ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಗೆಲುವು, ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ.
ಸಿಂಧನೂರು : ಜುಲೈ 22. ರಾಷ್ಟ್ರಪತಿ ಚುನಾವಣೆಯಲ್ಲಿ ಬುಡಕಟ್ಟು ಜನಾಂಗದ ಮಹಿಳಾ 15 ನೇ ರಾಷ್ಟ್ರಪತಿಯಾಗಿ ಎನ್ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ವಿಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ವಿರುದ್ಧ ಭಾರೀ ಅಂತರದಲ್ಲಿ ಜಯ ಗಳಿಸಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿ ವೃತ್ತದ ಬಳಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭಮಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ಎನ್. ಶಿವನಗೌಡ ಗೋರೆಬಾಳ, ನಗರ ಯೋಜನೆ ಪ್ರಾಧಿಕಾರ ಅಧ್ಯಕ್ಷ ಮದ್ವರಾಜ ಆಚಾರ್ಯ, ನಗರ ಮಂಡಳ ಅಧ್ಯಕ್ಷ ನೀರುಪಾದಿ ಜೋಳದರಾಶಿ, ಗ್ರಾಮೀಣ ಮಂಡಳ ಅಧ್ಯಕ್ಷ ಹನುಮೇಶ ಸಾಲುಗುಂದಾ, ನಗರಸಭೆ ಸದಸ್ಯರಾದ ಜಯಶ್ರೀ ರಡ್ಡಿ, ಕಿಶನ್ ರಾವ್, ಶರಣು ಹಿರೇಮಠ, ಪ್ರೇಮಾ ಸಿದ್ದಾಂತಿಮಠ, ಷಣ್ಮುಗಂ ಆರ್. ಎಚ್, ಸಂಗನಗೌಡ ದೇವರಗುಡಿ, ಮಮತಾ ಹಿರೇಮಠ, ಇನ್ನೂ ಅನೇಕರು ಇದ್ದರು…

ವರದಿ, ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
