ಸಂಗೀತದಿಂದ ಶಾಂತಿ, ನೆಮ್ಮದಿ ಸಿಗಲಿದೆ
ಕಲಬುರಗಿ,-ಇಂದಿನ ದಿನಗಳಲ್ಲಿ ಇರುವ ಹಲವು ಒತ್ತಡಗಳ ಮನಸ್ಸಿನ ನಿವಾರಣೆಗೆ ಸಂಗೀತದಿಂದ ಶಾಂತಿ, ನೆಮ್ಮದಿ ದೊರೆಯಲಿದೆ ಎಂದು ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಕಲಬುರಗಿ ವಲಯ ಜಂಟಿ ನಿರ್ದೇಶಕ ಕೆ.ಎಚ್. ಚೆನ್ನೂರ ಹೇಳಿದರು.
ಕಲಬುರಗಿ ಕಲಾ ಮಂಡಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಂಗೀತ ಎಂತಹ ಮನಸ್ಸುಗಳನ್ನೂ ಸಹ ತಲುಪಲಿದ್ದು, ಎಂತಹ ಬೇಸರ, ಕಷ್ಟಕರ ಸಮಯದಲ್ಲಿದ್ದರೂ ಸಹ ಒಂದು ಕ್ಷಣ ಸಂಗೀತವನ್ನು ಆಲಿಸಿದರೆ ಮನಸ್ಸು ಉಲ್ಲಸಿತಗೊಳ್ಳಲಿದೆ.
ಗಡಿನಾಡ ಸಂಗೀತ ಹಾಗೂ ವಿವಿದ್ಧೋದ್ದೇಶ ಸೇವಾ ಸಂಘ ಕಲಬುರಗಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಬೆಂಗಳೂರು ಇವುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ನಾದ ಸಂಗೀತೋತ್ಸವ ಕಾರ್ಯಕ್ರಮ ಶ್ಲಾಘನೀಯವಾಗಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ 6 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ಉದ್ದಿಮೆದಾರ ಗುರುರಾಜ್ ಬಿ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಲಬುರಗಿ ಮಹಾನಗರ ಪಾಲಿಕೆ ಸದಸ್ಯ ಸಚಿನ್ ಕಡಗಂಚಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಕಲಬುರಗಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ, ನಿವೃತ್ತ ವಾರ್ತಾ ಇಲಾಖೆಯ ಉಪನಿರ್ದೇಶಕ ಜಿ.ಚಂದ್ರಕಾಂತ, ಸತ್ಯಂ ಪಿ.ಯು. ಕಾಲೇಜಿನ ಪ್ರಾಂಶುಪಾಲ ಬಿ.ಎಚ್.ನಿರಗುಡಿ. ಕಲ್ಯಾಣ ಕಹಳೆ ಪತ್ರಿಕೆಯ ಸಂಪಾದಕ ಶರಣಗೌಡ ಪಾಟೀಲ ಪಾಳಾ, ಕನ್ನಡ ಸಾಹಿತ್ಯ ಪರಿಷತ್ತಿನ ಕಲಬುರಗಿ ಉತ್ತರ ವಲಯ ಅಧ್ಯಕ್ಷ ಪ್ರಭುಲಿಂಗ ಮೂಲಗೆ, ಖ್ಯಾತ ವೈದ್ಯ ಡಾ.ಅಮರೇಶ ಪತ್ತಾರ ಈ ಸಂದರ್ಭದಲ್ಲಿ ಹಾಜರಿದ್ದರು.
ಕಲಾವಿದರಾದ ರೇವಯ್ಯ ವಸ್ತ್ರದಮಠ, ಶಿವರುದ್ರಯ್ಯ ಗೌಡಗಾಂವ, ಅಣ್ಣಾರಾಯ ಮತ್ತಿಮಡು, ಬಾಬುರಾವ ಕೋಬಾಳಕರ್, ಗಣಪತರಾವ ಸಿಂಗಶೆಟ್ಟಿ, ಗುರುಲಿಂಗಯ್ಯ ವಾಡಿ, ಪ್ರಶಾಂತ ಗೋಲ್ಡಸ್ಮಿತ್, ರೇಣುಕಾ ಪ್ರವೀಣಕುಮಾರ, ಸಾವಿತ್ರಿ ಪತ್ತಾರ, ಶ್ರೀದೇವಿ ಶೆಳಕೆ, ಸಿದ್ದಣ್ಣ ದೇಸಾಯಿ ಕಲ್ಲೂರ, ಗುರುಶಾಂತಯ್ಯ ಸ್ಥಾವರಮಠ, ಲೋಕನಾಥ ಚಾಂಗಲೇರ್ ಹಾಗೂ ಅನೇಕ ಕಲಾವಿದರು ಸಂಗೀತ ಕಾರ್ಯಕ್ರಮ ನೀಡಿ ಪ್ರೇಕ್ಷಕರ ಗಮನ ಸೆಳೆದರು.
ಸಂಸ್ಥೆಯ ಅಧ್ಯಕ್ಷ ವೀರಭದ್ರಯ್ಯ ಸ್ಥಾವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು…

ವರದಿ. ಬಸಯ್ಯ ಹಿರೇಮಠ್. ಕಲಬುರ್ಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
