;

ಆಗಸ್ಟ್‌ 12 ರಂದು ದಿದ್ದಿಗಿ ಗ್ರಾಮದಿಂದ ಕಾಂಗ್ರೆಸ್ ನಿಂದ ಪಾದಯಾತ್ರೆ – ಹಂಪನಗೌಡ ಬಾದರ್ಲಿ…!!!

ಆಗಸ್ಟ್‌ 12 ರಂದು ದಿದ್ದಿಗಿ ಗ್ರಾಮದಿಂದ ಕಾಂಗ್ರೆಸ್ ನಿಂದ ಪಾದಯಾತ್ರೆ – ಹಂಪನಗೌಡ ಬಾದರ್ಲಿ.

ಸಿಂಧನೂರು : ಅ.10.ಕರ್ನಾಟಕ ಪ್ರದೇಶ ಕಾಂಗ್ರೆಸ ಪಕ್ಷದ ಸಮಿತಿಯ ಆದೇಶದ ಮೆರೆಗೆ “ಕಾಂಗ್ರೆಸ್ ನಡಿಗೆ ಜನರ ಕಡೆಗೆ” ಎಂಬ ಚಿಂತನೆಯೊಂದಿಗೆ, 75 ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಅಮೃತ ಮಹೋತ್ಸವದ ಪಾದಯಾತ್ರೆಯನ್ನು ಅಗಸ್ಟ್ 12 ರಂದು ದಿದ್ದಗಿ ಗ್ರಾಮದಿಂದ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹಂಪನಗೌಡ ಬಾದರ್ಲಿ ತಿಳಿಸಿದರು.

ತಮ್ಮ ನಿವಾಸದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಗಸ್ಟ್ 12 ರಂದು ಬೆಳಿಗ್ಗೆ 8 ಗಂಟೆಗೆ ತಾಲ್ಲೂಕಿನ ದಿದ್ದಗಿಯಿಂದ ರಾಘಲಪರ್ವಿ ಬನ್ನಿಗನೂರು ವರೆಗೂ ನಗರ ಮತ್ತು ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ವತಿಯಿಂದ 16 ಕಿ.ಮೀ. ಗ್ರಾಮದವರೆಗೆ ಹಮ್ಮಿಕೊಂಡಿದ್ದು ಈ ಪಾದಯಾತ್ರೆಯಲ್ಲಿ ರಾಜ್ಯದ ಕಾಂಗ್ರೆಸ್ ಪಕ್ಷದ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪಕ್ಷದ ಜಿಲ್ಲಾ ಅಧ್ಯಕ್ಷರಾದ ಬಿ.ವಿ ನಾಯಕ್ ಹಾಗೂ ಜಿಲ್ಲಾ ನಾಯಕರುಗಳು ಆಗಮಿಸಲಿದ್ದು ಈ ಪಾದಯಾತ್ರೆಯಲ್ಲಿ ತಾಲ್ಲೂಕಿನ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು, ಅಸಂಖ್ಯಾತ ನಾಗರೀಕರು, ರೈತ ಬಾಂಧವರು, ವಿವಿಧ ಮುಂಚೂಣಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಯುವ ಮಿತ್ರರು ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.

ಹಾಗೂ ಆಗಸ್ಟ್ 12 ರಂದು ರಾಖಿ ಹಬ್ಬದ ಪ್ರಯುಕ್ತ 75 ಸಹೋದರಿಯರಿಂದ 75 ಜನ ಸಹೋದರರಿಗೆ, ರಾಖಿ ಕಟ್ಟಿಸಿ, ಅಣ್ಣ ತಂಗಿ, ಅಕ್ಕ ತಮ್ಮ, ಸಂಬಂಧ ಗಟ್ಟಿಯಾಗಿಸುವ ಮೂಲಕ ಪಾದಯಾತ್ರೆ ಕೈಗೊಂಡಿದ್ದೇವೆ.ಇದರ ಜೊತೆಗೆ ವಾದ್ಯ ಮೇಳಗಳು, ಜೋಡೆತ್ತುಗಳು, ಹಾಗೂ 75 ಮಹಿಳೆಯರಿಂದ ಕುಂಭ, 75 ಮಹಿಳೆಯರಿಂದ ಆರತಿಗಳು, ಈ ಪಾದಯಾತ್ರೆಯಲ್ಲಿ ಸರಿ ಸುಮಾರು 4 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಹೀಗೆ ಹತ್ತು ಹಲವಾರು ಯೋಜನೆಗಳ ಜೊತೆಗೆ ಪಾದಯಾತ್ರೆಯನ್ನ ಭಾರಿ ವಿಜೃಂಭಣೆಯಿಂದ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್,ಮಾಜಿ ಅಧ್ಯಕ್ಷ ಜಾಪರ್ ಜಾಹಗೀರ್ ದಾರ್, ಕಾಂಗ್ರೆಸ್ ಮುಖಂಡರಾದ ಖಾಜಿ ಮಲ್ಲಿಕ್, ಬಸವರಾಜ ಹಿರೇಗೌಡರು, ಅನಿಲ್ ಕುಮಾರ, ಮುರ್ತುಜಾ ಹುಸೇನ್, ಲಿಂಗಪ್ಪ ಧಡೇಸ್ಗೂರು, ಮುನೀರ್ ಪಾಷಾ ಸೇರಿದಂತೆ ಕಾಂಗ್ರೆಸಿನ ಪದಾಧಿಕಾರಿಗಳು, ಕಾರ್ಯಕರ್ತರು, ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;