;

24 ಗಂಟೆ ಕುಡಿಯುವ ಶುದ್ಧ ನೀರು ಲಭ್ಯ , ಮಿತವಾಗಿ ಬಳಸಿ – ಶಾಸಕ ನಾಡಗೌಡ…!!!

24 ಗಂಟೆ ಕುಡಿಯುವ ಶುದ್ಧ ನೀರು ಲಭ್ಯ , ಮಿತವಾಗಿ ಬಳಸಿ – ಶಾಸಕ ನಾಡಗೌಡ.

ಸಿಂಧನೂರು : ಜುಲೈ 5. ನಗರದ ಜನರಿಗೆ ಇಂದಿನಿಂದ ದಿನದ 24 ಗಂಟೆಗಳ ಕಾಲ ಕುಡಿಯಲು ಯೋಗ್ಯವಾದ ಶುದ್ಧ ನೀರು ಸಿಗುತ್ತದೆ ಇದರ ಉಪಯೋಗ ಪಡೆದುಕೊಳ್ಳಿ,ನೀರನ್ನು ಮಿತವಾಗಿ ಅಗತ್ಯಕ್ಕೆ ತಕ್ಕಂತೆ ಮಾತ್ರ ಬಳಸಿ ಎಂದು ಸಾರ್ವಜನಿಕರಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಮನವಿ ಮಾಡಿದರು.

ನಗರದ ವಾರ್ಡ್ ನಂ 26,27,28,13 ರಲ್ಲಿ 24/7 ಕುಡಿಯುವ ನೀರಿನ ಝೋನ್ ಗಳನ್ನು ಶಾಸಕರು ನಾಡಗೌಡ ವೀಕ್ಷಣೆ ಮಾಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 24/7 ಶುದ್ಧ ಕುಡಿಯುವ ನೀರಿನ ಉಪಯೋಗ ಪಡೆದುಕೊಳ್ಳಿ, ನೀರನ್ನು ಸಂಗ್ರಹಣೆ ಮಾಡಿ ದುರುಪಯೋಗ ಮಾಡಿಕೊಳ್ಳಬೇಡಿ.ಮೀಟರ್ ಇದೆ ಸಾವಿರಾರು ರೂಪಾಯಿ ಬಿಲ್ ಬರುತ್ತದೆ ಎಂಬ ಭಯಬೇಡ, ನಿಮಗೆ ಕಡಿಮೆ ದರದಲ್ಲಿ ಕುಡಿಯಲು ಯೋಗ್ಯವಾದ ಶುದ್ಧ ನೀರು ದೊರೆಯುತ್ತವೆ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತರಾದ ಮಂಜುನಾಥ ಗುಂಡುರು, ಸದಸ್ಯರಾದ ಹನುಮೇಶ ಉಪ್ಪಾರ,ಚಂದ್ರಶೇಖರ್ ಮೈಲಾರ, ಪಕ್ಷದ ಮುಖಂಡರಾದ ನಿರುಪಾದೆಪ್ಪ ಹಾಗೂ 24/7 ಅಧಿಕಾರಿಗಳು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;