;

ಪುಲಮೇಶ್ವರ ದಿನ್ನಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ….!!!

ಪುಲಮೇಶ್ವರ ದಿನ್ನಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮ.

ಸಿಂಧನೂರು. ಜುಲೈ. 16 ರಾಜ್ಯ ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ಗ್ರಾಮದ ಸಮಸ್ಯೆ ಗ್ರಾಮದಲ್ಲಿ ಪರಿಹರಿಸಲು ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಪುಲಮೇಶ್ವರ ದಿನ್ನಿ ಗ್ರಾಮದಲ್ಲಿ ಯಶಸ್ವಿಯಾಗಿ ನಡೆಯಿತು.

ತಾಲೂಕಿನ ಹೆಡಗಿನಾಳ ಹೋಬಳಿಯ ಪುಲಮೇಶ್ವರ ದಿನ್ನಿ ಗ್ರಾಮದಲ್ಲಿ ಕಂದಾಯ ಇಲಾಖೆ, ಜಿಲ್ಲಾಡಳಿತ, ತಾಲೂಕ ಆಡಳಿತ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಾಲೂಕ ದಂಡಾಧಿಕಾರಿಗಳಾದ ಅರುಣ್.ಎಚ್ ದೇಸಾಯಿ ತಹಶೀಲ್ದಾರ ಕಚೇರಿ,ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಜನರ ಅಲೆದಾಟ ತಪ್ಪಿಸಲು ಸರಕಾರ ಹಳ್ಳಿಗಳಲ್ಲಿ ತಿಂಗಳದ 3 ನೇ ಶನಿವಾರದಂದು ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ತಾಲೂಕು ಮಟ್ಟದ ವಿವಿಧ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದು ಜನರ ಸಮಸ್ಯೆಗಳನ್ನು ಸ್ಥಳದಲ್ಲಿ ಪರಿಹರಿಸಿಕೊಳ್ಳಲಾಗುತ್ತದೆ ಎಂದರು.

ಹಿಂದೆ ಪಿಂಚಣಿ ಪಡೆಯಲು ಅರ್ಜಿ ನೀಡಿದ ವ್ಯಕ್ತಿಗೆ ಪಿಂಚಣಿ ಮಂಜೂರು ಆಗುವುದರಲ್ಲಿ ಅರ್ಜಿ ನೀಡಿದ ವ್ಯಕ್ತಿ ಮರಣ ಹೊಂದಿರುತ್ತಿದ್ದನು. ಪಿಂಚಿಣಿಗಾಗಿ ಕೆಲವರು ಹಣ ತೆಗೆದುಕೊಂಡು ಕೆಲಸ ಮಾಡಿಸದೆ ಸತಾಯಿಸುತ್ತಿದ್ದರು.ಈಗ ಅರ್ಹ ಫಲಾನುಭವಿಗಳ ಅರ್ಜಿಗಳನ್ನು ಸ್ವೀಕರಿಸಿ ಸಂಜೆಯೊಳಗೆ ಆದೇಶ ಪತ್ರ ನೀಡಲಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ ಹೊಂದಿದ 60 ವರ್ಷ ಮೇಲ್ಪಟ್ಟ ವ್ಯಕ್ತಿಗೆ ಆನ್ ಲೆನ್ ನಲ್ಲಿ ತನ್ನಿಂದ ತಾನೇ ಪಿಂಚಣಿ ಯೋಜನೆಗೆ ವ್ಯಕ್ತಿ ಅರ್ಹನಾಗಿ ಆದೇಶ ಪತ್ರ ಬಂದು ಆತನ ಖಾತೆಗೆ ಪಿಂಚಣಿ ಹಣ ಜಮಾ ಆಗುತ್ತದೆ.

ಒಟ್ಟು ಸ್ವಿಕೃತವಾದ ಅರ್ಜಿಗಳು 54, ವಿಲೇವಾರಿ 20, ಬಾಕಿಯುಳಿದ ಅರ್ಜಿಗಳು 34, ಆದಷ್ಟು ಬೇಗ ಪರಿಹರಿಸಿಕೊಡುವುದಾಗಿ ತಹಶೀಲ್ದಾರ ಅರುಣ್.ಎಚ್ ದೇಸಾಯಿ ಪತ್ರಿಕೆಗೆ ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಅಧ್ಯಕ್ಷರದಾ ಯಂಕಮ್ಮ,ಮುಖಂಡರ ಬೈರಣ್ಣ, ಉಪ ತಹಸೀಲ್ದಾರ್ ಸ್ವಾಮಿ ವಿವೇಕಾನಂದ, ಟಿ.ಎಚ್.ಓಡಾ.ಅಯ್ಯನಗೌಡ,ತೋಟಗಾರಿಕೆ ಅಧಿಕಾರಿ,ನಂದಿ ಬೇವುರ್, ಶಿವಾಮನಪ್ಪ, ಶಾಂತಕುಮಾರ್, ಕಂದಾಯ ನಿರಿಕ್ಷಕರು ಬೀಮರಾಯ, ಹೋಬಳಿಯ ಗ್ರಾಮ ಲೆಕ್ಕಧಿಕಾರಿಗಳು, ಸೇರಿದಂತೆ ಇತರರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;