;

ಬಣವಿಕಲ್ಲು:-ಬಾಲಕರು ಹಾಗೂ ಬಾಲಕೀಯರ ಮೇಲುಗೈ ,..!!!

ಬಣವಿಕಲ್ಲು:-ಬಾಲಕರು ಹಾಗೂ ಬಾಲಕೀಯರ ಮೇಲುಗೈ , ದಿನಾಂಕ 18-7-22ರ ಸೋಮವಾರ ನಡೆದ ವಲಯ ಮಟ್ಟದ ಕ್ರೀಡಾಕೂಟ ತಾಲೂಕಿನ ಕೂಡ್ಲಿಗಿ ಪಟ್ಟಣದ ಕ್ರೀಡಾಂಗಣದಲ್ಲಿ ನಡೆದ ಸರ್ಕಾರಿ ಹಿರಿಯ ಮತ್ತು ಪ್ರಾಥಮಿಕ ಶಾಲೆಗಳ ಕ್ರೀಡಾಕೂಟವು ಜರುಗಿತು ಈ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಬಣವಿಕಲ್ಲು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬಾಲಕರು ಮತ್ತು ಬಾಲಕಿಯರು ಸಮನಾಗಿ ಮೊದಲ ಸ್ಥಾನದಲ್ಲಿ ಬಾಲಕೀಯರು ಕಬ್ಬಡಿ ಪಂದ್ಯಾವಳಿಯಲ್ಲಿ ಪೈನಲ್ ನಲ್ಲಿ ಗೆದ್ದು ಮೊದಲ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ, ಇದರಂತೆ ಬಾಲಕರು ಕೂಡ ಖೋಖೋ ಆಟದಲ್ಲಿ ಮೊದಲ ಸ್ಥಾನ ಪಡೆದು ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿ ಇಡೀ ತಾಲೂಕಿಗೆ ಮತ್ತು ಬಣವಿಕಲ್ಲು ಗ್ರಾಮದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗ್ರಾಮಕ್ಕೆ ಕೀರ್ತಿ ಪತಾಕೆಯನ್ನು ಹಾರಿಸಿದ ಹೆಗ್ಗಳಿಕೆಗೆ ವಿದ್ಯಾರ್ಥಿ ವಿದ್ಯಾರ್ಥಿನಿಯರು ಪಾತ್ರರಾದರು, ಇದೇ ಸಂದರ್ಭದಲ್ಲಿ ಆಟಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಯಾರಿ ನಡೆಸಿದ ದೈಹಿಕ ಶಿಕ್ಷಕರಿಗೆ ಪ್ರೋತ್ಸಾಹಿಸಿ ಈ ಕ್ರೀಡಾಕೂಟದಲ್ಲಿ ಸಾಧನೆ ಮಾಡಲು ಶಾಲೆಯ ಮುಖ್ಯ ಶಿಕ್ಷಕರು ಹಾಗೂ ಸಹಶಿಕ್ಷಕರು ಸಹಕಾರಿಯಾಗಿದೆ ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾದ ಕೆ.ತಿಪ್ಪೇಸ್ವಾಮಿ, ಮತ್ತು ದೈಹಿಕ ಶಿಕ್ಷಕ ಜಿ. ಕರಿಬಸವನಗೌಡ, ಸಹಶಿಕ್ಷಕಿ ಓ.ಬಸಮ್ಮ ಹಾಗೂ ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರಾದ ಕೆ ಕೊಟ್ರೇಶ್ ಗೌಡ, ಉಪಸ್ಥಿತರಿದ್ದರು..

ವರದಿ. ಬಸಪ್ಪ ಬಣವಿಕಲ್ಲು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;