;

ಕಾಂಗ್ರೆಸ್ ಗೆ ದೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿ ಸಿದ್ಧನಿದ್ದೇನೆ – ಶಾಸಕ ನಾಡಗೌಡ…!!!

ಕಾಂಗ್ರೆಸ್ ಗೆ ದೈರ್ಯವಿದ್ದರೆ ಬಹಿರಂಗ ಚರ್ಚೆಗೆ ಬರಲಿ ಸಿದ್ಧನಿದ್ದೇನೆ – ಶಾಸಕ ನಾಡಗೌಡ.

ಸಿಂಧನೂರು : ಜನರ ಪ್ರೀತಿ ವಿಶ್ವಾಸ ಆಶೀರ್ವಾದದಿಂದ ಗೆದ್ದು ತಾಲ್ಲೂಕಿನಲ್ಲಿ ಜನ ಮೆಚ್ಚುವ ಕೆಲಸ ಮಾಡಿದ್ದೇನೆ. ಹಿಂದೆ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರದಲ್ಲಿ ಕಾಂಗ್ರೇಸ್ ಶಾಸಕರಾಗಿದ್ದಾಗ ನೂರಾರು ಕೋಟಿ ಅನುದಾನ ತಂದರು ಆದರೆ ನಗರದಲ್ಲಿ ಯಾವುದೆ ಅಭಿವೃದ್ಧಿ ಕೆಲಸಯಾಗಿಲ್ಲ, ನಾನು ತಂದ ಅನುಧಾನವನ್ನು ನಾಡಗೌಡ್ರು ಗುದ್ದಲಿ ಪೂಜೆ ಮಾಡುತ್ತಾ ಹೊರಟಿದ್ದಾರೆ ಎಂದು ಕಾಂಗ್ರೆಸ್ ನವರು ಸುಳ್ಳು ಆಪಾದನೆ ಮಾಡುತ್ತಿದ್ದಾರೆ, ಅವರಿಗೆ ದೈರ್ಯವಿದ್ದರೆ ತಾವೂ ಮಾಡಿರುವ ಅಬಿವೃದ್ಧಿ ಕೆಲಸಗಳ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ನಾನು ಮಾಡಿರುವ ಅಬಿವೃದ್ಧಿ ಕೆಲಸಗಳ ಬಗ್ಗೆ ದಾಖಲೆ ಸಹಿತ ಉತ್ತರ ಕೊಡಲು ಸಿದ್ಧನಿದ್ದೇನೆ ಎಂದು ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.

ಚನ್ನಳ್ಳಿ ಗ್ರಾಮದಲ್ಲಿ ಎಸ್ ಹೆಚ್ -23 ಮುಕ್ಕುಂದಾ ಸಿಂಗಪೂರ ರಸ್ತೆ 10.00 ಕೋಟಿ ರೂ.ಗಳ ವೆಚ್ಚದಲ್ಲಿ ರಸ್ತೆ ಡಾಂಬರೀಕರಣ,ಕೆ.ಕೆ.ಆರ್.ಡಿ.ಬಿ. ಮೈಕ್ರೋ ಯೋಜನೆ ಅಡಿಯಲ್ಲಿ 30.00 ಲಕ್ಷ ರೂ.ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ, ಸಮಾಜ ಕಲ್ಯಾಣ ಇಲಾಖೆ ಅನುದಾನದಡಿ 12.00 ಲಕ್ಷ ರೂ.ಗಳ ವೆಚ್ಚದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ, ವಿರೂಪಾಕ್ಷೆಶ್ವರ ತಾತನ ದೇವಸ್ಥಾನ 10.00 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನ ಅಭಿವೃದ್ದಿ, ಸಣ್ಣ ನೀರಾವರಿ ಇಲಾಖೆಯಿಂದ 100.00 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಬ್ರಿಡ್ಜ್ ಹಾಗೂ 10.00 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರ, ಸಿದ್ರಾಂಪೂರ ಗ್ರಾಮದಲ್ಲಿ 38.00 ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಪಶು ಚಿಕಿತ್ಸಾ ಕೇಂದ್ರ, 2018-19ನೇ ಸಾಲಿನ ಕೆ.ಕೆ.ಆರ್.ಡಿ.ಬಿ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡ 2 ಉರ್ದು ಶಾಲಾ ಕೊಠಡಿ ಉದ್ಘಾಟನೆ ಹಾಗೂ ವಿವಿಧ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ.ಜಾತಿ ಪ.ಪ.ಪಂಗಡದ ಮುರಾರ್ಜಿ, ಅಲ್ಪಸಂಖ್ಯಾತರ, ಹಿಂದುಳಿದ ವರ್ಗ ಮಕ್ಕಳ ವಸತಿ ಶಾಲೆಗಳ ಮಂಜೂರು ಕಟ್ಟಡ ನಿರ್ಮಾಣ ಜವಗೇರಾದ ಧಡೇಸೂಗುರ, ಸಾಲಗುಂದ, ಬಾದರ್ಲಿ, ಬಂಗಾಲಿ ಕ್ಯಾಂಪ, ಹಾರಾಪೂರ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆಯ ಕಟ್ಟಡ ಹಾಗೂ ವಸತಿಗೃಹಗಳು ನಿರ್ಮಾಣ, ಸಿಸಿ ರಸ್ತೆಗಳು, 450 ಶಾಲಾ ಹೊಸ ಕಟ್ಟಡಗಳು, ಹರಿದು ಹೋಗುವ ನೀರನ್ನು ಪಿಕ್ಯಾಪ ಡ್ಯಾಮಗಳು ಬ್ರಿಡ್ಜ್ ಗಳು ಕೆಳಭಾಗ ಹಾಗೂ ಮೇಲ್ಭಾಗದ ರೈತರಿಗೆ ನೀರಿನ ತೊಂದರೆಯಾಗದಂತೆ ನೋಡಿಕೊಂಡಿದ್ದೆನೆ. 2023ರ ಚುನಾವಣಾಯಲ್ಲಿ ಜೆಡಿಎಸ್ ಪಕ್ಷಕ್ಕೆ ಸಂಪೂರ್ಣ ಬಹುಮತ ನೀಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುತ್ತಾರೆ ರಾಜ್ಯದಲ್ಲಿ ಪಂಚತಂತ್ರ ಕಾರ್ಯಕ್ರಮ ಪಂಚಾಯಿತಿಗೆ ಒಂದರಂತೆ ಉತ್ತಮ ಮಾದರಿ ಶಾಲೆ ಎಲ್.ಕೆ.ಜಿ.ಯಿಂದ ಪಿಯುಸಿ ವರೆಗೂ ಉಚಿತ ಶಿಕ್ಷಣ, ಸರ್ಕಾರಿ ಆಸ್ಪತ್ರೆ ,5 ವರ್ಷಗಳಲ್ಲಿ 5 ಲಕ್ಷ ಕೋಟಿ ವೆಚ್ಚದಲ್ಲಿ ನೀರಾವರಿ ಯೋಜನೆಗಳು ಮಾಡುವುದಾಗಿ ಕ್ಷೇತ್ರದ ಜನರು ಆಶೀರ್ವಾದ ಮಾಡಿ ನನ್ನನ್ನು ಗೆಲ್ಲಿಸಿದರೆ ಮತ್ತೊಮ್ಮೆ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗುತ್ತಾರೆ. ಇನ್ನೂಳಿದ 10% ಕ್ಷೇತ್ರದಲ್ಲಿ ಅಭಿವೃದ್ಧಿಯ ಕೆಲಸ ಮಾಡಿ ಮಾದರಿ ಕ್ಷೇತ್ರ ಮಾಡುವೆ ಎಂದು ಶಾಸಕ ವೆಂಕಟರಾವ ನಾಡಗೌಡ ಕ್ಷೇತ್ರದ ಮತದಾರರಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡರಾದ ಚನ್ನಳ್ಳಿ ಗ್ರಾಪಂ ಅಧ್ಯಕ್ಷರಾದ ಶಿವಮ್ಮ, ಉಪಾಧ್ಯಕ್ಷರಾದ ರಾಜಮ್ಮ, ಬಸವರಾಜ ನಡವಿ, ಶಿವರಾಯಪ್ಪ ಶ್ರೀ ನಿವಾಸ, ಚಂದ್ರಕಲಾ ಚನ್ನಬಸವ, ನಾಗನಗೌಡ,ಎಸ್.ಡಿ ಎಮ್.ಸಿ ಅಧ್ಯಕ್ಷರಾದ ಜಮಾಲ್ ಸಾಬ್, ಸಿ.ಆರ್.ಪಿ ಶಾನುಲ್ಲಾ, ಮುಖ್ಯ ಗುರುಗಳಾದ ಪ್ರಕಾಶ, ಪಿಡಿಒ ಅಂದಾನಪ್ಪ ಸೇರಿದಂತೆ ಭಾಗವಹಿಸಿದ್ದರು ಶಿಕ್ಷಕರಾದ ಲಾಳೇಸಾ ಅಂಟಿ ಕಾರ್ಯಕ್ರಮ ನಿರೂಪಿಸಿದರು.ಉರ್ದು ಶಾಲೆಯ ಭೂ ದಾನಿಗಳಾದ ದೊಡ್ಡ ಲಾಲ್ ಸಾಬ ಮತ್ತು ಖಾದರ್ ಸಾಬ್ ರಿಗೆ ಶಾಸಕರಿಂದ ಸನ್ಮಾನಿಸಿ ಗೌರವಿಸಿದರು.

ಚನ್ನಳ್ಳಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿದ್ಯವನ್ನು ಕುಮಾರ ಸ್ವಾಮಿ ತಾತನವರು ವಹಿಸಿದ್ದು ವೇದಿಕೆಯಲ್ಲಿ ಜೆಡಿಎಸ್ ತಾಲ್ಲೂಕು ಅಧ್ಯಕ್ಷರಾದ ಬಸವರಾಜ ನಾಡಗೌಡ, ಜಿ.ಸತ್ಯನಾರಾಯಣ, ಶಿವನಗೌಡ ಗೋರೆಬಾಳ, ದರ್ಮನಗೌಡ ಮಲ್ಕಾಪೂರು, ವೆಂಕಟೇಶ ನಂಜಲದಿನ್ನಿ, ವೆಂಕಟ ರಾಮರಡ್ಡಿ, ಬಸವರಾಜ ಗೋಸ್ವಾರ ಪಿಡಬ್ಲೂಡಿ ಎಇಇ ಸಿ.ಎಸ್‌ ಪಾಟೀಲ, ಜೆಇ ಪಾಂಡುರಂಗ ಸೇರಿದಂತೆ ಹಲವರು ಕಾರ್ಯ ಕ್ರಮದಲ್ಲಿ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;