ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆ.
ಕರ್ನಾಟಕದಲ್ಲಿ ಬಿಜೆಪಿ ಆಪರೇಷನ್ ವಿಚಾರ
ನಾವಂತು ಯಾವ ಆಪರೇಷನ್ ಮಾಡ್ತಿಲ್ಲ.
ಜನಗಳ ಮುಂದೆ ಹೋಗ್ತಿವಿ.
2023 ಕ್ಕೆ ಜನಗಳ ಮುಂದೆ ಹೋಗ್ತೇವೆ.
ಆವತ್ತು ಜನ ಯಾರನ್ನ ಆಯ್ಕೆ ಮಾಡ್ತಾರೆ ಅಂತ ಕಾಯ್ದು ನೋಡಿ ಹೇಳ್ತಿವಿ.
ಜನಗಳಿಗೆ ನಮ್ಮ ಮೇಲೆ ವಿಶ್ವಾಸ ಇದೆ.
ನಮ್ಮನ್ನೇ ಆಯ್ಕೆ ಮಾಡ್ತಾರೆ.
*ಕರ್ನಾಟಕವನ್ನ ಎರಡು ರಾಜ್ಯಗಳಾಗಿ ವಿಂಗಡಣೆ ವಿಚಾರ*
ಯಾವುದೇ ಕಾರಣಕ್ಕೂ ಕರ್ನಾಟಕ ವಿಭಾಗ ಆಗೋದಿಲ್ಲ, ಆಗ್ಬಾರದು.
ಬಹಳ ಶ್ರಮದಿಂದ ಭಾಷಾವಾರು ಪ್ರಾಂತ್ಯದ ಆಧಾರದ ಮೇಲೆ
ಕರ್ನಾಟಕವನ್ನ ರಚನೆ ಮಾಡಿದ್ದಾರೆ.
ಯಾವುದೋ ಒಂದು ಅಸಮಾಧಾನಕ್ಕೆ ಕರ್ನಾಟಕವನ್ನ ಹೊಡೆಯುವಂತ ಕೆಲಸವನ್ನ ಯಾರೂ ಮಾಡ್ಬಾರದು.
ನಾವು ಅದನ್ನ ವಿಭಾಗ ಮಾಡೋದಿಕ್ಕೆ ಬಿಡೋದಿಲ್ಲ.
*ಪಠ್ಯಪುಸ್ತಕ ಹಿಂಪಡೆಯುವ ವಿಚಾರ*
ಇದರಲ್ಲಿ ಹಠ ಮಾಡುವಂತಹದ್ದು ಏನೂ ಇಲ್ಲ.
ಬಸವಣ್ಣನವರು ಯಾರು, ಏನು ಅಂತ ಅವರ ಚಿಂತನೆಗಳನ್ನ
ಮುಂದಿನ ಪೀಳಿಗೆಗೆ ತಿಳಿಸ್ಬೇಕು.
ಇದರಲ್ಲಿ ರಾಜಕೀಯ ಮಾಡೋದು ಏನಿದೆ.
ಅಂಬೇಡ್ಕರ್ ಅವರು ಸಂವಿಧಾನ ಬರೆದ್ರು.
ಅವರ ಚಿಂತನೆಗಳನ್ನ ಜನ ಸಮುದಾಯಕ್ಕೆ ತಿಳಿಸಬೇಕು.
ಇದರಲ್ಲಿ ರಾಜಕೀಯ ಮಾಡೋದು ಏನಿದೆ.
ಹಿಂದೆ ಯಾವ ರೀತಿಯಾಗಿ ಪಠ್ಯಪುಸ್ತಕ ಇತ್ತು ಅದನ್ನೇ ಮುಂದುವರಿಸಬೇಕು.
ನಾನು ಕೂಡ ಅದನ್ನ ಆಗ್ರಹ ಮಾಡ್ತೇನೆ.
*ಗುಬ್ಬಿ ಶಾಸಕ ಶ್ರೀನಿವಾಸ್ ಉಚ್ಚಾಟನೆ ವಿಚಾರ*
ಅವರ ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಯಾವ ಪಕ್ಷಕ್ಕೆ ಸೇರ್ತಾರೆ, ಅಂತ ತಿರ್ಮಾನ ಮಾಡಿ ಪ್ರಕರಣೆ ಮಾಡ್ತಾರೆ.
ನಾವು ಪರಿಶೀಲನೆ ಮಾಡಿಕೊಳ್ತೇವೆ.
ಕ್ಷೇತ್ರದಲ್ಲಿ ನಮಗೆ ಅವರ ಅಗತ್ಯ ಇದೆ ಅಂದ್ರೆ, ವರಿಷ್ಠರ ತಿರ್ಮಾನ ಮಾಡಿದ್ರೆ ನಮ್ಮ ಪಕ್ಷಕ್ಕೆ ತಗೋಳ್ತೇವೆ.
*ಮೋದಿ ಬೆಂಗಳೂರಿಗೆ ಬಂದಿದ್ದಕ್ಕೆ 25 ಕೋಟಿ ಹಣ ಖರ್ಚು ವಿಚಾರ*
ನಾನು ಸಮಾಜ ಸೇವಕ, ಪ್ರಧಾನ ಸೇವಕ ಅಂತೆಲ್ಲ ಹೇಳಿಕೊಳ್ತಾರೆ.
ಆದರ ನಡೆತೆಗಳು ಯಾವ ರೀತಿಯಾಗಿ ನಡೆದುಕೊಳ್ತಿದೆ.
ಇಡೀ ದೇಶ ಗಮನಿಸುತ್ತೆ.
ಚುನಾವಣಾ ಸಂದರ್ಭದಲ್ಲಿ ಜನ ಯಾವ ರೀತಿಯಾಗಿ ಪ್ರತಿಕ್ರಿಯೆ ಮಾಡ್ತಾರೆ ಕಾದು ನೋಡೋಣ.
*ಅಗ್ನಿಪಥ್ ಯೋಜನೆ ವಿರೋಧ ವಿಚಾರ*
ಆರ್ಮಿಗೆ, ಏರ್ ಪೋರ್ಸ್ಗೆ, ಸೇರಿಸುವಂತ ಕೆಲಸ ಈ ಹಿಂದೆ ಆಗಿದೆ.
ಆದರೆ ಈಗ ಹೊಸದಾಗಿ ಟ್ರೈನಿಂಗ್ ಕೂಡ ಕಡಿಮೆ.
6 ತಿಂಗಳು ಟ್ರೈನಿಂಗ್, ಅವರ ಅವಧಿ ಕೂಡಾ ಕೇವಲ ನಾಲ್ಕು ವರ್ಷ.
ನಾಲ್ಕು ವರ್ಷದಲ್ಲಿ ಕೇವಲ ಮೂರೂವರೆ ವರ್ಷ ಮಾತ್ರ.
ನಾಲ್ಕು ವರ್ಷ ಕಳೆದ ಮೇಲೆ ಏನು..?
ಅದನ್ನ ಯೋಚನೆ ಮಾಡ್ಬೇಕು.
ಹಣ ಉಳಿಸೋಕೆ ಹೋಗಿ ದೇಶವನ್ನ ಅಭದ್ರ ಮಾಡ್ತಿರಾ..?
ಈ ದೇಶದ ಸೆಕ್ಯೂರಿಟಿ ಬಹಳ ಮುಖ್ಯ ಅಲ್ವಾ.
ಬಾರ್ಡರ್ ನಲ್ಲಿ ಪ್ರಾಣ ಕೊಡ್ತಾರೆ.
ಅಂತಹದ್ದಕ್ಕೆ ಕಾಂಪ್ರಮೇಸ್ ಆಗ್ಬಾರದು.
ತಕ್ಷಣವೇ ಇದನ್ನ ವಾಪಸ್ ಪಡೆಯಬೇಕು.
ಇಡೀ ದೇಶದಲ್ಲಿ ಇದರ ಬಗ್ಗೆ ಹೋರಾಟ ಮಾಡ್ತಿದ್ದೇವೆ.
.ಬಿಜೆಪಿ ಪಕ್ಷಕ್ಕೆ ಪರಮೇಶ್ವರ್ ಹೋಗ್ತಾರೆ ಎಂಬ ವಿಚಾರ.
ನನಗೆ ಯಾರು ಹೇಳಿಲ್ಲ.
ನನಗೆ ಯಾರು ಸಂಪರ್ಕ ಮಾಡಿಲ್ಲ.
ಕಾದು ನೋಡಿ ಮುಂದೆ ಏನಾಗುತ್ತೆ ಅಂತ.
ತುಮಕೂರು ಜಿಲ್ಲೆ ಕೊರಟಗೆರೆಯಲ್ಲಿ ಮಾಜಿ ಡಿಸಿಎಂ ಡಾ. ಜಿ ಪರಮೇಶ್ವರ್ ಹೇಳಿಕೆ…
ವರದಿ. ಸುರೇಶ್, ಕೆ, ತುಮಕೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
