ಬೆಳಗಾವಿ ಜಿಲ್ಲಾ ಶಿವಾಪುರ(ಹ )ತಾಲೂಕು ಮೂಡಲಗಿ ತಾಲೂಕು ಈ ಗ್ರಾಮದಲ್ಲಿ
ಒಬ್ಬ ವಯಸ್ಸಾದ ಅಜ್ಜಿಯ ಕಥೆಯನ್ನು ಟಿವಿ1 ಫಸ್ಟ್ ನ್ಯೂಸ್ ಬೆಂಗಳೂರು ವರದಿಮಾಡಿತ್ತು.

ವರದಿಯನ್ನು ವೀಕ್ಷಿಸಿದ ವರದಿ ನೋಡಿದ ಗ್ರಾಮದ ಯುವಕರು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ದ್ವನಿ (ರಿ )ಚಂದ್ರಕಾಂತ್ ಎಸ್ ಕಾದ್ರೊಳ್ಳಿ ಬಣ ಮೂಡಲಗಿ ತಾಲೂಕು ಕಮಿಟಿಯವತಿಯಿಂದ ಹಾಗೂ ಗ್ರಾಮದ ಪಂಚಾಯತ್ ಸದಸ್ಯರು ಮತ್ತು ಅನೇಕ ಯುವಕರು ಸೇರಿ
8000 ರೂಪಾಯಿಯನ್ನು ಸಹಾಯದಿಂದ ಕೂಡಿಸಿ ಅಜ್ಜಿಗೆ ಮನೆ ಕಟ್ಟಿಕೊಂಡುವಲ್ಲಿ ಸ್ವಲ್ಪಮಟ್ಟಿಗೆ ಇವರು ಒದಗಿಸುವ ಕೊಡುವಲ್ಲಿ ಕೈಜೋಡಿಸಿ ಅಜ್ಜಿಗೆ ಸ್ವಲ್ಪ ಒದಗಿಸಿಕೊಟ್ಟಂತೆ ನೆಮ್ಮದಿ ಆಗಿದೆ & ಗ್ರಾಮ್ ಯುವಕರು ಸಂತೋಷದಿಂದ ಅಜ್ಜಿಯ ಹಳೆಯ ಮೂರುಕುಲ ಜೋಪಡಿ ತೆಗೆದು ಅವರೆಲ್ಲರೂ ತಮ್ಮ ಕೈಲಾದಷ್ಟು ಹಣವನ್ನು ಕೂಡಿಸಿ ತಕ್ಕ ಮಟ್ಟಿಗೆ ರೆಡಿ ಮಾಡಿ ಕೊಟ್ಟರು.

ಪಂಚಾಯತಿ ಸದಸ್ಯರಾದ
ಲಕ್ಷ್ಮಣ್ ಕರಿಯಪ್ಪ ಖಾನಟ್ಟಿ
ಶಿವಾಪುರ ಗ್ರಾಮ ಪಂಚಾಯಿತಿ ಸದಸ್ಯರು
ಸಹಾಯ ಹಸ್ತ ನೀಡಿದರು,
ಈ ಗ್ರಾಮದಲ್ಲಿ ವಯಸ್ಸಾದ ಅಜ್ಜಿಯ ಕತೆ ಈ ಗ್ರಾಮದಲ್ಲಿ ಸುಮಾರು 70 ವರ್ಷದಿಂದ ಬಾಳಿ ಬದುಕುತ್ತಿರುವ ಅಜ್ಜಿ ಹೆಸರು ಕಾಶವ್ವ ಬಂದಾನೆ ಎಂಬ ಅಜ್ಜಿ ಗ್ರಾಮ ಪಂಚಾಯತ್ ಶಿವಪುರ(ಹ )ರಾಜೀವ್ ಗಾಂಧಿ ವಸತಿ ನಿಲಯದ ಗ್ರಾಮ ಪಂಚಾಯಿತಿಯಿಂದ ಮನೆ ಮುಂಜೂರಾತಿ ಆಗಿರುತ್ತದೆ,ಆದರೆ ಅಜ್ಜಿಯ ಹೆಸರಿನಲ್ಲಿ ಬಂದ ಮನೆಯು ಮಾಯವಾಗಿದೆ.

ಆ ಜೀವ ಇರುವ ಸ್ಥಳದಲ್ಲಿ ಮನೆ ಪಾಯ ಇಲ್ಲ ಮನೆ ಕಂಪ್ಲೀಟ್ ಆಗಿಲ್ಲ ಹಾಗಾದರೆ ಮನೆ ಎಲ್ಲಿ ಹೋಯಿತು ಸರ್ಕಾರದ ನಿಯಮದ ಪ್ರಕಾರ ತಳಪಾಯ
ಮೇಲ್ಚಾವಣಿ ಯಾವುದು ಈ ಸ್ಥಳದಲ್ಲಿ ಕಂಡು ಬರುತ್ತಿಲ್ಲ 2011-12 ರ ವರ್ಷದಲ್ಲಿ ಮನೆಗಳ ಬಿಲ್ ರ್ಸ್ 49500 ರಾಜೀವ್ ಗಾಂಧಿ ರೋಲರ್ ವಸತಿ ನಿಲಯದಿಂದ ಬಂದ ಹಣ ಯಾರ ಅಕೌಂಟಿಗೆ ಹೋಗಿದೆ ಗೊತ್ತಿಲ್ಲ
ಸರ್ಕಾರದ ನಿಯಮದ ಪ್ರಕಾರ ತಳಪಾಯ ಮೇಲ್ಛಾವಣಿ ಯಾವುದು ಕಂಡುಬರುತ್ತಿಲ್ಲ ಹಾಗಾದರೆ 49500
ಗ್ರಾಮಪಂಚಾಯತ್ ಶಿವಪುರ(ಹ )ಗ್ರಾಮೀಣ ಅಭಿವೃದ್ಧಿ ಅಧಿಕಾರಿಗಳು ಹೇಗೆ ಬಿಲ್ ಮಂಜೂರಾತಿ ಮಾಡಿಕೊಟ್ಟರು ಅನ್ನುವ ಅನುಮಾನ ಕಾಡುತ್ತಿದೆ.
ಸಂಘಟನೆ ಪಧಾಧಿಕಾರಿಗಳು ಗ್ರಾಮ ಪಂಚಾಯತ್ ತೆರಳಿ ಅಜ್ಜಿಗೆ ಮನೆ ಕೊಡಲು ವಿಚಾರಿಸಿದಲ್ಲಿ ಮನೆ ಮಂಜೂರಾತಿ ಆಗುವುದಿಲ್ಲ ಅವರ ಹೆಸರಲ್ಲಿ ಮನೆ ಇದೆ,ಎಂದು ಉತ್ತರ ನೀಡಿದರು ಇಷ್ಟಕ್ಕೆ ಸುಮ್ಮನೆ ಬಿಡದೆ ಅಜ್ಜಿಯ ಮನೆ ಕಟ್ಟಿಕೊಡುವುದಕ್ಕೆ ಸಿದ್ದರಾದರೂ
75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಜ್ಜಿಗೆ ಸೂರನ್ನು ಮಾಡಿಕೊಡುವಲ್ಲಿ ಗ್ರಾಮಸ್ಥರು ಕೈಗೊಂಡಿದ್ದಾರೆ.
ಈ ಸಂದರ್ಭದಲ್ಲಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲಾಧ್ಯಕ್ಷರಾದ ಮಹಾಲಿಂಗ ಗಗ್ಗರಿಯವರು ಸಹಾಯ ಮಾಡುವುದಾಗಿ ಭರವಸೆ ನೀಡಿದರು ಜಿಲ್ಲಾ ಉಪಾಧ್ಯಕ್ಷರು ಕಲ್ಲಪ್ಪ ಹುನಸಿಗಿಡದ, ಮಹಾದೇವ ಕೆಳಗಡೆ, ನಂಜುಂಡಿಕುಮಾರ ಮೇತ್ರಿ, ಇನ್ನೂ ಅನೇಕ ಯುವಕರು, ಹಿರಿಯರು ಉಪಸ್ಥಿತರಿದ್ದರು ಸರ್ಕಾರವು
ಬಡವರ ಬಗ್ಗೆ ಕಣ್ಣುಮುಚ್ಚಿ ಕುಳಿತು ಕೊಂಡಿದೆ ಎಂದು ತೋರಿಸುತ್ತಿದೆ ನಮ್ಮ ಪ್ರಧಾನ ಮಂತ್ರಿಯವರು ಹರ್ ಘರ್ ತಿರಂಗಾ ಅಭಿಯಾನ ಚಾಲನೆ ನೀಡಿದರು ಆದರೆ ಅನೇಕ ಗ್ರಾಮೀಣ ಭಾಗದಲ್ಲಿ ವಾಸಮಾಡಲಿಕ್ಕೆ ಮನೆಯೇ ಇಲ್ಲ ಎಲ್ಲಿ ರಾಷ್ಟ್ರ ದ್ವಜ ಹಾರಿಸಬೇಕು…
ವರದಿ :-ಮಹಾಲಿಂಗ ಗಗ್ಗರಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
