ಅಳಿವಿನ ಸ್ಥಿತಿಯಲ್ಲಿರುವ ತೊಗಲುಗೊಂಬೆ ಪ್ರದರ್ಶನ -ಜಿ. ರಾಘವೇಂದ್ರ
ಕೂಡ್ಲಿಗಿ :ತೊಗಲುಗೊಂಬೆ ಆಟಗಳು ನೋಡುಗರ ಕಣ್ಮನಗಳನ್ನು ಸೆಳೆದು ಅತ್ಯಾಕರ್ಷಕ ಪ್ರದರ್ಶನಗಳಾಗಿವೆ. ಆದರೆ ಇಂದಿನ ದಿನಮಾನಗಳಲ್ಲಿ ಟಿ, ವಿ, ಮೊಬೈಲ್ ಗಳ ಭರಾಟೆಯಲ್ಲಿ ಇಂತಹ ಕಲೆಗಳು ಮರೆಯಾಗುತ್ತಿರುವುದು ಕಂಡುಬರುತ್ತಿದೆ. ಆದರೂ ಕಲಾವಿದರು ಈ ಪರಂಪರೆ ಇನ್ನೂ ಉಳಿಸಿಕೊಂಡು ಬರುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ.ಎಂದು ಕಾರ್ಮಿಕ ಮುಖಂಡ ಜಿ, ರಾಘವೇಂದ್ರ ನುಡಿದರು.

ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಊರಮ್ಮ ದೇವಿ ಭಜನಾ ಮಂಡಳಿ (ರಿ )ಹಿರೇಹೆಗ್ಡಳ್ ಇವರ ಸಹಯೋಗದಲ್ಲಿ ಪಟ್ಟಣದ ಕೊತ್ತಲ ಆಂಜನೇಯ ಸ್ವಾಮಿ ದೇವಸ್ಥಾನ ಆವರಣದಲ್ಲಿ ಜರುಗಿದ ತೊಗಲುಗೊಂಬೆ ಆಟ ರಾಮಾಯಣ ಪ್ರಸಂಗ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅತಿಥಿಗಳಾಗಿ ನಾಗರಾಜ ಭಟ್ಟರು ಮಾತನಾಡಿ ಇಂತಹ ಕಲೆಗಳನ್ನು ಕಲಾವಿದರನ್ನು ವೇದಿಕೆಗಳ ಮೂಲಕ ಪ್ರೋತ್ಸಾಹಿಸಬೇಕಿದೆಯೆಂದರು.
ನಂತರ ಶ್ರೀಮತಿ ಎಸ್, ಸುಭದ್ರಮ್ಮ ಮತ್ತು ಎಸ್, ತಿಪ್ಪೇಸ್ವಾಮಿ ಹಾಗೂ ಸಂಗಡಿಗರು ಶ್ರೀ ಸತ್ಯಂಬಿಕಾ ತೊಗಲುಗೊಂಬೆ ಮೇಳ ಬಡೆಲಡುಕು ಇವರಿಂದ ಅರಣ್ಯ ಖಂಡ ಅರ್ಥಾತ್ ಸೀತಾಪಹರಣದ ಪ್ರಸಂಗಗಳನ್ನು ಪ್ರಸ್ತುತ ಪಡಿಸಿದರು…

ವರದಿ.ಸಿ ಅರುಣ್ ಕುಮಾರ್ ಜುಮ್ಮೋಬನಹಳ್ಳಿ ಕೂಡ್ಲಿಗಿ ತಾಲೂಕು ವರದಿಗಾರರು*
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
