ಇಟ್ಟಿಗಿ ಗ್ರಾಮ ಪಂಚಾಯತಿ ಸದಸ್ಯರೆ & ಅಭಿವೃದ್ಧಿ ಅಧಿಕಾರಿಗಳೇ ಸ್ವಲ್ಪ ಇತ್ತ ಕಡೆ ಗಮನ ಕೊಡಿ. ವಿಜಯನಗರ ಜಿಲ್ಲಾ, ಹೂವಿನ ಹಡಗಲಿ ತಾಲ್ಲೂಕಿನ, ಇಟ್ಟಿಗಿಯಲ್ಲಿ 16/06/2022ರಂದು ಸುರಿದ ಮಳೆಯಿಂದ ಊರಿನ ಐದನೆಯ ವಾರ್ಡಿ ನ (ಇಟ್ಟಿಗಿಯಿಂದ ಹರಪನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್ ರಸ್ತೆ)ಕೊರವರ ಸುರೇಶ್,ತರ್ಲಿ ಪ್ರಕಾಶ್,ಚಿಕ್ಕಣ್ಣನವರ ಶಿವುಕುಮಾರ್ ಮನೆಯ ಮುಂದಿನ ಚರಂಡಿ ನೀರು ವಿಲೇವಾರಿ ಆಗಲು ಸರಿಯಾದ ಮಾರ್ಗವಿಲ್ಲದೆ ಮನೆಯ ಮುಂದೆ ಮೊಣಕಾಲವರೆಗು ನಿಂತಿದ್ದು ವಿಷಾದನೀಯ ಸಂಗತಿ.
ಅಲ್ಲಿನ ವಾಸಿಗಳು ಹೇಳುವ ಪ್ರಕಾರ ಇದು ಇದೇ ಮೊದಲ್ಲಲ್ಲ ಕಳೆದ ಎರಡು ಮೂರು ಬಾರಿ ಮಳೆ ಬಂದಾಗಿನಿಂದಲ್ಲೂ ಇದೇ ಸಮಸ್ಯೆ ಎದುರಿಸ್ತಾ ಇದಿವಿ ಆದರೆ ಇಲ್ಲಿಯ ವರೆಗೂ ಇದಕ್ಕೆ ಪರಿಹಾರ ಮಾತ್ರ ಆಗ್ತಾ ಇಲ್ಲ. ಎರಡು ಮೂರು ಬಾರಿ ಗ್ರಾಮ ಪಂಚಾಯತಿಯ ಸದಸ್ಯರು ಬಂದು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದಾರೆ,ಆದರೆ ಸಮಸ್ಯೆ ಯಾವಾಗ ಬಗೆಹರಿಯುತ್ತೆ ಅಂತಾ ಕೇಳಿದರೆ ಮಾತ್ರ ಒಂದೊಂದು ಸಾರಿ ಒಂದು ಸಬೂಬು ಹೇಳ್ತಾ ಇದ್ದಾರೆ. ಇದು ಹೀಗೆ ಮುಂದುವರೆದರೆ ಅಲ್ಲಿನ ನಿವಾಸಿಗಳ ಗತಿಯೇನು?ಚುನಾವಣೆ ಸಮಯದಲ್ಲಿ ಮಾತ್ರ ನಾವು ನೆನಪಾಗುತ್ತೆವೆ ಉಳಿದ ಸಮಯದಲ್ಲಿ ಯಾರು ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದು ಕೆಲವರ ಅಭಿಪ್ರಾಯ.

ನೀರು ಶೇಖರಣೆಯಾಗಿ ಸೊಳ್ಳೆಗಳು ಉತ್ಪತ್ತಿಯಾಗಿ,ಆ ಸೊಳ್ಳೆಗಳುಗಳಿಂದ ನಾನಾ ರೋಗಗ್ರಸ್ತರಾದರೆ ಹೇಗೆ ಮತ್ತು ಕಲುಷಿತ ನೀರು ಅಲ್ಲಿಯ ನಳಗಳಿಗೆ ಸೇರಿ ಅನಾರೋಗ್ಯ ಕಾಡಿದರೆ ಇದಕ್ಕೆ ಹೊಣೆ ಯಾರು ಎಂಬುದೊಂದೆ ನಮ್ಮ ಪ್ರಶ್ನೆ.ಎನೇ ಆಗಲಿ ಅಧಿಕಾರದಲ್ಲಿರುವವರು ಆದಷ್ಟು ಬೇಗ ಇ ಸಮಸ್ಯೆಯನ್ನು ಪರಿಹರಿಸಲು ಈ ಮೂಲಕ ಕೇಳಿಕೊಳ್ಳುತ್ತೆವೆಂದು ಅಲ್ಲಿಯ ನಿವಾಸಿಗಳು ಹೇಳುತ್ತಿದ್ದಾರೆ.ಇದೊಂದೆ ಸಮಸ್ಯೆ ಅಲ್ಲ ಇಟ್ಟಿಗಿ ಗ್ರಾಮದ KNSC ಹೈಸ್ಕೂಲ್ ನ ಹತ್ತಿರದ ಮನೆಗಳಿಗೆ ಕಳೆದ ಆರು ತಿಂಗಳಿನಿಂದ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎನ್ನುವುದು ಅಲ್ಲಿಯ ನಿವಾಸಿ ಹಾಗೂ ಇದು ಸ್ವತಃ ಇದೇ ಪತ್ರಿಕೆಯ ವರದಿಗಾರ ಮನೆಯು ಅಲ್ಲಿಯೇ ಇದೇ ಇದರ ಬಗ್ಗೆ ಕಳೆದೆರಡು ಬಾರಿ ಹಳೆಯ PDO ಗಳಿಗೆ ಸಮಸ್ಯೆ ಬಗೆಹರಿಸಲು ಮನವಿ ಪತ್ರ ಬರೆದಿದ್ದು .ನೂತನವಾಗಿ ಆಯ್ಕೆಯಾದ PDO ಗಳಿಗೂ ಇದರ ಬಗ್ಗೆ ಮಾಹಿತಿ ನೀಡಿದ್ದೆವೆ ಆದರೆ ಪರಿಹಾರ ಮಾತ್ರ ಕನಸಿನ ಮಾತಾಗಿದೆ.
ಒಂದು ದಿನ ಬಿಟ್ಟು ಒಂದು ದಿನ ಬರೋ ನೀರು ಸರಿಯಾಗಿ 2ರಿಂದ 3ಕೊಡ ಮಾತ್ರ ಬರುತ್ತವೆ.ಇಷ್ಟು ನೀರಿನಿಂದ ದೈನಂದಿನ ಜೀವನ ನಡೆಯುವುದಾದರು ಹೇಗೆ?ಜಲಜೀವನ್ ಮಿಷನ್ ಸಂಪರ್ಕವನ್ನು ಈಗಾಗಲೇ ಕಾರ್ಯರೂಪಕ್ಕೆ ತಂದಿದ್ದಾರೆ ಆದರೆ ಆ ನಳಗಳಲ್ಲಿ ನೀರು ಮಾತ್ರ ಬಿಡ್ತಾ ಇಲ್ಲ.(ಮೊದಲ ಬಾರಿ ನೀರು ಬಿಟ್ಟು ಪರೀಕ್ಷೆ ನಡೆಸಿ ಯಶಸ್ವಿಯಾಗಿದೆ)ಇಷ್ಟು ದಿನ ಕೇಳಿದ್ರೆ ಜಲಜೀವನ್ ಯೋಜನೆ ಮೂಲಕ ನಿಮಗೆ ಸಾಕಾಗುವಷ್ಟು ನೀರು ಪೂರೈಸುತ್ತೆವೆ ಎಂದ ಗ್ರಾ ಪಂ ಸದಸ್ಯರು ಮತ್ತು PDO ಗಳು ಇವಾಗ್ಯಾಕೆ ಜಲಜೀವನ್ ಯೋಜನೆ ಮೂಲಕ ನೀರು ಹರಿಸ್ತಾ ಇಲ್ಲ ?ಯೋಜನೆಗಳನ್ನು ಪುಸ್ತಕಕ್ಕೆ ಮಾತ್ರ ಸೀಮಿತವೇ(ಲೆಕ್ಕ ಬರೆದಿಡಲು) ಅದರಲ್ಲಿ ನೀರು ಬಂದರೆ ಯೋಜನೆಗೊಂದು ಅರ್ಥ ಬರುವುದು.ಏನೇ ಆಗಲಿ ಇ ಮೇಲಿನ ಎಲ್ಲಾ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿ ಎನ್ನುವುದೊಂದೆ ನಮ್ಮ ಪತ್ರಿಕೆಯ ಆಶಯ.
ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
