;

ಭಾಗವಧ್ವಜ ಹಾರಿಸಿ ವಿಕೃತ ಮೆರೆದ ಸಚಿವ ಬಿ.ಸಿ.ನಾಗೇಶನ ಬಂದಿಸಿ -ಎಂ. ಗಂಗಾಧರ….!!!

ಭಾಗವಧ್ವಜ ಹಾರಿಸಿ ವಿಕೃತ ಮೆರೆದ ಸಚಿವ ಬಿ.ಸಿ.ನಾಗೇಶನ ಬಂದಿಸಿ -ಎಂ. ಗಂಗಾಧರ.

ಸಿಂಧನೂರು :ಅ. 11.ವಿಕೃತ ಮನಸ್ಸಿನ ಶಿಕ್ಷಣ ಸಚಿವನಾಗಲೂ ಯೋಗ್ಯವಲ್ಲದ ಬಿ.ಸಿ.ನಾಗೇಶ ಹರ್ ಘರ್ ತಿರಂಗ ಅಭಿಯಾನದಲ್ಲಿ ರಾಷ್ಟ್ರ ಧ್ವಜದ ಮೇಲೆ ಭಾಗವಧ್ವಜ ಹಾರಿಸಿ ವಿಕೃತ ಹಿಂದುತ್ವವಾದ, ಮನೋಭಾವನೆಯನ್ನು ವ್ಯಕ್ತಪಡಿಸಿದ ಇವನನ್ನು ದೇಶ ಭಕ್ತರೆಂದು ಹೇಳುವ ಪ್ರಧಾನಿ ಮೋದಿ, ಮುಖ್ಯಮಂತ್ರಿ ಬೊಮ್ಮಾಯಿ ತಕ್ಷಣವೇ ಇವನನ್ನು ಬಂಧಿಸಿ, ಸಚಿವ ಸ್ಥಾನದಿಂದ ವಜಾಗೊಳಿಸಿ, ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದ ಅಡಿಯಲ್ಲಿ ಬಂಧಿಸಿ, ಶಾಸಕ ಸ್ಥಾನದಿಂದಲೇ ವಜಾಗೊಳಿಸಿ, ದೇಶದಿಂದ ಗಡಿಪಾರು ಮಾಡಲು ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸರ್ಕಾರಕ್ಕೆ ಆಗ್ರಹಿಸಿದರು.

ಸರಕಾರವು ಜನ ಸಾಮಾನ್ಯರ ಪರವಾಗಿ ಯಾವುದೇ ಯೋಜನೆ ಜಾರಿ ಮಾಡುವಲ್ಲಿ ಸಂಪೂರ್ಣ ವಿಫಲವಾದರೂ ಬೆಲೆ ಏರಿಕೆ, ಉದ್ಯೋಗ, ಆದಿವಾಸಿ,ದಲಿತ, ರೈತ-ಕಾರ್ಮಿಕ, ಮಹಿಳೆ, ಅಲ್ಪಸಂಖ್ಯಾತರ ಸಾರ್ವತ್ರಿಕ ಹಕ್ಕು ನಿತ್ಯ ದಮನವಾಗುತ್ತಿದ್ದರೂ ಸರಕಾರದ ಆದೇಶದನ್ವಯ ಇಡೀ ದೇಶದ ಜನತೆ “ಏನಾದರೂ ಸರಿ, ಏನೀಲ್ಲದಿದ್ದರೂ ಸರಿ” ದೇಶ ಮುಖ್ಯವೆಂದು ಅಮೃತ ಮಹೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಬೇಕೆಂದು ಹರ್ ಘರ್ ತಿರಂಗದಲ್ಲಿ ಸ್ವಯಂ ಪ್ರೇರಿತವಾಗಿ, ಭಾಗವಹಿಸಲು ಮಾನಸಿಕವಾಗಿ ಸದೃಡಗೊಂಡು ದೇಶಪ್ರೇಮವನ್ನು ಸಾರಲು ಸೈನಿಕರಂತೆ ಸನ್ನದ್ದರಾಗಿದ್ದಾರೆ.

ತಪ್ಪಿದಲ್ಲಿ ರಾಜ್ಯಾದ್ಯಂತ ಮುಖ್ಯಮಂತ್ರಿ ಕಂಡಲ್ಲಿ ಘೇರಾವ್ ಹಾಕಿ ಉಗ್ರ ಸ್ವರೂಪದಲ್ಲಿ ದೇಶಪ್ರೇಮಿಗಳೊಂದಿಗೆ ಜೊತೆಗೂಡಿ ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಸಿಪಿಐ(ಎಂಎಲ್)ರೆಡ್ ಸ್ಟಾರ್ ರಾಜ್ಯ ಸಮಿತಿ ಸದಸ್ಯ ಎಂ.ಗಂಗಾಧರ ಪತ್ರಿಕೆ ಹೇಳಿಕೆ ನೀಡಿದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;