ಬನ್ನಿ ಕಲ್ಲು ಗ್ರಾಮದ ಪ್ರಗತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ.
ವಿಜಯ ನಗರ ಜಿಲ್ಲಾ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬನ್ನಿಕಲ್ಲು ಗ್ರಾಮದ ಸಕಾ೯ರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಯೋಗ ದಿನಾಚರಣೆ ಪ್ರಯುಕ್ತ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿ ವರ್ಗದವರು ಮಕ್ಕಳಿಗಾಗಿ ಯೋಗ ಕಾರ್ಯಕ್ರಮವನ್ನು ನೆಡೆಸಿದರು.ಸಸಿ ನೆಡುವುದರ ಮೂಲಕ ಕಾರ್ಯವನ್ನು ಉದ್ಘಾಟನೆ ಮಾಡಲಾಯಿತು.

ನಂತರದಲ್ಲಿ ಪ್ರಾಥ೯ನೆಯನ್ನು ಶಾಲಾ ವಿದ್ಯಾರ್ಥಿಗಳು ನೆರವೇರಿಸಿದರುಈ ಕಾರ್ಯಕ್ರಮಕ್ಕೆ ಶ್ರೀ ಜಿ.ಬಿ.ವಿನಯರಾಜ ಆಚಾರ್ಯ(ಇಟ್ಟಿಗಿ) ಕನ್ನಡ ಪ್ರಾಧ್ಯಾಪರು ವಿದ್ಯಾನಿಕೇತನ ಕಾಲೇಜು.ಹಗರಿಬೊಮ್ಮನಹಳ್ಳಿ. ಇವರು ಆಗಮಿಸಿ ಮಕ್ಕಳಿಗೆ ಯೋಗದ ಮಹತ್ವ ತಿಳಿಸುತ್ತಾ,ಸುಲಭವಾಗಿ ಮಕ್ಕಳು ಮಾಡಬಹುದಾದ ಕೆಲವು ಆಸನಗಳನ್ನು ಅಂತ್ಯತ ಸುಲಭವಾಗಿ ತಿಳಿಸಿಕೊಟ್ಟರು.ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳು,ಶಿಕ್ಷಕರು ಹಾಗೂ ಶಾಲೆಯ ಸಿಬ್ಬಂದಿಗಳು ತುಂಬಾ ಉತ್ಸಾಹದಿಂದ ಯೋಗ ಅಭ್ಯಾಸ ಮಾಡಿದರು.ಯೋಗದ ಬಗ್ಗೆ ಮಾತಾನಾಡುತ್ತಾ ಸದೃಡ ರಾಷ್ಟ್ರ ನಿಮಾ೯ಣಕ್ಕೆ ಯೋಗ ಮಹತ್ವದ ಹೆಜ್ಜೆ ಯಾಗಿದೆ ಆರೋಗ್ಯವೇ ಮಹಾ ಭಾಗ್ಯ ಎಂಬುವಂತೆ ಎಲ್ಲ ಸಿರಿವಂತಿಕೆಗಿಂತ ಆರೋಗ್ಯ ಶ್ರೇಷ್ಠ ವಾಗಿದ್ದುಎಂದು ಧ್ಯಾನ ದಬಗ್ಗೆ ಮಾಹಿತಿ ನೀಡಲಾಯಿತು.ಈ ಕಾರ್ಯಕ್ರಮದಲ್ಲಿ ಶ್ರೀಮತಿ ಸುಧಾ ಬಡಿಗೇರ್,ಶ್ರೀ ಖಾಸಿಂ ಪೀರ್,ಕು ಗೀತಾ,ಶ್ರೀಮತಿ ಅಕ್ಕಮಹಾದೇವಿ, ಶ್ರೀಮತಿ ಶಿಲ್ಪಾ ಮತ್ತು ಮೆಹಬೂಬ್ ಭಾಷ್,ಶ್ರೀ ಮಕ್ಬುಲ್ ಕಲಾರಿ ಭಾಗವಹಿಸಿದ್ದರು.

ವರದಿ-ಧನುಂಜಯ ಪತ್ತಾರ್,ಹಗರಿಬೊಮ್ಮನಹಳ್ಳಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
