ಕಾನಹೊಸಹಳ್ಳಿಯಲ್ಲಿ ಮಳೆಗೆ ಪ್ರಾರ್ಥಿಸಿ ವಾಸುದೇವರ ಮದುವೆ
ವರುಣದೇವನನ್ನು ಬರಮಾಡಿಕೊಳ್ಳಲು ವಾಸುದೇವರ ಮೆರವಣಿಗೆಕೂಡ್ಲಿಗಿ: ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳಿ ಪಟ್ಟಣದಲ್ಲಿ ಮಳೆಗಾಗಿ ಪ್ರಾರ್ಥಿಸಿ ಕಾನ ಹೊಸಹಳ್ಳಿ ಗ್ರಾಮಸ್ಥರು ಜಾತಿಬೇಧ ಮರೆತು ಹಿಂದು ಸಂಪ್ರದಾಯದಂತೆ ವಾಸುದೇವರ (ಕತ್ತೆಗಳ) ಮದುವೆ ಮಾಡಿದ್ದಾರೆ. ಹೊಸಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತಿರುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಚನ್ನಾಗಿ ಬೆಳೆದಿದ್ದು ಎಲ್ಲಾ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು ಈಗ ಅವಶ್ಯವಾಗಿ ಮಳೆಯು ಬೇಕಾಗಿದೆ. ಆದರೆ ಮಳೆಯೂ ಸರಿಯಾದ ಸಮಯಕ್ಕೆ ಬಂದಿಲ್ಲವಾದ್ದರಿಂದ ಗ್ರಾಮದ ಯುವಕರು ಜೋಡಿ ಕತ್ತೆಗಳನ್ನು ಹಿಡಿದು ತಂದು ಅವುಗಳನ್ನು ತೊಳೆದು ಸ್ವಚ್ಛಗೊಳಿಸಿ ಮದುವೆ ಸಿಂಗಾರ ಮಾಡಿದ್ದಾರೆ. ಕತ್ತೆಗಳಿಗೆ ಮದುವೆ ಮಾಡಿ ಸಂಪ್ರದಾಯ ಬದ್ಧವಾಗಿ ಮದುವೆಯಲ್ಲಿ ಅನುರಿಸುವ ಎಲ್ಲ ಪದ್ಧತಿಗಳನ್ನು ಇಲ್ಲಿ ಮಾಡಿದ್ದಾರೆ.

ನೀರು ತುಂಬಿದ ಮಡಿಕೆ ಕುಂಭವನ್ನು ಹೊತ್ತುಕೊಂಡು ಊರ ಬಾಗಿಲು ಬಳಿಯ ಬುಡ್ಡೆಕಲ್ಲಿಗೆ ನೀರು ಸುರಿದು ಪೂಜೆ ಸಲ್ಲಿಸಿದರು. ಎರಡು ಜೋಡಿ ಕತ್ತೆಗಳಿಗೆ ಸಿಂಗರಿಸಿಕೊಂಡು ಪ್ರಮುಖ ಬೀದಿಯಲ್ಲಿ ಮಂಗಳವಾದ್ಯಗಳೊಂದಿಗೆ ಮೆರವಣಿಗೆ ನಡೆಸಲಾಯಿತು. ಕಳೆದ ಒಂದು ತಿಂಗಳಿಂದ ಮಳೆ ಇಲ್ಲದೆ ಬೆಳೆಗಳು ಒಣಗುತ್ತಿರುವ ಹಿನ್ನೆಲೆ ರೈತರು ಕಂಗಾಲಾಗಿದ್ದರು. ಕತ್ತೆಗಳ ಮೆರವಣಿಗೆ ಮಾಡಿದರೆ ಮಳೆ ಬರಬಹುದೆಂಬ ನಂಬಿಕೆ ಜನರಲ್ಲಿ ಇರುವುದರಿಂದ ಇಂಥದ್ದೊಂದು ಆಚರಣೆ ನಡೆದಿದೆ. ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ಬೈರಪ್ಪರ ಸಿದ್ದಣ್ಣ, ಕತ್ತೇರ ಮಹೇಶ್, ಗಂಗಣ್ಣ,ಮಡಿವಾಳರ ಮಹೇಶ್, ಅಕ್ಕಪ್ಪ, ಗುರುಮೂರ್ತಿ, ಕೊಟ್ರೇಶ್, ತಿಪ್ಪಯ್ಯ, ಉಮೇಶ್ ಮೆರವಣಿಗೆಯಲ್ಲಿ ಭಾಗವಸಿದ್ದರು.ಸುತ್ತಮುತ್ತಲಿನ ಗ್ರಾಮಗಳಲ್ಲಿ ಬಿತ್ತಿರುವ ಸೂರ್ಯಕಾಂತಿ, ಜೋಳ, ಮೆಕ್ಕೆಜೋಳ, ಶೇಂಗಾ ಬೆಳೆಗಳು ಚನ್ನಾಗಿ ಬೆಳೆದಿದ್ದು ಎಲ್ಲಾ ಬೆಳೆಗಳು ಕಾಳು ಕಟ್ಟುವ ಹಂತದಲ್ಲಿದ್ದು ಈಗ ಅವಶ್ಯವಾಗಿ ಮಳೆಯು ಬೇಕಾಗಿದೆ ಆದರೆ ಮಳೆಯೂ ಸರಿಯಾದ ಸಮಯಕ್ಕೆ ಬಂದಿಲ್ಲವಾದ್ದರಿಂದ ಕತ್ತೆಗಳಿಗೆ ಪೂಜೆ ಸಲ್ಲಿಸಿದರೆ ಮಳೆ ಬರಬಹುದೆಂಬ ಜನರಲ್ಲಿ ನಂಬಿಕೆಮುಖಂಡರಾದ ಬೈರಪ್ಪರ ಸಿದ್ದಣ್ಣ…

ವರದಿ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
