;

ನಾಯಿ ಎಂದು ಬೈದಿದ್ದಕ್ಕೆ ಸಾಯಿ ಎಂದು ತಂದೆಯನ್ನೇ ಕೊಂದ ಮಗ ! ;

ನಾಯಿ ಎಂದು ಬೈದಿದ್ದಕ್ಕೆ ಸಾಯಿ ಎಂದು ತಂದೆಯನ್ನೇ ಕೊಂದ ಮಗ ! ;

ಗುಡೇಕೋಟೆ.ಸೆ.06:- ತಂದೆ ಮಗನ ಮಧ್ಯೆ ಕ್ಷುಲ್ಲಕ ಮಾತಿಗೆ ಮಾತು ಬೆಳೆದು ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿರುವ ಘಟನೆ ಕೂಡ್ಲಿಗಿ ತಾಲೂಕಿನ ಕುದುರೆಡುವು ಗ್ರಾಮದಲ್ಲಿ ನಡೆದಿದೆ.

ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ಕುದುರೆಡವು ಗ್ರಾಮದ ಛಲವಾದಿ ಕಾಳೆ ಮಲ್ಲಯ್ಯರ ತಿಪ್ಪೇರುದ್ರಪ್ಪ (70) ಕೊಲೆಯಾದವರು. ಆತನ ಮಗ ನಾಗರಾಜ ಕೊಲೆ ಮಾಡಿದ ಆರೋಪಿಯಾಗಿದ್ದಾನೆ.

*ಘಟನೆ ವಿವರ:*
ಕುದುರೆಡುವು ಗ್ರಾಮದಲ್ಲಿ ತಿಪ್ಪೇರುದ್ರಪ್ಪ ಮತ್ತು ಆತನ ಮಗ ನಾಗರಾಜನಿಗೆ ಈ ಹಿಂದಿನಿಂದಲೂ ಕೌಟುಂಬಿಕ ಕಲಹವಿತ್ತು ಎನ್ನಲಾಗಿದೆ. ಮನೆಯಲ್ಲಿ ತಿಪ್ಪೇರುದ್ರಪ್ಪ ಅವರ ತಾಯಿ ಮಂಡಕ್ಕ ಎನ್ನುವವರು ತನ್ನ ಮೊಮ್ಮಗ ನಾಗರಾಜನನ್ನು ಊಟಕ್ಕೆ ಬಾರಪ್ಪಾ ಎಂದು ಕರೆದಿದ್ದಾರೆ. ಆಗ ತಿಪ್ಪೇರುದ್ರಪ್ಪನು “ನಾಯಿಗಳು ಎಲ್ಲಿಯಾದರೂ ಊಟ ಮಾಡಿ ಬಂದಿರುತ್ತವೆ ಬಿಡು” ಎಂದು ತನ್ನ ತಾಯಿ ಮಂಡಕ್ಕಳಿಗೆ ಹೇಳಿದ್ದಾನೆ. ತಂದೆಯ ಈ ಮಾತಿನಿಂದ ಕೋಪಗೊಂಡ ನಾಗರಾಜನು ನನ್ನನ್ನು ನಾಯಿ ಎಂದು ಕರೆಯುತ್ತಿಯಾ? ಎಂದು ಅಲ್ಲೇ ಬಿದ್ದಿದ್ದ ಕಟ್ಟಿಗೆಯಿಂದ ತಂದೆಯ ತಲೆಗೆ ಬಲವಾಗಿ ಹೊಡೆದಿದ್ದಾನೆ. ಅಲ್ಲದೆ, ಕೆಳಗೆ ಬಿದ್ದಿದ್ದ ತಂದೆಯ ಕಾಲು ಹಿಡಿದು ಸಿಮೆಂಟ್ ರಸ್ತೆಗೆ ಎಸೆದಿದ್ದರಿಂದ ತಿಪ್ಪೇರುದ್ರಪ್ಪ ಮೃತಪಟ್ಟಿದ್ದಾನೆ.

ಕೊಲೆಯಾದ ತಿಪ್ಪೇರುದ್ರಪ್ಪನ ತಾಯಿ ಮಂಡಕ್ಕ ನೀಡಿದ ದೂರಿನನ್ವಯ ಗುಡೇಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನಾ ಸ್ಥಳಕ್ಕೆ ಕೂಡ್ಲಿಗಿ ಸಿಪಿಐ ವಸಂತ ವಿ.ಅಸೋದೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗುಡೇಕೋಟೆ ಪ್ರಭಾರ ಪಿಎಸ್ಐ ರುದ್ರಮುನಿ ಹಾಗೂ ಸಿಬ್ಬಂದಿಯು ಆರೋಪಿ ನಾಗರಾಜನನ್ನು ವಶಕ್ಕೆ ಪಡೆದಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ…

ವರದಿ. ಡಿ.ಎಂ. ಈಶ್ವರಪ್ಪ ಸಿದ್ದಾಪುರ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;