ಹುರುಳಿಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ
ಕೂಡ್ಲಿಗಿ: ತಾಲೂಕಿನ ಹುರುಳಿಹಾಳ್ ಕ್ಲಸ್ಟರ್ ವ್ಯಾಪ್ತಿಯ ಮೇಗಳ ಕರ್ನಾರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಧಿಕಾರಿಗಳು ಕಾರ್ಯಾಲಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕೂಡ್ಲಿಗಿ ವತಿಯಿಂದ ಸಮೂಹ ಸಂಪನ್ಮೂಲ ಕೇಂದ್ರ ಸಿ ಆರ್ ಸಿ ಹುರುಳಿಹಾಳ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಖಾಸಗಿ ಶಾಲೆಯ ಮಕ್ಕಳಿಗೆಂತ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಯಾವುದರಲ್ಲಿ ಕಡಿಮೆ. ಇಲ್ಲ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕೀಳುರಮೆಯನ್ನು ಬಿಟ್ಟು ಸಾಧನೆಗೆ ಮುಂದಾಗಬೇಕು. ಸಾಧನೆಗೆ ಶಿಕ್ಷಣ ಪ್ರಮುಖ ಅಸ್ತ್ರ ಎಂದ ಅವರು ಪೋಷಕರು ಮಕ್ಕಳ ಕಲೆಗೆ ಪ್ರೋತ್ಸಾಹ ನೀಡಬೇಕು ಆಗ ಮಾತ್ರ ವಿದ್ಯಾರ್ಥಿಗಳು ತಮ್ಮಪ್ರತಿಭೆ ಅನಾವರಣಗೊಳಿಸಲು ವಿಶ್ವಾಸ
ಮೂಡಲಿದೆ. ಪ್ರತಿಯೊಬ್ಬವಿದ್ಯಾರ್ಥಿಯಲ್ಲೂ ಕೂಡ ಸೂಪ್ತ ಪ್ರತಿಭೆ ಕೆಲಸವನ್ನು ಇರುತ್ತದೆ. ಆ ಪ್ರತಿಭೆಯನ್ನು ಗುರುತಿಸಿ ಉತ್ತಮ ವೇದಿಕೆ ಕಲ್ಪಿಸಿ ಅನಾವರಣಗೊಳಿಸುವ ಶಿಕ್ಷಕರು ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಯುವರಾಜ್ ನಾಯ್ಕ ಹೇಳಿದರು. ಸಮಾರಂಭದಲ್ಲಿ ಜಾನಪದ ನೃತ್ಯ ಕಲೆಗಳು, ಮಣ್ಣಿನ ಕಲಾಕೃತಿಗಳು, ಸಂಗೀತ, ಕೋಲಾಟ, ಚಿತ್ರಕಲೆಗಳು ಇನ್ನಿತರೆ ಕಾರ್ಯಕ್ರಮ ಗಮನ ಸೆಳೆದವು. ಈ ಸಂದರ್ಭದಲ್ಲಿ ಹುರುಳಿಹಾಳ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ತಿಪ್ಪೇರುದ್ರಪ್ಪ, ಕ್ಷೇತ್ರ ಸಂಪನ್ಮೂಲ ಕಚೇರಿಯ ಬಿ ಆರ್ ಪಿ ಗಳಾದಂತಹ ಶರಣಪ್ಪ, ಶಿಕ್ಷಕರಾದ ನಾಗರಾಜ್, ರವೀಂದ್ರ, ರೇವಣಸಿದ್ದಪ್ಪ, ಕ್ಲಸ್ಟರ್ ಸಿಆರ್ಪಿ ಯಾದ ಶ್ರೀಮತಿ ಅನುಪಮಾ, ಶ್ರೀಮತಿ ಜಿನಾಬೀ, ಮಂಜನಾಥ, ನಾಗಮಣಿ, ಗೋಣಿಬಸಪ್ಪ ಉತ್ತಂಗಿ, ಸಂತೋಷ್ ಕುಮಾರ್, ಹುರುಳಿಹಾಳ್ ಕ್ಲಸ್ಟರ್ ವ್ಯಾಪ್ತಿಗೆ ಬರುವಂತಹ 16 ಶಾಲೆಗಳ ಮುಖ್ಯ ಗುರುಗಳು ಮತ್ತು ಸಹ ಶಿಕ್ಷಕರು, ಮಕ್ಕಳು, ಪೋಷಕರು ಇದ್ದರು.

ವರದಿ : ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
