ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರೀ ಅವ್ಯವಹಾರ,, ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ರೈತರ ಬಡ್ಡಿ ರಹಿತ ಸಾಲ ಸೌಲಭ್ಯದ ಹಣವನ್ನು ರೈತರಿಗೆ ನೀಡದೆ ಬಾರೀ ಅವ್ಯವಹಾರ ಮಾಡಿ, ಹಾಗೂ ರೈತರು ಕಟ್ಟಿದ ಸಾಲಕ್ಕೆ ಸರಿಯಾದ ರಶೀದಿ ಕೊಡದೆ ದಾರಿ ತಪ್ಪಿಸಿ, ಈ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿರುವ ಸೊಸೈಟಿ ಕಾರ್ಯದರ್ಶಿ ಮತ್ತು ಗುಮಾಸ್ತ ಅವರು ಭಾರಿ ಅವ್ಯವಹಾರ ಮಾಡಿರುತ್ತಾರೆ, ಎನ್ನುವ ರೈತರ ಹೇಳಿಕೆಯನ್ನು ಆದರಿಸಿ ಹಗರಣ ಆದಕಾರಣ ಈ ಸೊಸೈಟಿಗೆ ಸಂಬಂಧಪಟ್ಟ ಕ್ಷೇತ್ರಾಧಿಕಾರಿಗಳರವರು ಇವರಿಬ್ಬರ ವಿರುದ್ಧ ಕಾನಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆಗೆ ಒತ್ತಾಯಿಸಿದಾಗ.

ಈ ಒಂದು ಮಾಹಿತಿಯನ್ನು ಆದರಿಸಿ ಕಾನಾಹೊಸಹಳ್ಳಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ” ತಿಮ್ಮಣ್ಣ ಚಾಮನೂರು” ಇವರನ್ನು ಒಳಗೊಂಡ ಸಿಬ್ಬಂದಿಯವರ ತಂಡದ ಜೊತೆ ಗೂಡಿ ಕಳೆದ ರಾತ್ರಿ ಕಾರ್ಯದರ್ಶಿಯನ್ನು ಬಂಧಿಸಿರುತ್ತಾರೆ.ಈ ತನಿಖೆಯನ್ನು ಬಯಲಿಗೆಳೆದಾಗ 2021-22ನೇ ಸಾಲಿನಲ್ಲಿ ಬಂದಿರುವ ರೈತರಿಗೆ ನೀಡಬೇಕಾಗಿದ್ದ ಬಡ್ಡಿ ರಹಿತ ಸಾಲವನ್ನು ನೀಡಲಾಗಿತ್ತಾದರೂ ,ಮತ್ತೇ ರೈತರಿಂದ ಸಾಲವನ್ನು ಮರುಪಾವತಿ ಮಾಡಿಸಿಕೊಂಡು ಈ ಹಣವನ್ನು ಕೊಟ್ಟೂರು ಬಿಡಿಸಿಸಿ ಬ್ಯಾಂಕಿಗೆ ಕಟ್ಟಬೇಕಾಗಿರುತ್ತದೆ ಆದರೆ ಈ ಹಣವನ್ನು ಬ್ಯಾಂಕಿಗೆ ಕಟ್ಟದೆ ಸ್ವಂತಕ್ಕೆ ಬಳಸಿಕೊಂಡಿರುತ್ತಾರೆ ಎನ್ನುವ ಹೇಳಿಕೆಯನ್ನು ಆದರಿಸಿ ಈ ಇಬ್ಬರು ಅಧಿಕಾರಿಗಳು ರೈತರಿಗೆ ಮೋಸ ಮಾಡಿರುತ್ತಾರೆ , ಎನ್ನುವ ಮಾಹಿತಿಯನ್ನು ಕೇಳಿದ ತನಿಖಾ ಪೊಲೀಸ್ ತಂಡ ತಮ್ಮ ಒಂದು ಚನಾಕ್ಷಾ ಬುದ್ದಿಯೊಂದಿಗೆ ದುಷ್ಟರ ವಿರುದ್ಧ ಕ್ರಮವನ್ನು ತೆಗೆದುಕೊಂಡ, ಪರಿಶೀಲನೆಯನ್ನು ಮಾಡುವ ಕ್ರಮದೊಂದಿಗೆ ಇಳಿದ ತಂಡ ದಾಖಲೆಯನ್ನು ಆದರಿಸಿ ಕ್ರಮಕ್ಕೆ ಮುಂದಾದಕಾರಣ ರೈತರೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲೀಸಿರುತ್ತಾರೆ.ಇದನ್ನು ಪರಿಶೀಲನೆಯನ್ನು ಮಾಡಿದ ಮಾನ್ಯ ಜಿಲ್ಲಾಧಿಕಾರಿಗಳು ಕಾನೂನು ಕ್ರಮವನ್ನು ಜರುಗಿಸಿ ಸೂಕ್ತ ದಾಖಲೆಗಳನ್ನು ಪರಿಶೀಲನೆಯನ್ನು ಮಾಡಲು ಸಂಬಂಧ ಪಟ್ಟ ವಲಯ ಪೊಲೀಸ್ ಅಧಿಕಾರಿಗಳಿಗೆ ರವಾನಿಸಿದ್ದು ರೈತರ ಒಂದು ಕಷ್ಟಕ್ಕೆ ಸ್ಪಂದಿಸುವ ಮೂಲಕ ನ್ಯಾಯವನ್ನು ಒದಗಿಸುವುದಕ್ಕೆ ಮುಂದಾಗಿರುವ ಮಾನ್ಯ ಜಿಲ್ಲಾಧಿಕಾರಿಗಳಿಗೆ ಸ್ಥಳೀಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ, ತಾಲೂಕಿನಲ್ಲಿ ಇನ್ನು ಸುಮಾರು ಕಡೆ ಇಂತಹ ಪ್ರಕರಣಗಳು ಇದ್ದು ಮುಂದಾಗುವ ತೊಂದರೆಗೆ ಜಿಲ್ಲಾಡಳಿತ ಸೂಕ್ತ ಕ್ರಮವನ್ನು ತೆಗೆದುಕೊಂಡು, ಮೂರ್ಖರಿಗೆ ಶಿಕ್ಷೆಯನ್ನು ಕೊಟ್ಟು ಬಡ ರೈತರ ಬಾಳಿಗೆ ಬೆಳಕಾಗಲಿ ಎಂಬುದೇ ನಮ್ಮ ಆಶಯ…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
