ಬಿಜೆಪಿ ದೇಶದ ರೈತರನ್ನು ಸಾಲದ ಸುಳಿಯಲ್ಲಿ ಸಿಲುಕಿಸಿದೆ – ಶರಣೇಗೌಡ ಬಯ್ಯಾಪೂರು
ಸಿಂಧನೂರು : ಆ.13. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ 5 ಲಕ್ಷ ಕೋಟಿ ಸಾಲಮನ್ನಾ ಮಾಡದೆ, 9.5.ಲಕ್ಷ ಕೋಟಿ ಕಾರ್ಪೋರೇಟರ್ ಕಂಪನಿಗಳ ಮಾಲೀಕರ ಸಾಲಮನ್ನಾ ಮಾಡಿ ದೇಶದ ಬೆನ್ನೆಲುಬು ರೈತರನ್ನು ಸಾಲದ ಸುಳಿಯಲ್ಲಿ ಸಿಲುಕುವಂತೆ ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಶರಣೇಗೌಡ ಬಯ್ಯಾಪೂರು ಹೇಳಿದರು.

ತಾಲೂಕಿನ ವಗರನಾಳದಿಂದ ಕುರುಕುಂದಾವರೆಗೆ ಕಾಂಗ್ರೆಸ್ ಪಕ್ಷದ ಪಾದಯಾತ್ರೆ ಕುರುಕುಂದಾ ಗ್ರಾಮದಲ್ಲಿ ಸಮಾರೋಪ ಸಮಾರಂಭದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.
ನರೇಂದ್ರ ಮೋದಿ ಸರ್ಕಾರ ಯುವಕರಿಗೆಉದ್ಯೋಗ ನೀಡುವಲ್ಲಿ ವಿಫಲವಾಗಿದೆ.15 ಲಕ್ಷ ಬಡವರಖಾತೆಗೆ ಹಣ ಜಮಾ ಮಾಡುತ್ತೇನೆ ಎಂದು ಸುಳ್ಳು ಭರವಸೆ ನೀಡಿ, ಬಿಜೆಪಿ ಸರಕಾರ ಜಾತಿ ಜಾತಿಗಳ ಮಧ್ಯೆ ಕೋಮು ಭಾವನೆಗಳನ್ನು ಬಿತ್ತಿ ಪ್ರಚೋದಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಹುಟ್ಟು ಹಾಕಿ ರಾಜಕೀಯ ಲಾಭ ಪಡೆದುಕೊಳ್ಳುತ್ತಿದೆ. ಸಭೆ ಸಮಾರಂಭಗಳಲ್ಲಿ ಮೋದಿ, ಮೋದಿ ಎಂದು ಜಪ ಮಾಡುವ ಭಕ್ತರು ಮನೆ ಸೇರಿದ್ದಾರೆ. ಬಿಜೆಪಿ ಸರ್ಕಾರ ಆರ್.ಎಸ್.ಎಸ್ ಕೈಗೊಂಬೆಯಾಗಿ ಕೆಲಸ ಮಾಡುತ್ತಿದೆ. ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ ಎಂದರು.
1835 ರಲ್ಲಿ ಸ್ಥಾಪನೆಗೊಂಡು ಇತಿಹಾಸವಿರುವ ಕಾಂಗ್ರೆಸ್ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಪ್ರಾಣ ತ್ಯಾಗ ಬಲಿದಾನ ಮಾಡಿದ್ದಾರೆ. ಕಾಂಗ್ರೆಸ್ ಹೋರಾಟದ ಇತಿಹಾಸ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಕಾಂಗ್ರೆಸ್ ಪಕ್ಷ ಜಲಾಶಯಗಳ ನಿರ್ಮಾಣ, ವಿಶ್ವ ವಿದ್ಯಾಲಯ, ಆಸ್ಪತ್ರೆಗಳು, ರಸ್ತೆ, ರೈಲು, ತಂತ್ರಜ್ಞಾನ, ಬ್ಯಾಂಕ್ ಗಳು ಸೇರಿದಂತೆ ಅನೇಕ ಸುಧಾರಣೆ ತಂದಿದೆ.ಕಾಂಗ್ರೆಸ್ ಕೊಡುಗೆಗಳ ಬಗ್ಗೆ ತಿಳಿದುಕೊಂಡು 2023 ರ ಚುನಾವಣೆಯಲ್ಲಿ ಬಿಜೆಪಿಯನ್ನು ಕಿತ್ತೆಸೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಿ, ಮಸ್ಕಿ ಕ್ಷೇತ್ರಕ್ಕೆ ಆರ್. ಬಸನಗೌಡ ತುರ್ವಿಹಾಳ ಮತ್ತೊಮ್ಮೆ ಗೆಲ್ಲಿಸಿ ಎಂದರು.
ಮಸ್ಕಿ ಶಾಸಕ ಆರ್ ಬಸನಗೌಡ ತುರುವಿಹಾಳ ಮಾತನಾಡಿ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ. ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆಯವರ ಆದೇಶದ ಮೇರೆಗೆ ಜಿಲ್ಲೆಯ ಕೊನೆಯ ದಿನವಾದ ಇಂದು ಮಸ್ಕಿ ಕ್ಷೇತ್ರದಲ್ಲಿ ಜಿಲ್ಲೆಯ ಪ್ರಮುಖ ನಾಯಕರೊಂದಿಗೆ 5 ಸಾವಿರ ಕಾರ್ಯಕರ್ತರೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿದಕ್ಕೆ ಧನ್ಯವಾದ ತಿಳಿಸಿದರು.

ಕಾಂಗ್ರೆಸ್ನ ಕೊಡುಗೆಗಳನ್ನು ಯುವ ಸಮುದಾಯಕ್ಕೆ ತಿಳಿಸಲು 75ನೇ ವರ್ಷದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಜಿಲ್ಲೆಗೆ 75 ಕೀ.ಮೀ ಪಾದಯಾತ್ರೆ ಹಮ್ಮಿಕೊಂಡಿದ್ದು ಮಸ್ಕಿ ತಾಲ್ಲೂಕಿನಲ್ಲಿ ಇಂದು ವಗರನಾಳ ಹೇಮರೆಡ್ಡಿ ಮಲ್ಲಮ್ಮ ದೇವಸ್ಥಾನದಿಂದ ಕುರುಕುಂದಾ ದವರೆಗೆ 16 ಕೀ. ಮೀ. ಪಾದಯಾತ್ರೆ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನ ಪಾಟೀಲ, ಹನುಮಂತಪ್ಪ ಮುದ್ದಾಪೂರು, ನಿರುಪಾದೆಪ್ಪ ಗುಡಿಹಾಳ ವಕೀಲರು, ಬಾಪುಗೌಡ, ಪಾರುಕ್ ಸಾಬ್, ಸಿದ್ದನಗೌಡ, ವೀರಭದ್ರಗೌಡ, ಗಂಗಮ್ಮ, ಅನ್ನಪೂರ್ಣ,ಮಹಾನಂದಿ, ಶರಣಮ್ಮ, ಬೇಗಂ ಸೇರಿದಂತೆ ಕಾಂಗ್ರೆಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
