ರವಾಹದ ಭೀತಿ ಎದುರಾಗಿದೆ. ಚೌಳುರು, ಸುರಾನಹಳ್ಳಿ, ಕಲಮರಹಳ್ಳಿ, ಜಾಲಿಗೊಲ್ಲರಹಟ್ಟಿ. ಗ್ರಾಮ ಗಳಿಗೆ ನೀರು ನುಗ್ಗಿದ್ದು ನಿನ್ನೆ ಎಲ್ಲ ಮನೆಯಲ್ಲಿ ವಾಸಮಾಡುತ್ತಿದ್ದ ಜನತೆ ತಮ್ಮ ಮನೆಯನ್ನು ಖಾಲಿ ಮಾಡಿ ಬೇರೆಡೆಗೆ ಸ್ಥಳಾಂತರಿಸಿದರು.
ವೇದಾವತಿ ನದಿಯ ನೀರಿನ ಮಟ್ಟ ಹೆಚ್ಚಿದ್ದು ಯಾರು ಸಹ ನೀರಿಗೆ ಇಳಿಯದಂತೆ ಚಳ್ಳಕೆರೆ ತಾಲ್ಲೂಕಿನ ದಂಡಾಧಿಕಾರಿಗಳು .ಎನ್. ರಘುಮೂರ್ತಿ ಜನತೆಗೆ ತಿಳಿಸಿದರು. ಹಾಗೆಯೇ ಎಲ್ಲಾ ಕೆರೆಗಳು ಸಂಪೂರ್ಣ ಬರ್ತಿಯಾಗಿ ಕೊಡಿಬಿದ್ದಿದ್ದು ಯಾರು ಸಹ ಕೋಡಿ ಬಿದ್ದ ಜಾಗಗಳಲ್ಲಿ ನೀವು ನೀರಿಗೆ ಇಳಿಯದಂತೆ ತಿಳಿಸಿದರು. ರೈತರ ಜಮೀನಿನಲ್ಲಿ ಮಳೆ ಹೆಚ್ಚಾಗಿ ಬೆಳೆಗಳಿಗೆ ರೋಗ ಬೀಳುವ ಬೀತಿ ಎದುರಾಗಿದೆ. ಈ ಸಾರಿ ರೈತರ ಕೈಗೆ ಬೆಳೆ ಸಿಗುವುದೇ ಎಂಬದು ಅನುಮಾನವಾಗಿದೆ ಎನ್ನುತ್ತಿದ್ದಾರೆ…

ವರದಿ. ಶಶಿಕುಮಾರ್ ಚಳ್ಳಕೆರೆ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;