;

ಪ್ಲಾಸ್ಟಿಕ್ ಮುಕ್ತ ಮಾಡಲು ಅಧಿಕಾರಿಗಳಿಂದ ಜನ ಜಾಗೃತಿ ಜಾಥಾ…!!!

ಪ್ಲಾಸ್ಟಿಕ್ ಮುಕ್ತ ಮಾಡಲು ಅಧಿಕಾರಿಗಳಿಂದ ಜನ ಜಾಗೃತಿ ಜಾಥಾ.

ಸಿಂಧನೂರು: ಜುಲೈ.12. ಪ್ಲಾಸ್ಟಿಕ್ ಬಳಸದಂತೆ ಸರ್ಕಾರ ಆದೇಶ ಮಾಡಿದ್ದು ಸರಕಾರದ ಅದೇಶದನ್ವಯ ಇಂದು ನಗರಸಭೆಯ ಅಧಿಕಾರಿಗಳು, ನ್ಯಾಯಾಧೀಶರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ನಗರದಲ್ಲಿ ಜಾಥಾ ನಡೆಸುವ ಮೂಲಕ ಪ್ಲಾಸ್ಟಿಕ್ ಬಳಸದಂತೆ ಜನರಲ್ಲಿ ಜಾಗೃತಿ ಮೂಡಿಸುವ ಜಾಥಾ ನಡೆಸಿದರು.

ಇಂದು ಬೆಳಿಗ್ಗೆ ನ್ಯಾಯಾಲಯದ ಆವರಣದಲ್ಲಿ ಪ್ಲಾಸ್ಟಿಕ್ ಮುಕ್ತ ಜನ ಜಾಗೃತಿ ಜಾಥಕ್ಕೆ ಹಿರಿಯ ಸಿವಿಲ್ ನ್ಯಾಯಾಧೀಶ ರಾದ ದೀಪಾ.ಜಿ, ಒಂದನೇ ಅಪರ ಸಿವಿಲ್ ನ್ಯಾಯದೀಶರಾಧ ಆನಂದಪ್ಪ ಎಂ.ಎರಡನೇ ಅಪರ ಸಿವಿಲ್ ನ್ಯಾಯಾಧೀಶರಾದ ಆಚಪ್ಪ. ದೊಡ್ಡ ಬಸವರಾಜ ಚಾಲನೆ ನೀಡಿ ಮಾತಾನಾಡಿ ,ದೀಪಾ ಜಿ ಮನೇರ್ ಕರ್ ಹಿಂದೆ ಜನಸಾಮಾನ್ಯರು ಪ್ಲಾಸ್ಟಿಕ್ ಬಳಸದೆ ದಿನನಿತ್ಯದ ವ್ಯಾಪಾರ ವಹಿವಾಟು ನಡೆಸುತ್ತಿದ್ದು ಇತ್ತೀಚಿನ ದಿನಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಿತಿಮೀರಿ ಹೋಗಿದ್ದು ಇದರಿಂದ ಜನ ಹಾಗೂ ಪರಿಸರ ಮೇಲೆ ದುಷ್ಪರಿಣಾಮ ಬಿರಲಿದ್ದು ಸಾರ್ವಜನಿಕರು ಪ್ಲಾಸ್ಟಿಕ್ ಬಳಸದಂತೆ ದೃಢ ನಿರ್ಧಾರ ಮಾಡಬೇಕು ಎಂದು ಜನರಿಗೆ ಜಾಗೃತಿ ಮೂಡಿಸಿದರು.

ಪ್ಲಾಸ್ಟಿಕ್ ನಿಷೇಧ ಬಗ್ಗೆ ಜಾಗೃತಿ ಜಾಥಾ ಮಾಡಿದರೆ ಸಾಲದು ಸರಕಾರ ಪ್ಲಾಸ್ಟಿಕ್ ಉತ್ಪಾದನೆ ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ಪ್ಲಾಸ್ಟಿಕ್ ಮುಕ್ತ ಜನಜಾಗೃತಿ ಜಾಥಕ್ಕೆ ಅರ್ಥ ಬರುತ್ತದೆ ಇಲ್ಲದಿದ್ದರೆ ಉತ್ಪಾದನೆಗೆ ಬಂದ್ ಮಾಡದೆ ಆದೇಶ ಮಾಡಿ ಹೋರಾಟ ಜಾಥಾ ಮಾಡಿದರೂ ಸಹ ಕಾಟಾಚಾರಕ್ಕೆ ಎನ್ನುವಂತಾಗಿದೆ ಎಂದು ನ್ಯಾಯವಾಧಿಗಳ ಸಂಘದ ತಾಲೂಕಾಧ್ಯಕ್ಷರಾದ ಕೆ.ಭೀಮನಗೌಡ ವಕೀಲರು ಮಾತನಾಡಿದರು.

ಪ್ಲಾಸ್ಟಿಕ್ ಮುಕ್ತ ಜನ ಜಾಗೃತಿ ಜಾಥಾ ನ್ಯಾಯಾಲಯದಿಂದ ಹೊರಟು ನಗರದ ಪ್ರಮುಖ ಬಿದಿಗಳಲ್ಲಿ ಕರಪತ್ರ ಹಾಗು ಆಟೋದಲ್ಲಿ ಮೈಕ್ ಮೂಲಕ ಮತ್ತು ಬೆದರು ಗೊಂಬೆಗಳ ಪ್ರದರ್ಶನ ಮಾಡುವ ಮೂಲಕ ಪ್ಲಾಸ್ಟಿಕ್ ಬಳಕೆಯಿಂದ ಆಗುವ ದುಷ್ಪರಿಣಾಮಗಳ ನಗರದ ಜನರಲ್ಲಿ ನಗರಸಭೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡೂರ್, ಸಿಡಿಪಿಓ ಸುದೀಪ್ ಕುಮಾರ್, ಎಸಿಡಿಪಿಓ ಲಿಂಗನಗೌಡ, ಬಿಸಿಎಂ ಅಧಿಕಾರಿ ಲಿಂಗಪ್ಪ ಅಂಗಡಿ,ನಗರ ಸಭೆ ಸಿಬ್ಬಂದಿಗಳಾದ ಮಹೇಶ್ವರ, ರೇಖಾ,ಕಿಶನ್ ರಾವ್, ಲಕ್ಷ್ಮೀಪತಿ, ಅಬ್ದುಲ್ ಸಾಬ್ ಸೇರಿದಂತೆ ನಗರ ಸಭೆ ಸಿಬ್ಬಂದಿಗಳು ಜಾಥದಲ್ಲಿ ಪಾಲ್ಗೊಂಡಿದ್ದರು….

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;