ಸಂಗೀತ ಸ್ವಾದದಿಂದ ಮನಸ್ಸಿಗೆ ನೆಮ್ಮದಿ -ಡಿ. ಕೃಷ್ಣಪ್ಪ
ಕೂಡ್ಲಿಗಿ : ಸಂಗೀತವನ್ನು ಆಲಿಸುವುದರಿಂದ ಮನಸ್ಸು ತಿಳಿ ಗೊಂಡು ನೆಮ್ಮದಿ ಸಿಗುತ್ತದೆಯೆಂದು ಮುಖ್ಯ ಶಿಕ್ಷಕ ಡಿ. ಕೃಷ್ಣಪ್ಪ ನುಡಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೂಡ್ಲಿಗಿ ತಾಲೂಕು ವಿಶ್ವಕರ್ಮ ಸಮಾಜ ಇವರ ಸಹಯೋಗದಲ್ಲಿ ಕುಪ್ಪಿನಕೆರೆ ಸ, ಹಿ, ಪ್ರಾ, ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪೊಲೀಸ್ ಸ್ವರೂಪನಂದ ಮಾತನಾಡಿ ನಾಡಿನ ಸಂಸ್ಕೃತಿಯ ಪ್ರತೀಕವಾದ ನಾನಾ ಕಲೆಗಳಲ್ಲಿ ಸಂಗೀತ ಕಲೆ ಅದೊಂದು ಅದ್ಭುತ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಕೇವಲ ಆಟ ಪಾಠಕ್ಕೆ ಸೀಮಿತರಾಗದೆ ಸಂಗೀತವನ್ನು ಕಲಿಯುವುದರೊಂದಿಗೆ ಕಲೆಯನ್ನುಹಾಗೂ ಕಲಾವಿದರನ್ನು ಗೌರವಿಸಬೇಕು. ಎಂದರು.
ಕರ್ನಾಟಕ ಪತ್ರಕರ್ತರಸಂಘದ ವಿಜಯನಗರ ಜಿಲ್ಲಾ ಗೌರವಾಧ್ಯಕ್ಷ ಡಿ, ಎಂ, ಈಶ್ವರಪ್ಪ ಸಿದ್ದಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಸುಗಮ ಸಂಗೀತ ಗಾಯನವನ್ನು ಕೆ, ಶಂಕರ್ ಪ್ರಸ್ತುತಪಡಿಸಿದರು. ಇವರೊಂದಿಗೆ ತಬಲಾ ಚೆನ್ನವೀರಸ್ವಾಮಿ, ಹಾರ್ಮೋನಿಯಂ ಶಿವಮೂರ್ತಿ ಆಚಾರ್ ಸಾಸಲವಾಡ ಇವರು ಸಾಥ್ ನೀಡಿದರು.. ಬಡಿಗೇರ್ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡ ಸಿ, ನಾಗರಾಜ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಧರ ಮಿತ್ರ, ಪತ್ರಕರ್ತ ಹೂಡೆಮ್ ಮಂಜುನಾಥ, ಆನಂದಬಾಬು ಶೆಟ್ರು, ವಿಭೂತಿ ವೀರಣ್ಣ, ಎ, ತಿಂದಪ್ಪ,ಗ್ರಾಮ ಪಂಚಾಯತ್ ಸದಸ್ಯ ವೀರೇಶ್, ಗ್ರಾಮಸ್ಥರಾದ ಮರಿಯಪ್ಪ, ಮಲ್ಲಪ್ಪ, ನಾಗಪ್ಪ, ಏಳೂರಪ್ಪ, ಸೇರಿದಂತೆ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು.ಸಂಗೀತ ಸ್ವಾದದಿಂದ ಮನಸ್ಸಿಗೆ ನೆಮ್ಮದಿ -ಡಿ. ಕೃಷ್ಣಪ್ಪ
ಕೂಡ್ಲಿಗಿ : ಸಂಗೀತವನ್ನು ಆಲಿಸುವುದರಿಂದ ಮನಸ್ಸು ತಿಳಿ ಗೊಂಡು ನೆಮ್ಮದಿ ಸಿಗುತ್ತದೆಯೆಂದು ಮುಖ್ಯ ಶಿಕ್ಷಕ ಡಿ. ಕೃಷ್ಣಪ್ಪ ನುಡಿದರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೂಡ್ಲಿಗಿ ತಾಲೂಕು ವಿಶ್ವಕರ್ಮ ಸಮಾಜ ಇವರ ಸಹಯೋಗದಲ್ಲಿ ಕುಪ್ಪಿನಕೆರೆ ಸ, ಹಿ, ಪ್ರಾ, ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಸುಗಮ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪೊಲೀಸ್ ಸ್ವರೂಪನಂದ ಮಾತನಾಡಿ ನಾಡಿನ ಸಂಸ್ಕೃತಿಯ ಪ್ರತೀಕವಾದ ನಾನಾ ಕಲೆಗಳಲ್ಲಿ ಸಂಗೀತ ಕಲೆ ಅದೊಂದು ಅದ್ಭುತ ಶಕ್ತಿಯಾಗಿದೆ. ವಿದ್ಯಾರ್ಥಿಗಳು ಕೇವಲ ಆಟ ಪಾಠಕ್ಕೆ ಸೀಮಿತರಾಗದೆ ಸಂಗೀತವನ್ನು ಕಲಿಯುವುದರೊಂದಿಗೆ ಕಲೆಯನ್ನುಹಾಗೂ ಕಲಾವಿದರನ್ನು ಗೌರವಿಸಬೇಕು. ಎಂದರು.
ಕರ್ನಾಟಕ ಪತ್ರಕರ್ತರಸಂಘದ ವಿಜಯನಗರ ಜಿಲ್ಲಾ ಗೌರವಾಧ್ಯಕ್ಷ ಡಿ, ಎಂ, ಈಶ್ವರಪ್ಪ ಸಿದ್ದಾಪುರ ಕಾರ್ಯಕ್ರಮ ಉದ್ಘಾಟಿಸಿದರು. ಸುಗಮ ಸಂಗೀತ ಗಾಯನವನ್ನು ಕೆ, ಶಂಕರ್ ಪ್ರಸ್ತುತಪಡಿಸಿದರು. ಇವರೊಂದಿಗೆ ತಬಲಾ ಚೆನ್ನವೀರಸ್ವಾಮಿ, ಹಾರ್ಮೋನಿಯಂ ಶಿವಮೂರ್ತಿ ಆಚಾರ್ ಸಾಸಲವಾಡ ಇವರು ಸಾಥ್ ನೀಡಿದರು.. ಬಡಿಗೇರ್ ನಾಗರಾಜ್ ಕಾರ್ಯಕ್ರಮ ನಿರ್ವಹಿಸಿದರು.ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಮುಖಂಡ ಸಿ, ನಾಗರಾಜ ಎಸ್ ಡಿ ಎಂ ಸಿ ಅಧ್ಯಕ್ಷ ಶ್ರೀಧರ ಮಿತ್ರ, ಪತ್ರಕರ್ತ ಹೂಡೆಮ್ ಮಂಜುನಾಥ, ಆನಂದಬಾಬು ಶೆಟ್ರು, ವಿಭೂತಿ ವೀರಣ್ಣ, ಎ, ತಿಂದಪ್ಪ,ಗ್ರಾಮ ಪಂಚಾಯತ್ ಸದಸ್ಯ ವೀರೇಶ್, ಗ್ರಾಮಸ್ಥರಾದ ಮರಿಯಪ್ಪ, ಮಲ್ಲಪ್ಪ, ನಾಗಪ್ಪ, ಏಳೂರಪ್ಪ, ಸೇರಿದಂತೆ ಶಾಲಾ ಸಿಬ್ಬಂದಿಗಳು, ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
