;

ಸಾರ್ವಜನಿಕರ ಸಮಸ್ಯೆ ಪರಿಹರಿಸಲು‌ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ – ವೆಂಕಟರಾವ್ ನಾಡಗೌಡ…!!!

ಸಾರ್ವಜನಿಕರ ಸಮಸ್ಯೆ ಪರಿಹರಿಸಲು‌ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ – ವೆಂಕಟರಾವ್ ನಾಡಗೌಡ.

ಸಿಂಧನೂರು : ಜೂನ್ 18.ಜನರು ತಮ್ಮ ಸಮಸ್ಯೆಗಳಿಗಾಗಿ ಜಿಲ್ಲಾ ಕಛೇರಿ, ತಾಲೂಕು ಕಚೇರಿ, ಎಸಿ ಕಛೇರಿಗೆ ಅಲೆಯುವದನ್ನು ತಪ್ಪಿಸುವ ಸಲುವಾಗಿ ಸಾರ್ವಜನಿಕ ಸಮಸ್ಯೆ ಪರಿಹರಿಸಲು‌ ರಾಜ್ಯಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ವಿವರವನ್ನು ಸಲ್ಲಿಸಿ ಪರಿಹಾರ ಪಡೆದುಕೊಳ್ಳಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ತಾಲೂಕಿನ ಮುಕ್ಕುಂದಾ ಗ್ರಾಮದಲ್ಲಿ ಕಂದಾಯ ಇಲಾಖೆ ಜಿಲ್ಲಾಡಳಿತ ರಾಯಚೂರು ಹಾಗೂ ತಾಲೂಕು ಆಡಳಿತ ಸಿಂಧನೂರು ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಗಳ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಕಾರ್ಯನಿರ್ವಹಿಸಿದರೆ, ಸಾರ್ವಜನಿಕ ಸಮಸ್ಯೆ ಪೂಣ೯ ಪ್ರಮಾಣದಲ್ಲಿ‌ ತಿಳಿದುಕೊಳ್ಳಲು ಸಾಧ್ಯವಿಲ್ಲ. ಇಂದು ಅಧಿಕಾರಿಗಳ ತಂಡ ಮುಕ್ಕುಂದಾ ಗ್ರಾಮದಲ್ಲಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬರ ಸಮಸ್ಯೆಯನ್ನು ಖುದ್ದು ಆಲಿಸಿ, ಸಾಧ್ಯವಾದಲ್ಲಿ ಸ್ಥಳದಲ್ಲೇ ಪರಿಹಾರ ನೀಡಲಾಗುವುದು ಎಂದರು.

ಕಂದಾಯ ಇಲಾಖೆಯಿಂದ ಸಾರ್ವಜನಿಕರ ಸೇವೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಲು ಹಲವಾರು ಜನಸ್ನೇಹಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಇತ್ತೀಚೆಗೆ ಕಂದಾಯ ದಾಖಲೆ ಮನೆ ಬಾಗಿಲಿಗೆ ಕಾರ್ಯಕ್ರಮ ನಡೆಸಿ ದಾಖಲೆಗಳನ್ನು ಬಿಪಿಎಲ್ ಕಾರ್ಡ್ ಹೊಂದಿದವರಿಗೆ 60 ವರ್ಷ ವಯಸ್ಸಿನವರಿಗೆ ಮನೆ ಬಾಗಿಲಿಗೆ ವ್ರಂದಾಪ್ಯ ವೇತನ,ಪಿಂಚಣಿ ಸೌಲಭ್ಯವನ್ನು ತಲುಪಿಸುವ ವಿನೂತನ ಯೋಜನೆಯನ್ನು ರೂಪಿಸಲಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸರಕಾರದ ಸೌಲಭ್ಯಗಳು ಜನರಿಗೆ ನೇರವಾಗಿ ತಲುಪಬೇಕು ಎನ್ನುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಯಾವುದೇ ಅಧಿಕಾರಿಗಳು ಜನಸಾಮಾನ್ಯರು ಅರ್ಜಿ ಸಲ್ಲಿಸಿದಲ್ಲಿ 5 ದಿನಗಳಲ್ಲಿ ಪೈಲಗಳನ್ನು ಇಟ್ಟುಕೊಳ್ಳಬಾರದು ಸರಿಯಾಗಿದಲ್ಲಿ ಬಗೆಹರಿಸಿ ಕಳಿಸಬೇಕು, ತಪ್ಪಾಗಿದ್ದರೆ ತಿರಸ್ಕಾರ ಮಾಡಬೇಕು ಎಂದರು. ಮೂಲಭೂತ ಸೌಲಭ್ಯಗಳಾದ ರಸ್ತೆ ದುರಸ್ತಿಗೆ, ಕುಡಿಯುವ ನೀರಿನ, ಕಾರಟಗಿ ರೈಲ್ವೆ ನಿಲ್ದಾಣಕ್ಕೆ ಹೋಗಲು ಬಸ್ ವ್ಯವಸ್ಥೆ, ಸ್ಮಶಾನ ಸೌಲಭ್ಯದ ಸಮಸ್ಯೆಯನ್ನು ಗ್ರಾಮಸ್ಥರು ಅರ್ಜಿ ಸಲ್ಲಿಸಿದರು.ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಬಗೆಹರಿಸಿಕೊಡಲು ಶಾಸಕರು ಸೂಚನೆ ನೀಡಿದರು.

ಲೋಕೋಪಯೋಗಿ ಇಲಾಖೆ 25 ಕೋಟಿ, ಪಂಚಾಯತ್ ರಾಜ್ ಇಲಾಖೆಗೆ 10 ಕೋಟಿ ಕಾಮಗಾರಿ ಮಾಡಲು ಹಣ ಬಿಡುಗಡೆ ಮಾಡಿದ್ದು ಕೂಡಲೇ ಟೆಂಡರ್ ಕರೆದು ಕಾಮಗಾರಿಗಳನ್ನು ಪ್ರಾರಂಭ ಮಾಡಿ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ಖಡಕ್ಕಾಗಿ ಎಚ್ಚರಿಕೆ ನೀಡಿದರು.

ಸರಕಾರದ ಕೆಲಸಗಳು ಆಗದೆ ಇರುವುದಕ್ಕೆ ಸಾರ್ವಜನಿಕರು ಅಲ್ಲದೆ ಮಂತ್ರಿಯಿದ್ದಾಗಲೂ ಶಾಸಕನಿದ್ದಗಲೂ ತಿಂಗಳಾನುಗಟ್ಟಲೆ ಕಡತಗಳ ವಿಲೇವಾರಿ ಮಾಡಲು ಕಷ್ಟ ಪಟ್ಟಿದ್ದೇನೆ. ಕೆಲವು ಸಲ ಕೆಲಸಗಳ ವಿಳಂಬದಿಂದ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದುಂಟು ಎಂದು ಶಾಸಕರು ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕೃಷಿ ಇಲಾಖೆಯಿಂದ ಸಮಗ್ರ ಕೃಷಿ ಪದ್ಧತಿ ಅಭಿಯಾನ ರಥಕ್ಕೆ ಚಾಲನೆ ನೀಡಿ ಕರಪತ್ರ ಬಿಡುಗಡೆ ಮಾಡಿ ಸಾಂಕೇತಿಕವಾಗಿ ರೈತರಿಗೆ ಉಚಿತ ಬಿತ್ತನೆ ಬೀಜ ವಿತರಣೆ ಮಾಡಿದರು. ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶಾಲೆಗೆ ಪ್ರಥಮ ಸ್ಥಾನ ತೇರ್ಗಡೆ ಹೊಂದಿದ ವಿಧ್ಯಾರ್ಥಿಗಳಿಗೆ ಶಾಸಕರು ಸನ್ಮಾನಿಸಿ ಗೌರವಿಸಿದರು.

ಒಟ್ಟು ಸ್ವಿಕ್ರತವಾದ ಅರ್ಜಿಗಳು 101,ವಿಲೇವಾರಿ 17, ಬಾಕಿಯುಳಿದ ಅರ್ಜಿಗಳು 84, ಇವುಗಳನ್ನು ಪರಿಶೀಲಿಸಿ ಆದಷ್ಟು ಬೇಗ ಬಗೆಹರಿಕೊಡಲಾಗುವುದು ಎಂದು ತಹಸೀಲ್ದಾರ ಮಂಜುನಾಥ ಭೋಗಾವತಿ ತಿಳಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಮಂಜುನಾಥ ಭೋಗವತಿ, ಮುಕ್ಕುಂದ ಗ್ರಾ.ಪಂ.ಅಧ್ಯಕ್ಷೆ ಸಣ್ಣ ಯಶೋಧ,ಉಪಾಧ್ಯಕ್ಷೆ ಲಲಿತಮ್ಮ,ಸದಸ್ಯರಾದ ವೀರೇಶ, ಮಂಜುನಾಥ, ರೇಷ್ಮಾ, ಲಕ್ಷ್ಮಿ, ಶ್ರೀನಿವಾಸ, ಸರೋಜಾ, ಶಶಿಧರ ಸ್ವಾಮಿ, ಅಶೋಕ ರೆಡ್ಡಿ, ಬಿ ಇ ಓ ಶರಣಪ್ಪ, ಸಮಾಜ ಕಲ್ಯಾಣ ಅಧಿಕಾರಿ ವಿಜಯ ಲಕ್ಷ್ಮಿ, ಪರಿಶಿಷ್ಟ ವರ್ಗದ ಕಲ್ಯಾಣ ಅಧಿಕಾರಿ ಶಿವ ಮಾನಪ್ಪ, ಡಾ.ಅಯ್ಯನಗೌಡ ಜೆ.ಇ ಪಾಂಡುರಂಗ, ಬಿಸಿಎಂ ಅಧಿಕಾರಿ ಲಿಂಗಪ್ಪ ಅಂಗಡಿ,ಸಾರಿಗೆ ಅಧಿಕಾರಿ ಪ್ರಕಾಶ,ಜಗನ್ನಾಥ, ಸಹಾಯ ಕೃಷಿ ನಿರ್ದೇಶಕಿ ಶ್ರುತಿ,ಗ್ರಾಮೀಣ ಠಾಣಾ ಪಿ ಎಸ್ ಐ ಯರಿಯಪ್ಪ,ಪಿಡಿಓ ವೀರಭದ್ರಪ್ಪ,ಸೇರಿದಂತೆ ತಾಲೂಕ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಊಟಕ್ಕಾಗಿ ಪರದಾಟ : ಬೆಳಗ್ಗೆಯಿಂದ ಕಾದು ಕುಳಿತ ಸುಸ್ತಾದ ಅದಿಕಾರಿಗಳು, ಪತ್ರಕರ್ತರು,ಅಂಗನವಾಡಿ, ಆಶಾ ಕಾರ್ಯಕರ್ತೆಯರು ಉಟಕ್ಕಾಗಿ ಪರದಾಡಿದ ಘಟನೆ ನಡೆಯಿತು.ಜನಸಾಮಾನ್ಯರು ಸಂಜೆ 5 ಘಂಟೆ ಯವರೆಗೆ ಅಹವಾಲು ಸ್ವೀಕರಿಸುದರಿಂದ ಊಟದ ವ್ಯವಸ್ಥೆ ಮಾಡಲಾಗಿರುತ್ತದೆ.ಊಟ ಬಡಿಸುವವರನ್ನು ಕೇಳಿದರೆ ಅಧಿಕಾರಿಗಳು ಕೊಟ್ಟಷ್ಟು ಅನ್ನ ಮಾಡಿದ್ದೇವೆ. ಮುಗಿದು ಹೋಗಿದೆ ಊಟ ಕೋಡಿ ಎಂದರೆ ಎಲ್ಲಿಂದ ತರದೊ ನಮ್ಮನ್ನು ಏನು ಕೇಳಿತ್ತಿರಾ ಎಂದಾಗ ಮಾತಿಗೆ ಮಾತು ಬೆಳೆದು ಸಣ್ಣ ಜಗಳ ನಡೆದು ಹೋಯಿತು. ಅಧಿಕಾರಿಗಳು ಮಾತ್ರ ಕಂಡರೂ ಕಾಣದಂತೆ ಇದ್ದರು. ಸಾರ್ವನಿಕರು, ಕಾರ್ಯಕ್ರಮದ ಆಯೋಜಕರಿಗೆ ಹಿಡಿ ಶಾಪ ಹಾಕಿ ಮನೆ ಕಡೆ ತೆರಳಿದರು. ಮುಂದಿನ ಕಾರ್ಯಕ್ರಮಗಳಲ್ಲಾದರು ಈ ರೀತಿ ಆಗದಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಾಗಿದೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *