;

ಅಕ್ರಮ ಪಡಿತರ ಅಕ್ಕಿ ಸಾಗಾಟ ಜಪ್ತಿ…!!!

ಅಕ್ರಮ ಪಡಿತರ ಅಕ್ಕಿ ಸಾಗಾಟ ಜಪ್ತಿ,

ಸಿಂಧನೂರು : ಅಗಸ್ಟ್ 6. ಅನಧಿಕೃತವಾಗಿ ಪಡಿತರ ಅಕ್ಕಿಯನ್ನು ಲೋಡ್ ಮಾಡಿಕೊಂಡು ಕಾಳ ಸಂತೆಯಲ್ಲಿ ಮಾರಾಟ ಮಾಡಲು ಹೊರಟ ಲಾರಿಯನ್ನು ಪೋಲಿಸ್ ರು ಹಿಡಿದು ಜಪ್ತಿ ಮಾಡಿದ್ದಾರೆ.

ಸಿರುಗುಪ್ಪ ರಸ್ತೆಯ ಕಡೆಯಿಂದ ಸಿಂಧನೂರು ಕಡೆಗೆ ಶುಕ್ರವಾರ ರಾತ್ರಿ 8-30 ಗಂಟೆಗೆ ಸುಮಾರಿಗೆ ಲಾರಿ ನಂಬರ RJ-91-GF-1207 ರಲ್ಲಿ, ಅಂದಾಜು 6 ಲಕ್ಷ 50 ಸಾವಿರ ರೂಪಾಯಿ ಬೆಲೆಬಾಳುವ 50 ಕೆಜಿ ತೂಕದ ಪಡಿತರ ಅಕ್ಕಿ ಬಾಯಿ ತುಂಬಿ ಕಟ್ಟಿದ 603 ಪ್ಲಾಸ್ಟಿಕ ಚೀಲದ ಮೂಟೆಗಳನ್ನು ತುಂಬಿಕೊಂಡು ಬರುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಸಿಂಧನೂರು ಬಳ್ಳಾರಿ ಮುಖ್ಯ ರಸ್ತೆಯ ದಡೇಸೂಗೂರು ಐಬಿ ಮುಂದೆ ರಾತ್ರಿ 10-00 ಗಂಟೆಗೆ ದಾಳಿ ಮಾಡಿ ಅಕ್ಕಿ ಮೂಟೆಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ಹನುಮೇಶ ನಾಯಕ ಆಹಾರ ನಿರೀಕ್ಷಕರು, ಗ್ರಾಮೀಣ ಪಿಎಸ್ಐ ಯರಿಯಪ್ಪ ಸಿಬ್ಬಂದಿಗಳು ಇದ್ದರು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಗುನ್ನೆ ನಂಬರ 147/2022, ಕಲಂ, 3, 7, ಇ, ಸಿ, ಕಾಯ್ದೆ ಅಡಿಯಲ್ಲಿ, ಪ್ರಕರಣದ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;