;

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ,ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ…!!!

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ,ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಸಿಂಧನೂರು ಸ.1. ನಗರದ ಪಿಡಬ್ಲೂಡಿ ಕ್ಯಾಂಪ್ ನಲ್ಲಿರುವ ಶ್ರೀ ಚನ್ನಬಸವೇಶ್ವರ ದೇವಸ್ಥಾನ ಕಲ್ಯಾಣ ಮಂಟಪದಲ್ಲಿ ಸ್ಥಳೀಯ ಸಂಸ್ಥೆ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ನಡೆದ ದೇಶಭಕ್ತಿ ಸ್ಪರ್ಧೆಯಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನ ಗುಂಡ ಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಕಬ್ ಮತ್ತು ಬುಲ್ ವಿಭಾಗದಲ್ಲಿ ಪ್ರಕಾಶ್ ತಂದೆ ಗುಡದಪ್ಪ,ಭಾಗ್ಯ ತಂದೆ ಹನುಮಂತ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ತಾಲೂಕು ಮಟ್ಟದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ ವಿಜಯ್ ರಂಗರೆಡ್ಡಿ ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳು ಆಗಮಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಎಸ್ ಶರಣೇಗೌಡ ಅಧ್ಯಕ್ಷರು ಸ್ಥಳೀಯ ಸಂಸ್ಥೆ ವಹಿಸಿದ್ದರು. ಬೀರಪ್ಪ ಶಂಭೋಜಿ ಕಾರ್ಯದರ್ಶಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಅಂಬಣ್ಣ ನಾಯಕ ಎಸ್.ಜಿ.ವಿ ರಾಯಚೂರು ಪ್ರಶಸ್ತಿ ಪತ್ರಗಳನ್ನು ಪ್ರದಾನ ಮಾಡಿದರು.

ಶಂಕರ ದೇವರು ಹಿರೇಮಠ ಕಬ್ ಮಾಸ್ಟರ್, ನಾರಾಯಣ ಜೋಶಿ ಕಬ್ ಮಾಸ್ಟರ್ ,ರಾಮದಾಸ್ ಸ್ಕೌಟ್ ಮಾಸ್ಟರ್, ಶ್ರೀಮತಿ ಸೀಮಾ ಜೆ ಗೈಡ್, ಶ್ರೀ ವಿಠ್ಠಲ ತಾಲೂಕಾಧ್ಯಕ್ಷರು ದೈಹಿಕ ಶಿಕ್ಷಕರ ಸಂಘ ಸಿಂಧನೂರು,ಇಮಾಮ್ ಸಾಬ್ ಸ್ಕೌಟ್ ಮಾಸ್ಟರ್, ಶರಿಫ್ ಸ್ಕೌಟ್ ಮಾಸ್ಟರ್ ಉಪಸ್ಥಿತರಿದ್ದರು.

ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿಗಳಿಗೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ದುಗ್ಗಮ್ಮನಗುಂಡ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ಗುಡದಪ್ಪ, ಉಪಾಧ್ಯಕ್ಷರಾದ ಲಕ್ಷ್ಮಣ, ಸಹಶಿಕ್ಷಕರಾದ ವಿರುಪಾಕ್ಷಪ್ಪ ಫಕೀರಪೂರ ಅವರು ಅಭಿನಂದನೆಗಳನ್ನು ತಿಳಿಸಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;