;

ದೇವರಗುಡಿಯ ಶರಣ ಚಿಕ್ಕಯ್ಯ ಪಂಡಿತ ಕುರಿತು ಬರೆದ ಶಾಸನಗಳ ಮರು ಓದು ಕೃತಿ ಲೋಕಾರ್ಪಣೆ…!!!

ದೇವರಗುಡಿಯ ಶರಣ ಚಿಕ್ಕಯ್ಯ ಪಂಡಿತ ಕುರಿತು ಬರೆದ ಶಾಸನಗಳ ಮರು ಓದು ಕೃತಿ ಲೋಕಾರ್ಪಣೆ.

ಸಿಂಧನೂರ ಸೆ.5 .ಡಾ.ಎಂ. ಎಂ ಕಲಬುರ್ಗಿ ಯವರ ಪರಮ ಶಿಷ್ಯರಲ್ಲಿ ಒಬ್ಬರಾದ ಶಾಶ್ವತ ಸ್ವಾಮಿ ಮುಕ್ಕುಂದಿಮಠ 80ರ ಇಳಿ ವಯಸ್ಸಿನಲ್ಲಿ ಸಂಶೊಧನೆ ಮಾಡುವ ಮೂಲಕ ದೇವರಗುಡಿ ಶರಣ ಚಿಕ್ಕಯ್ಯ ಪಂಡಿತರ ಕುರಿತು ಶಾಸನಗಳ ಮರು ಓದು ಕೃತಿ ಬರೆದಿರುವುದು ನಮ್ಮೆಲ್ಲರಿಗೂ ಸಂತೋಷ ತಂದಿದೆ ಎಂದು ಅಕ್ಕ ಮಹಾದೇವಿ ವಿಶ್ವ ವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ ಸಂಯೋಜಕರಾದ ಡಾ. ಎಂ.ನಾಗರಾಜ ಹೇಳಿದರು

ನಗರದ ಸರ್ಕಾರಿ ನೌಕರ  ಭವನದಲ್ಲಿ  ಪಂಪ ಪ್ರಕಾಶನ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು, ವಚನ ಸಾಹಿತ್ಯ ಪರಿಷತ್ತು ಮಹಿಳಾ ಘಟಕ, ಹುಳಿಯಮೇಶ್ವರ ದೇವಸ್ಥಾನ ಅಭಿವೃದ್ಧಿ ಸಂಘ ದೇವರಗುಡಿ ಇವರ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಿದ್ದ ಪ್ರೊ. ಶಾಶ್ವತ ಸ್ವಾಮಿ ಮುಕ್ಕುಂದಿಮಠ ರವರ ದೇವರಗುಡಿಯ ಶರಣ ಚಿಕ್ಕಯ್ಯ ಪಂಡಿತ ಕುರಿತು ಬರೆದ ಶಾಸನಗಳ ಮರು ಓದು ಕೃತಿಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ ಮುಕುಂದಿ ಮಠ ಅವರು ಸುಮಾರು 40 ಕೃತಿಗಳನ್ನು ಹೊರ ತಂದಿದ್ದಾರೆ.

ಶಾಶ್ವತ ಸ್ವಾಮಿಯವರನ್ನು ಎರಡನೇಯ ಚಿದಾನಂದ ಮೂರ್ತಿ ಎಂದರೆ ತಪ್ಪಾಗಲಾರದು ಅವರು ಕಿರಿಯ ಸಾಹಿತಿಗಳಿಗೆ ಮಾದರಿಯಾಗಿದ್ದಾರೆ ಅವರು ನಮ್ಮ ಕಲ್ಯಾಣ ಕರ್ನಾಟಕ ಬಾಗದಲ್ಲಿ ಇರದೇ ದಕ್ಷಿಣಕನ್ನಡ ಬಾಗದಲ್ಲಿ ಇದ್ದಿದ್ದರೆ ಇಷ್ಟೋತ್ತಿಗೆ ಪ್ರಸಿದ್ದಿ ಪಡೆದು ನಾಡಿನ ಸಾಹಿತಿ ಯಾಗುತ್ತಿದ್ದರು. ಅವರು ಕೃತಿಗಳನ್ನು ನಾವೆಲ್ಲರು ಓದುವ ಮೂಲಕ  ಅವರ ಜ್ಞಾನ ಭಂಡಾರವನ್ನು ಎಲ್ಲರಿಗೂ ತಿಳಿಸಿ ಅವರನ್ನು ನಾಡಿಗೆ ಪರಿಚಯ ಮಾಡುವದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಈ ಸಂದರ್ಭದಲ್ಲಿ ಡಾ.ಶರಬಸಪ್ಪ ಕೊಲ್ಕಾರ, ಡಾ.ಚನ್ನಬಸಯ್ಯ ಹಿರೇಮಠ, ಎಸ್. ಶರಣಗೌಡ ಗೌಡ, ಬೀರಪ್ಪ ಶಂಬೋಜಿ, ಡಿ.ಎಚ್ ಕಂಬಳಿ, ಮಧುಮತಿ ದೇಶಪಾಂಡೆ, ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ಹಿರೇಮಠ, ದೇವಿರಮ್ಮ, ಹನುಮಂತ ಬೇರಗಿ, ಹಿರಿಯ ಸಾಹಿತಿ ಜಾನಿಸಾಬ ಸೇರಿದಂತೇ ಇತರರು ವೇದಿಕೆಯ ಮೇಲೆ ಇದ್ದರು

ಉಪನ್ಯಾಸಕ ಬಸವರಾಜ ನಾಯಕ ಕಾರ್ಯಕ್ರಮ ನಿರೂಪಣೆ ಹಾಗೂ ಸುಸ್ಮಿತ ಸ್ವಾಗತ ಮಾಡಿದರು. ಕುಮಾರಿ ರಾಗ ಪ್ರಿಯ ಎಂಬ ಮಗು ಆಕರ್ಷಕವಾಗಿ ಜಾನಪದ ನೃತ್ಯ ಪ್ರದರ್ಶನ ಮಾಡಿದಳು. ಇದೇ ಸಂದರ್ಭದಲ್ಲಿ ಶಾಶ್ವತ ಸ್ವಾಮಿ ಮುಕುಂದಿಮಠ ದಂಪತಿಗಳಿಗೆ ಸಾಹಿತಿಗಳು, ಕವಿಗಳು, ಪತ್ರಕರ್ತರು ಸೇರಿದಂತೇ ಇತರರು ಸನ್ಮಾನಿಸಿ ಗೌರವಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;