ಇಟ್ಟಿಗಿಯಲ್ಲಿ ಜಲಜೀವನ್ ಮಿಷನ್ ಯೋಜನೆಯ ಕೌಶಲ್ಯ ತರಬೇತಿ ಕಾರ್ಯಗಾರ.
ವಿಜಯನಗರ ಜಿಲ್ಲಾ ಹೂವಿನಹಡಗಲಿ ತಾಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿ ಕಛೇರಿಯಲ್ಲಿ 11/08/2022ರಂದು “ಜಲ ಜೀವನ್ ಮಿಷನ್ “ಯೋಜನೆಯಡಿ ತಾಲೂಕಿನ ಗ್ರಾಮ ಪಂಚಾಯತಿಗಳಲ್ಲಿ ಅಳವಡಿಸಲಾಗಿರುವ FHTC/HTC ಗಳಿಗೆ ಪೈಪ್ಲೈನ್ ಗಳ ಸಮರ್ಪಕವಾಗಿ ನಿರ್ವಹಣೆ & ದುರಸ್ಥಿ ಮಾಡಲು ಬೇಕಾದ ಕೌಶಲ್ಯತೆ ಬಗ್ಗೆ ತರಬೇತಿ ಕಾರ್ಯಾಗಾರ ವನ್ನು ಹಡಗಲಿ AEE ಮಾನ್ಯ ಶ್ರೀ ನಾಗಪ್ಪ ಸರ್ ಇವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಯಿತು,

ಈ ಒಂದು ಕಾರ್ಯಾಗಾರ ದಲ್ಲಿ ಮಾನ್ಯ ಜಿಲ್ಲಾ ಎಸ್ಕ್ಯೂಟಿವ್ ಇಂಜಿನಿಯರ್, ಮಾನ್ಯ ಪ್ರಕಾಶ್ ಸಹಾಯಕ ಇಂಜಿನಿಯರ್ ಸರ್,ಶ್ರೀ ರವಿ ಸರ್ ಜೂನಲ್ ಮೇನೇಜರ್ ವಾಹಿನಿ ಕಂಪನಿ ಇವರುಗಳು ಉಪಸ್ಥಿತಯಲ್ಲಿದ್ದರು. ಇಟ್ಟಿಗಿ, ಉತ್ತಂಗಿ, ಮಹಾಜನದಹಳ್ಳಿ, & ಹೊಳಗುಂದಿ ಗ್ರಾಮ ಪಂಚಾಯತಿಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಬಿಲ್ ಕಲೆಕ್ಟರ್ ಗಳು, ನೀರುಗಂಟೆಗಳು,ಸ್ವ ಸಹಾಯ ಸಂಘ ಗಳ ಎಂ ಬಿ ಕೆ ಗಳು ಇತರೆ ಸಂಬಂಧ ಪಟ್ಟ ಅಧಿಕಾರಿಗಳು, ಗ್ರಾ. ಪಂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
