ಹರಿಯುವ ಹಳ್ಳದಲ್ಲಿ ಟ್ರ್ಯಾಕ್ಟರ್ ಓಡಿಸಿದ ಭೂಪ.
ಸಿಂಧನೂರು : ಆಗಸ್ಟ್ 4. ತಾಲೂಕಿನ ಕುರುಕುಂದಾ ಗ್ರಾಮದ ಹತ್ತಿರ ಇರುವ ಹರಿಯುವ ಕುಂಬಾರ ಹಳ್ಳದಲ್ಲಿ ಪ್ರಾಣದ ಹಂಗು ತೊರೆದು ಟ್ರ್ಯಾಕ್ಟರ್ ಓಡಿಸಿದ ಘಟನೆ ನಡೆದಿದೆ.
ಎರಡೂ ದಿನಗಳಿಂದ ತಾಲೂಕಿನಾದ್ಯಂತ ಸುರಿಯುತ್ತಿರುವ ಬಾರಿ ಮಳೆಯಿಂದ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು,ಇಂದು ಮಳೆಯ ಪ್ರಮಾಣ ಕಡಿಮೆಯಾಗಿದ್ದು ಹಳ್ಳದಲ್ಲಿ ಐದರಿಂದ ಆರು ಅಡಿ ನೀರು ಹರಿಯುವ ಸಂಧರ್ಭದಲ್ಲಿ ಜೀವದ ಹಂಗು ತೊರೆದು ಗ್ರಾಮದಿಂದ ತಮ್ಮ ಜಮೀನಿಗೆ ಸಸಿ ತೆಗೆದುಕೊಂಡು ಬರಲು ಅವಸರವಾಗಿ ಟ್ರ್ಯಾಕ್ಟರ್ ನ್ನು ನಿರ್ಲಕ್ಷ್ಯತನದಿಂದ ದಾಟಿಸಿದ್ದಾನೆ. ಸ್ವಲ್ಪ ಯಾಮಾರಿದರೂ ಟ್ರ್ಯಾಕ್ಟರ್ ನಲ್ಲಿರುವ ಡ್ರೈವರ್ ಸೇರಿದಂತೆ ನಾಲ್ಕು ಜನ ನೀರು ಪಾಲಾಗುತ್ತಿರುವುದು ತಪ್ಪಿದೆ.

ಬಾರಿ ಮಳೆಯಿಂದ ಹಲವು ಕಡೆಗಳಲ್ಲಿ ಜಮೀನುಗಳಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿವೆ. ಅಲ್ಲಲ್ಲಿ ಮನೆಗಳು ಕೂಡಾ ಕುಸಿದಿವೆ. ಇನ್ನೂ ಮುಂದೆಯಾದರೂ ಇಂತಹ ಕಡೆಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಜನರು ಇಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು, ಜಾಗೃತಿಗೊಳ್ಳಬೇಕಾಗಿದೆ…
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
