ನರಸಿಂಹನಗಿರಿ ಕರಡಿ ದಾಳಿ: ವ್ಯಕ್ತಿಗೆ ಗಾಯ…
ಗುಡೇಕೋಟೆ: ಕೂಡ್ಲಿಗಿ ತಾಲೂಕಿನ ಗುಡೇಕೋಟೆ ಹೋಬಳಿ ವ್ಯಾಪ್ತಿಯ ನರಸಿಂಹನಗಿರಿ ಗ್ರಾಮದ ಹೊರವಲಯದಲ್ಲಿರುವ ಆಂಜನೇಯ ದೇವಸ್ಥಾನದ ಬಳಿ ಬೆಳಗಿನ 6.00 ಗಂಟೆ ಸುಮಾರಿಗೆ ಗ್ರಾಮದ ಕೇಶವಮೂರ್ತಿ (41) ಎಂಬ ವ್ಯಕ್ತಿಯೋರ್ವನಿಗೆ ಕರಡಿ ದಾಳಿ ಮಾಡಿದ್ದು ತೀವ್ರವಾಗಿ ಗಾಯಗೊಂಡಿರುವ ಈತನಿಗೆ ಕೂಡ್ಲಿಗಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಗಂಭಿರ ಗಾಯಗೊಂಡಿರುವ ಈತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
ಈತನು ಶುಕ್ರವಾರ ಬೆಳಿಗ್ಗೆ ಎಂದಿನಂತೆ ತನ್ನ ಹೊಲದ ಕಡೆ ಹೋಗುವ ದಾರಿಯಲ್ಲಿ ಅಡ್ಡ ಬಂದ ಒಂದು ಕರಡಿ ಈತನ ಮೇಲೆ ದಾಳಿ ಮಾಡಿವೆ ಎನ್ನಲಾಗಿದೆ. ಕರಡಿ ದಾಳಿಯಿಂದ ತಪ್ಪಿಸಿಕೊಂಡು ಹೋದ ಈತನನ್ನು ಗ್ರಾಮಸ್ಥರು ತಕ್ಷಣ ತಾಲೂಕು ಆಸ್ಪತ್ರೆಗೆ ತಂದು ದಾಖಲಿಸಿದ್ದಾರೆ.
ಕರಡಿಗಳ ದಾಳಿಯಿಂದ ಈತನ ತಲೆ, ಹೊಟ್ಟೆ ಭಾಗ, ಕೈ ಹಾಗೂ ಕಾಲುಗಳಿಗೆ ತೀವ್ರ ಗಾಯಗಳಾಗಿದೆ.ಸ್ಥಳಕ್ಕೆ ಗುಡೇಕೋಟೆ ಕರಡಿದಾಮದ ಸಹಾಯಕ ಅರಣ್ಯ ಅಧಿಕಾರಿ ರೇಣುಕಮ್ಮ ಹಾಗೂ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದಾರೆ…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
