ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಚಿತಾಬಸ್ಮಕ್ಕೆ ವಿನಯ್ ಗುರೂಜಿ ಬೇಟಿ!! ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಮಹಾತ್ಮ ಗಾಂಧೀಜಿಯವರ ಚಿತಾಬಸ್ಮಕ್ಕೆ ಆಧ್ಯಾತ್ಮಿಕ ಗುರು ವಿನಯ್ ಗುರೂಜಿ ಇಂದು ಭೇಟಿ ನೀಡಿ ಗೌರವ ಸಮರ್ಪಣೆ ಸಲ್ಲಿಸಿದರು ತದನಂತರ ಮಾತನಾಡಿದ ಗುರೂಜಿಯವರು ಕರ್ನಾಟಕ ರಾಜ್ಯದ ಕೂಡ್ಲಿಗಿಯಲ್ಲಿ ಮಹಾತ್ಮ ಗಾಂಧೀಜಿಯವರ ಚಿತಾಬಸ್ಮವಿರುವುದು ಅತ್ಯಂತ ಹೆಮ್ಮೆಯ ಸಂಗತಿ ಎಂದು ತಿಳಿಸಿದರು ಇದೇ ಸಂದರ್ಭದಲ್ಲಿ ವಿನಯ್ ಗುರೂಜಿಯವರಿಗೆ ಸ್ವಾಗತಿಸಿದ ತಾಲೂಕಿನ ಬಿ.ಜೆ.ಪಿ ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಬಂಗಾರ ಹನುಮಂತು ಸ್ವಾಗತಿಸಿದರು. ಮತ್ತು ಸಿ.ಪಿ.ಐ ವಸಂತ ಅಸೂದೇ ಸರ್ ರವರು ವಿನಯ್ ಗುರೂಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು , ಇದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಗುಳಿಗೆ ವೀರೇಂದ್ರ, ಜೆ ಸಿ ಐ ಕಾಟನ್ ಅಧ್ಯಕ್ಷ ಅಕ್ಕಿ ಶಿವಕುಮಾರ್ ಮತ್ತು ಮಾಜಿ ಜೆಸಿಐ ಅಧ್ಯಕ್ಷ ಸಂದೀಪ್ ರಾಯಸಂ, ವರ್ತಕರಾದ ರಾಮಣ್ಣ ಶೆಟ್ರು ಮುಸ್ಲಿಂ ಸಮಾಜದ ಜಿಲಾನ್ , ಗುರಿಕಾರ ರಾಘವೇಂದ್ರ ಇನ್ನು ಅನೇಕ ಮುಖಂಡರುಗಳು ವಿನಯ್ ಗುರೂಜಿಯವರಿಗೆ ಅತ್ಯಂತ ಸಂತೋಷದಿಂದ ಪಟ್ಟಣಕ್ಕೆ ಸ್ವಾಗತಿಸಿದರು ಇದೇ ಸಂದರ್ಭದಲ್ಲಿ ಕೂಡ್ಲಿಗಿ ಪಟ್ಟಣದ ಮುಖಂಡರುಗಳು ಉಪಸ್ಥಿತರಿದ್ದರು..

ವರದಿ.ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
