ವಿಜಯನಗರ ಜಿಲ್ಲೆ ಕೂಡ್ಲಿಗಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಎನ್ ವೈ ಗೋಪಾಲಕೃಷ್ಣರವರು ವಿವಿಧ ಕಾಮಗಾರಿಗಳ ಭೂಮಿಪೂಜೆ ನೆರವೇರಿಸಿದರು.ಸಮಾಜ ಕಲ್ಯಾಣ ಇಲಾಖೆಯ 2021 22ನೇ ಸಾಲಿನ ಪ್ರಗತಿ ಕಾಲೋನಿ ಯೋಜನೆ ಅಡಿ 3 ಕೋಟಿ ವೆಚ್ಚದ 78 ಗ್ರಾಮಗಳಲ್ಲಿ ಐ ಮಾಸ್ಕ್ ಲೈಟ್ ದೀಪ ಅಳವಡಿಸುವ ಕಾಮಗಾರಿಗಳ ಭೂಮಿ ಪೂಜೆಯನ್ನು ರಾಯಪುರ,
ಡಿ. ಸಿದ್ದಾಪುರ, ಅಪ್ಪಯ್ಯನ ಹಳ್ಳಿ ತಾಂಡ ಗಳಲ್ಲಿ ನೆರವೇರಿಸಲಾಯಿತು* ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರವಿಕುಮಾರ್, ಕೆ ಆರ್ ಐ ಡಿ ಎಲ್ AEE ಶಂಕರ ನಾಯಕ, ಪಂಚಾಯತ್ ರಾಜ್ ಇಂಜಿನಿಯರಿಂಗ್ AEE ಮಲ್ಲಿಕಾರ್ಜುನ, PWD AE ನಾಗನಗೌಡ, ಸಮಾಜ ಕಲ್ಯಾಣ ಅಧಿಕಾರಿ ಜಗದೀಶ್ ,BDCC ಬ್ಯಾಂಕ್ ಉಪಾಧ್ಯಕ್ಷರಾದ ಕೆ ತಿಪ್ಪೇಸ್ವಾಮಿ ಬಿಜೆಪಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೂರ್ಯ ಪಾಪಣ್ಣ, ಬಿಜೆಪಿಯ ಮುಖಂಡರುಗಳಾದ ವೆಂಕಟಸ್ವಾಮಿ ಪ್ರಾಣೇಶ್ ಆಚಾರ್, ಶ್ರೀಧರ ನಾಯ್ಕ ಧರ್ಮೇಂದ್ರ ನಾಯ್ಕ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಪಾಪನಾಯಕ ,ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ಸದಸ್ಯರು, ಗುತ್ತಿಗೆದಾರರಾದ ರಾಘವೇಂದ್ರ, ಇಸ್ಮಾಯಿಲ್, ಖಾದರ್ ಹಾಗೂ ಗ್ರಾಮದ ಮುಖಂಡರುಗಳು ಉಪಸ್ಥಿತರಿದ್ದರು…

ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
