;

ವನಸಿರಿ ಅಮರೇಗೌಡ ಮಲ್ಲಾಪುರ ಕಾರ್ಯ ಶ್ಲಾಘನೀಯ ವೆಂಕಟರಾವ್ ನಾಡಗೌಡ್ರು….!!!

365 ದಿನ ಹಸಿರು ಕ್ರಾಂತಿ ಪರಿಸರ ಸೇವೆ ಮಾಡುತ್ತಿರುವ ವನಸಿರಿ ಅಮರೇಗೌಡ ಮಲ್ಲಾಪುರ ಕಾರ್ಯ ಶ್ಲಾಘನೀಯ ವೆಂಕಟರಾವ್ ನಾಡಗೌಡ್ರು.

ಸಿಂಧನೂರು : ಜೂನ್ 13. ವರ್ಷದ 365 ದಿನ ಹಸಿರು ಕ್ರಾಂತಿ , ಪರಿಸರ ಸೇವೆ ಮಾಡುತ್ತಿರುವ ವನಸಿರಿ ಅಮರೇಗೌಡ ಮಲ್ಲಾಪುರ ಅವರ ಕಾರ್ಯ ಶ್ಲಾಘನೀಯ,ಅವುಗಳನ್ನು ಸಂರಕ್ಷಿಸುವ ಪೋಷಿಸುವ ಜವಾಬ್ದಾರಿ ಮಕ್ಕಳಿಗೆ ನೀಡಬೇಕು ಎಂದು ಶಾಸಕ ವೆಂಕಟರಾವ್ ನಾಡಗೌಡ ತಿಳಿಸಿದರು.

ನಗರದ ಸರಕಾರಿ ಬಾಲಕರ ಫ್ರೌಡಶಾಲೆಯಲ್ಲಿ ಸಾಮಾಜಿಕ ಅರಣ್ಯ ವಲಯ,ವನಸಿರಿ ಫೌಂಡೇಶನ್ ರಾಜ್ಯ ಘಟಕ, ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಪದನಿಮಿತ್ತ ತಾಲೂಕು ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಹಾಗೂ ಸಸಿ ನೆಡುವ ಕಾರ್ಯಕ್ರಮವನ್ನು ಸಸಿ ನೆಟ್ಟು ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.

ಮಕ್ಕಳಲ್ಲಿ ಗಿಡಮರಗಳ ಬಗ್ಗೆ ಜಾಗೃತಿ ಮೂಡಿಸಲು ಸಹಕಾರಿಯಾಗಿದೆ ಶಿಕ್ಷಕರು ಒಂದೊಂದು ಸಸಿಗಳನ್ನು ನೀಡಿ ಅವುಗಳನ್ನು ಸಂರಕ್ಷಿಸುವ ಪೋಷಿಸುವ ಜವಾಬ್ದಾರಿ ಮಕ್ಕಳಿಗೆ ನೀಡಿ ಆಗ ಅವರಿಗೆ ಒಂದು ಸಸಿಗಳ ಬಗ್ಗೆ ಕಳಕಳಿ ಬರುತ್ತೆ, ಅವರ ಕಾರ್ಯದಿಂದಲೇ ಇಂದು ಕಲ್ಯಾಣ ಕರ್ನಾಟಕದಾದ್ಯಂತ ಹಸಿರಾಗಿ ಪರಿವರ್ತನೆ ಆಗಿದೆ ಅವರಿಗೆ ಮುಂದಿನ ದಿನಗಳಲ್ಲಿ ಉತ್ತಮ ಭವಿಷ್ಯವಿದೆ ಎಂದರು.

ನಂತರ ಸೋಮನಾಥ ಶಿವಾಚಾರ್ಯರು ಮಾತನಾಡಿ ಯಾವುದೇ ಫಲಾಪೇಕ್ಷವಿಲ್ಲದೆ ವನಸಿರಿ ತಂಡ ನಿರಂತರ ಎಂಟು ವರ್ಷಗಳ ಕಾಲ ಹಸಿರು ಕ್ರಾಂತಿಯನ್ನು ಮೂಡಿಸುತ್ತಿದೆ ಇದಕ್ಕೆ ಅಧಿಕಾರಿಗಳ ಸಹಕಾರ ಮತ್ತು ನನ್ನ ಆರ್ಶೀವಾದ ಸದಾ ಇರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಿ.ಡಬ್ಲ್ಯೂ.ಡಿ.ಕ್ಯಾಂಪಿನ ಎಲ್ಲಾ ವಾರ್ಡಗಳಲ್ಲಿ ಮಕ್ಕಳ ಜೊತೆ ವನಸಿರಿ ತಂಡದ ಸದಸ್ಯರು ಜಾಥಾ ಮಾಡುವ ಮೂಲಕ ಘೋಷಣೆಗಳನ್ನು ಕೂಗುತ್ತಾ ಪಥಸಂಚಲನ ಮಾಡಲಾಯಿತು.

ತಹಶೀಲ್ದಾರ ಮಂಜುನಾಥ ಭೋಗಾವತಿ, ಪಿ. ಎಸ್. ಐ. ಸೌಮ್ಯ ಹೀರೇಮಠ, ಶಿವನಗೌಡ ಗೊರೆಬಾಳ, ಶಿಕ್ಷಣಾಧಿಕಾರಿಗಳಾದ ಶರಣಪ್ಪ ಮಟ್ಟೂರು, ಅರಣ್ಯಾಧಿಕಾರಿಗಳಾದ ರುದ್ರಮುನಿ,ನಗರಸಭೆಯ ಪೌರಾಯುಕ್ತ ಮಂಜುನಾಥ ಗುಂಡೂರು,ಕೃಷಿ ಇಲಾಖೆ ಅಧಿಕಾರಿಗಳಾದ ಡಾ.ಪ್ರಿಯಾಂಕ,ಶಾಲೆಯ ಮುಖ್ಯೋಪಾಧ್ಯೆಯರಾದ ಜಿ.ಸುಮಿತಾ ಶರ್ಮ,ಅಥಿತಿಗಳಾಗಿ ಆಗಮಿಸಿದ್ದರು.

ಈ ಸಂದರ್ಭದಲ್ಲಿ ವನಸಿರಿ ಫೌಂಡೇಶನ್ ಗೌರವಾದ್ಯಕ್ಷರಾದ ಶಂಕರಗೌಡ ಎಲೆಕೂಡ್ಲಿಗಿ, ರಾಜ್ಯಾದ್ಯಕ್ಷರಾದ ಅಮರೇಗೌಡ ಮಲ್ಲಾಪೂರ, ಸಂಗೀತ ಹಿರೇಮಠ, ಶಿವಲೀಲಾ ಹಿರೇಮಠ, ಮಲಕಾಜಮ್ಮ ಅರಣ್ಯಾಧಿಕಾರಿಗಳು,ಗಿರಿಸ್ವಾಮಿ ಹೆಡಿಗಿನಾಳ,ರಂಜಾನ್ ಸಾಬ್ ಎಸ್. ಡಿ. ಎಮ್. ಸಿ. ಅದ್ಯಕ್ಷರು,ದುರಗೇಶ ಡಿ.ಎಸ್.ಪಿ,ರಾಜು ಬಳಗಾನೂರ,ಮುತ್ತು ಪಾಟೀಲ ಬೂತಲದಿನ್ನಿ, ಚನ್ನಪ್ಪ ಕೆ. ಹೊಸಳ್ಳಿ ,ಮುದಿಯಪ್ಪ ಹೊಸಳ್ಳಿ ಕ್ಯಾಂಪ್,ಚಂದ್ರಶೇಖರ ಪವಾಡಶಟ್ಟಿ,ರಾಜು ಮಲ್ಲಾಪೂರ, ಪೀರಪ್ಪ ಅರಣ್ಯಾಧಿಕಾರಿಗಳು ಶಾಲೆಯ ಮಕ್ಕಳು ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend
;