;

ಬಳ್ಳಾರಿಯ ಗೃಹರಕ್ಷಕದಳದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ…!!!

ಬಳ್ಳಾರಿಯ ಗೃಹರಕ್ಷಕದಳದಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಬಳ್ಳಾರಿ ಜಿಲ್ಲಾ ಗೃಹರಕ್ಷಕದಳದಿಂದ ಮಂಗಳವಾರದಂದು ಗೃಹರಕ್ಷಕದಳ ಕಚೇರಿಯ ಆವರಣದಲ್ಲಿ “08ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ” ಆಚರಿಸಲಾಯಿತು.


ಗೃಹರಕ್ಷಕ ದಳದ ಜಿಲ್ಲಾ ಘಟಕದ ನಿಕಪೂರ್ವ ಸೆಕೆಂಡ್ ಇನ್ ಕಮಾಂಡ್‍ಗಳಾದ ಎನ್.ಎಸ್.ಲಕ್ಷ್ಮೀನರಸಿಂಹ ಅವರು ಮಾತನಾಡಿ, ಯೋಗಾಸನಗಳಿಂದ ಮಾನವ ಶರೀರಕ್ಕೆ ಆಗುವ ಲಾಭಗಳು ಮತ್ತು ಇದರ ಪರಿಣಾಮಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು. ಯೋಗದ ಬಗ್ಗೆ ಎಲ್ಲಾ ತರಹದ ಆಸನಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಗೃಹರಕ್ಷಕದಳದ ಉಪ ಸಮಾದೇಷ್ಟರಾದ ಬಿ.ಎಸ್.ಕಾಂಬಳೆ, ಕಂಪನಿ ಕಮಾಂಡರ್ ಜಿ.ಬಸವರಾಜ್, ಘಟಕಾಧಿಕಾರಿ ಜೆ.ಸುರೇಶ್, ಪ್ಲಟೂನ್ ಕಮಾಂಡರ್‍ಗಳಾದ ಬಿ.ಕೆ.ಬಸವಲಿಂಗ, ಹೆಚ್.ಲಕ್ಷ್ಮೀನಾರಾಯಣ, ಪ್ರಥಮ ದರ್ಜೆ ಸಹಾಯಕರಾದ ಬಿ.ಎನ್.ಗೊಪಿನಾಥ್ ಸೇರಿದಂತೆ ಸುಮಾರು 100 ಜನ ಗೃಹರಕ್ಷಕ ಮತ್ತು ಗೃಹರಕ್ಷಕಿಯರು ಉಪಸ್ಥಿತರಿದ್ದರು.

ವರದಿ.ವಿರೇಶ್, ಎಚ್, ಸಿರಿಗುಪ್ಪ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;