ಉಚಿತ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ…!!!

ಉಚಿತ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ.

ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಹೊಳಲು ಗ್ರಾಮದಲ್ಲಿ ‘8ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಶುಭಾಷಯಗಳೊಂದಿಗೆ’ ಬಸವ ಪತಂಜಲಿ ಯೋಗ ಸಮಿತಿ ಹೊಳಲು, ಶ್ರೀ ಯೋಗ ಸಂಜೀವಿನಿ ಜನಸೇವಾ ಟ್ರಸ್ಟ್ (ರಿ) ಇಟ್ಟಿಗಿ ಇವರ ಸಹಯೋಗದೊಂದಿಗೆ, ಸ್ವಾಮಿ ವಿವೇಕಾನಂದ ಕಾಲೇಜು ಮತ್ತು ಪ್ರೌಢಶಾಲಾ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ವರ್ಗ,ಗ್ರಾಮ ಪಂಚಾಯತಿ ಹೊಳಲು ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳು ಮತ್ತು ಹೊಳಲಿನ ಎಲ್ಲಾ ಸಂಘ ಸಂಸ್ಥೆಗಳು ಸಹಯೋಗದೊಂದಿಗೆ. ಶ್ರೀ ಮತಿ ಗಂಗಮ್ಮ ಶ್ರೀ ಶಿವಕುಮಾರ ಯೋಗಚಾರ್ಯರು ಇವರ ನೇತೃತ್ವದಲ್ಲಿ *ಉಚಿತ ಬೃಹತ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ* ವನ್ನು ಯೋಗ ಕ್ರಿಯೆಯ ಆರಂಭದೊಂದಿಗೆ ಚಾಲನೆ ನೀಡಿದರು. ಪತ್ರಿಕೆಯೊಂದಿಗೆ ಮಾತಾಡಿದ ಯೋಗಾಚಾರ್ಯರಾದ ಶ್ರೀ ಶಿವಕುಮಾರ (ಯೋಗ ಗುರುಗಳು) ರವರು ಈ ಯೋಗ ಶಿಬಿರವು ದಿನಾಂಕ:10-06-2022ರಿಂದ 24-06-2022 ರ (15ದಿನಗಳ)ವರೆಗೆ ಪ್ರತಿದಿನ ಬೆಳಿಗ್ಗೆ 5-00 ರಿಂದ 7-00 ಗಂಟೆಯ ವರೆಗೆ ಸ್ವಾಮಿ ವಿವೇಕಾನಂದ ಪ್ರೌಢಶಾಲಾ ಆವರಣ,ಹೊಳಲು ಇಲ್ಲಿ ನಡೆಯಲಿದ್ದು .ಹೊಳಲು ಹಾಗೂ ಸುತ್ತಮುತ್ತಲಿನ ಗ್ರಾಮದ ಜನ ಹೆಚ್ಚಿನ ಸಂಖ್ಯೆಯಲ್ಲಿ ಶಿಬಿರದಲ್ಲಿ ಪಾಲ್ಗೊಂಡು ರೋಗ ಮುಕ್ತ ಜೀವನ ನಡೆಸಲು ಕೋರಲಾಗಿದೆ ಎಂದರು.ಯೋಗದ ಬಗ್ಗೆ ವಿವರಿಸಿದ ಯೋಗ ಗುರುಗಳು ಮನುಷ್ಯನ ಜೀವನವನ್ನು ಉತ್ತಮಗೊಳಿಸಲು, ಆತನನ್ನು ಆನಂದದಿಂದ ಜೀವಿಸುವಂತೆ ಮಾಡಲು ಪುರಾತನ ಕಾಲದಲ್ಲಿಯೇ ಯೋಗ ಪಿತಾಮಹ ಮಹರ್ಷಿ ಪತಂಜಲಿ ಮುನಿಯು ಅಷ್ಟಾಂಗ ಯೋಗವನ್ನು ರಚಿಸಿ ಲೋಕೋದ್ಧಾರಕ್ಕಾಗಿ ಶ್ರಮಿಸಿದ್ದಾರೆ.

ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ, ಸಮಾಧಿ ಎಂಬ ಎಂಟು ಮೆಟ್ಟಿಲುಗಳನ್ನೊಳಗೊಂಡ ಈ ಯೋಗಶಾಸ್ತ್ರದಲ್ಲಿ ಮನುಷ್ಯ ಸರಿಯಾದ ರೀತಿಯಲ್ಲಿ ಹೇಗೆ ಜೀವಿಸಬೇಕೆಂಬುದನ್ನು ಶಾಸ್ತ್ರೀಯವಾಗಿ ಹೇಳಿಕೊಟ್ಟಿದ್ದಾರೆ. ಆತ್ಮ ಹಾಗೂ ಪರಮಾತ್ಮಗಳ ಸಂಬಂಧ ಅನನ್ಯ. ಅಖಂಡ ಹಾಗೂ ಅನವರತ. ಇದನ್ನು ಅರ್ಥಮಾಡಿ ಕೊಳ್ಳಲು ಮಹಾಮಹಿಮರೆಲ್ಲಾ ತಮ್ಮದೇ ಆದ ಹಾದಿಯಲ್ಲಿ ಸಾಗಿದ್ದಾರೆ. (ಕರ್ಮಯೋಗ, ಭಕ್ತಿಯೋಗ, ಜ್ಞಾನಯೋಗ ಇತ್ಯಾದಿ) ಹಾಗಾಗಿ ಸುಲಭವಾಗಿ ಅರ್ಥವಾಗುವಂತೆ ಹೇಳುವುದಾದರೆ “ಯೋಗವೆಂಬುದು ದೇಹವನ್ನು ಮನಸ್ಸಿನೊಟ್ಟಿಗೆ ಸೇರಿಸುವ ಸುಂದರ ಬಂಧನವಾಗಿದೆ”. ನಾವು ದೈಹಿಕವಾಗಿ ಉತ್ತಮ ಕೆಲಸಗಳನ್ನು ಮಾಡಬೇಕಾದರೆ, ನಮ್ಮಲ್ಲಿ ಒಳ್ಳೆಯ ಮನಸ್ಸಿರಬೇಕು ಎಂದರು. ಏನೇ ಆಗಲಿ ನಿತ್ಯ ಜೀವನದ ಜೆಂಜಾಟದಲ್ಲಿ ಸ್ವಲ್ಪಕಾಲವಕಾಶ ಮಾಡಿಕೊಂಡು ಇಂತಹ ಉಚಿತ ಶಿಬಿರದಿಂದ ಯೋಗ ಕಲಿತು ಉತ್ತಮ ಹಾಗೂ ಆರೋಗ್ಯಯುತ ಜೀವನ ನಡೆಸಲ್ಲೆನ್ನುವುದೊಂದೆ ನಮ್ಮ ಪತ್ರಿಕೆಯ ಆಶಯ.

ವರದಿ – ಪ್ರಕಾಶ್ ಆಚಾರ್ ಇಟ್ಟಿಗಿ.

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend