ಎಗ್ಗಿಲ್ಲದೇ ನಡೆಯುತ್ತಿದೆ ಆಕ್ರಮ ಮರಳು ದಂಧೆ – ಬೇಸತ್ತು ಸಾರ್ವಜನಿಕರ ಆಕ್ರೋಶ.
ಸಿಂಧನೂರು : ಜೂನ್ 11.ತಾಲೂಕಿನ ಭೂತಲದಿನ್ನಿ ಮತ್ತು ಮಲ್ಲಾಪೂರು ಗ್ರಾಮದ ನಡುವಿನ ಹಿರೇಹಳ್ಳದಲ್ಲಿ ರಾತ್ರೋ ರಾತ್ರಿ,ಬೆಳಗಿನ ಜಾವ ಪಿ. ಡಬ್ಲ್ಯೂ ಡಿ. ಕ್ಯಾಂಪಿನ್ ಮುನ್ನಾ ಎನ್ನುವ ಹೆಸರಿನ ವ್ಯಕ್ತಿಯ ಎರಡು ಟ್ರ್ಯಾಕ್ಟರ್ ಗಳಲ್ಲಿ ಅಕ್ರಮ ಮರಳು ಸಾಗಾಣಿಕೆ ನಡೆಯುತ್ತಿದ್ದನ್ನು ಕಂಡ ಮಲ್ಲಾಪೂರು ಗ್ರಾಮಸ್ಥರಾದ ದುರುಗಪ್ಪ ಡಿ. ಡಿ. ಮತ್ತು ನಿಂಗರಾಜ ಮಲ್ಲಾಪೂರು ಅವರು ಅಕ್ರಮ ಮರಳು ಸಾಗಾಣಿಕೆ ಬಗ್ಗೆ ಪೋಲಿಸರಿಗೆ ಪೋನ್ ಕರೆ ಮಾಡಿದರೆ ಸ್ವೀಕರಿಸುತ್ತಿಲ್ಲ, ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂಬ ಆರೋಪ ಮಾಡಿದರು.

ಪೋಲಿಸ್ ನವರು ಕರೆ ಸ್ವೀಕರಿಸದಿದ್ದಾಗ ಹಿರೇಹಳ್ಳದಲ್ಲಿ ಮಲ್ಲಾಪೂರು ಮತ್ತು ಭೂತಲದಿನ್ನಿ ಗ್ರಾಮಕ್ಕೆ ಓಡಾಡುವ ದಾರಿಯಲ್ಲಿ ಮರಳು ತುಂಬಬೇಡಿ ಯಾಕೆಂದರೆ ಈ ದಾರಿಯಲ್ಲಿ ಬೈಕ್, ಟ್ರ್ಯಾಕ್ಟರ್, ಶಾಲಾ ಮಕ್ಕಳು ,ಮಹಿಳೆಯರು,ವೃದ್ದರು ಒಡಾಡುವರಿಂದ ತೆಂಗು ಅಥವಾ ಗುಂಡಿಗಳಲ್ಲಿ ಬೀಳುವಂತ ಪರಿಸ್ಥಿತಿ ಸರ್ವ ಸಾಮಾನ್ಯವಾಗಿ ಬಿಟ್ಟಿದೆ ಎಂದು ಅಕ್ರಮ ಮರಳು ಸಾಗಾಣಿಕೆದಾರರಿಗೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಅಕ್ರಮ ಮರಳು ಸಾಗಾಟ ತಡೆಗೆ ಎಷ್ಟೇ ಕಠಿಣ ನಿಯಮ ಜಾರಿಗೊಳಿಸುತ್ತಿದ್ದರೂ ಅಕ್ರಮ ದಂಧೆ ನಿಲ್ಲುತ್ತಿಲ್ಲ. ಅಕ್ರಮ ಮರಳು ದಂಧೆಕೋರರಿಗೆ ರಾಜಕೀಯ ಪಕ್ಷಗಳ ಪ್ರಭಾವಿ ನಾಯಕರ ಬೆಂಬಲವಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇನ್ನು ಗ್ರಾಮೀಣ ಪ್ರದೇಶದ ಜನರು ಮನೆ ನಿರ್ಮಿಸಿಕೊಳ್ಳುವ ಬಡವರಿಗೆ ಮರಳು ಸಿಗುತ್ತಿಲ್ಲ. ಮರಳಿನ ಬೆಲೆ ಗಗನಕ್ಕೇರಿದೆ. ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇನ್ನಾದರೂ ಅಕ್ರಮಕ್ಕೆ ಕಡಿವಾಣ ಹಾಕಿ ಜನಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಮರಳು ಸಿಗುವಂತೆ ಮಾಡಬೇಕಿದೆ ಎಂದು ಪತ್ರಿಕೆಗೆ ತಿಳಿಸಿದರು.
ಇತ್ತ ಹರಿವ ನೀರಿನಲ್ಲಿ ಮರಳು ಎತ್ತಬಾರದು ಎಂಬ ಸರ್ಕಾರದ ನಿಯಮವಿದ್ದರೂ ಭೂತಲದಿನ್ನಿ ಗ್ರಾಮದಲ್ಲಿ ಮಾತ್ರ ತಾಲೂಕು ಆಡಳಿತ ಪೋಲಿಸ್ ಇಲಾಖೆ ಕಣ್ಮುಚ್ಚಿ ಕುಳಿತಿದೆ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.ಹಳ್ಳ ಸರಕಾರದ ಸ್ವತ್ತಾಗಿದೆ. ಭೂಮಿಯ ಮೇಲ್ಭಾಗದಿಂದ 3 ಅಡಿ ಒಳಗಿನ ಎಲ್ಲ ಸಂಪತ್ತು ಸರಕಾರದ ಸ್ವತ್ತು. ನಿಯಮ ಉಲ್ಲಂಘಿಸಿ ಇಲ್ಲಿ ಮರಳು ಸಾಗಾಣಿಕೆ ನಡೆಯುತ್ತಿದ್ದರೂ ಇದುವರೆಗೆ ಯಾರ ಮೇಲೂ ಕ್ರಮ ಕೆಗೊಂಡಿಲ್ಲ. ಮರಳಿಗೆ ಒಳ್ಳೆಯ ಬೆಲೆ ಇರುವುದರಿಂದ ಪಟ್ಟಭದ್ರರು ಲಾಬಿ ನಡೆಸಿ ಮರಳು ಅಕ್ರಮ ಸಂಗ್ರಹಣೆ ಮತ್ತು ಸಾಗಾಣಿಕೆಗೆ ಮುಂದಾಗಿದ್ದಾರೆ ಇನ್ನೂ ಮುಂದೆಯಾದರು ಪೋಲಿಸ್ ಮತ್ತು ತಾಲೂಕು ಆಡಳಿತ ಕ್ರಮ ಕೈಗೊಳ್ಳುತ್ತಾರೋ ಕಾದು ನೋಡಬೇಕಾಗಿದೆ…

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
