ಇಟ್ಟಿಗಿ ಪೋಲಿಸರಿಂದ ಮಿಂಚಿನ ಕಾರ್ಯಚರಣೆ,ಅಕ್ರಮ ಮಧ್ಯ ಮಾರಾಟಗಾರರ ಬಂಧನ.
ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಪೋಲಿಸ್ ಠಾಣಾ ವ್ಯಾಪ್ತಿಯ ಅಡವಿಮಲ್ಲನಕೇರಿ ತಾಂಡದ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಮಾರಾಟ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಮಧ್ಯ ಸಂಗ್ರಹಿಸಿ ಮಾರಾಟ ಮಾಡುತ್ತಿದ್ದ ಅಡವಿಮಲ್ಲನಕೇರಿ ತಾಂಡದ ನಿವಾಸಿಯಾದ ಪೂರ್ಯನಾಯ್ಕನನ್ನು ಸರಕು ಸಮೇತ ದಿನಾಂಕ 04-06-2022ರಂದು ಬಂಧಿಸುವಲ್ಲಿ ಇಟ್ಟಿಗಿ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಖಚಿತ ಮಾಹಿತಿ ಆಧಾರದ ಮೇಲೆ ವಿ.ಎಸ್.ಹಾಲಮೂರ್ತಿ ರಾವ್(ಡಿವೈ,ಎಸ್,ಪಿ,ಹರಪನಹಳ್ಳಿ). ರಮೇಶ್ ಕುಲಕರ್ಣಿ(ಸಿಪಿಐ ಹಡಗಲಿ ವೃತ್ತ)ರವರ ಮಾರ್ಗದರ್ಶನದಲ್ಲಿ ವೀರೇಶ್ ಪಿ ಎಸ್ ಐ ಇಟ್ಟಿಗಿ,ಹಾಗೂ ವಿಶ್ವೇಶ್ವರಯ್ಯ, ಎ.ಎಸ್.ಐ. ಮತ್ತು ಇಟ್ಟಿಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳಾದ ರಾಜೇಂದ್ರ ನಾಯ್ಕ,ಬಲರಾಮ ನಾಯ್ಕ,ರಾಜಶೇಖರ, ಸತೀಶ್ ನಾಯ್ಕ,ಚಿದಾನಂದ, ಉಮೇಶ್ ನಾಯ್ಕ,ಬಿ.ಹೊಲೆಪ್ಪ, ಶ್ರೀ ಮತಿ ಕರಿಯಮ್ಮನವರನ್ನು ಒಳಗೊಂಡ ಪೋಲಿಸ್ ತಂಡ ದಾಳಿ ನಡೆಸಿ, ಬಂಧಿತ ಆರೋಪಿಯಿಂದ ಸುಮಾರು 89996/ರೂ ಬೆಲೆಯ ಒಟ್ಟು 236.460 ಲೀಟರ್ ಮಧ್ಯವನ್ನು ವಶಪಡಿಸಿಕೊಂಡಿರುತ್ತಾರೆ. ಇಟ್ಟಿಗಿ ಪೋಲಿಸ್ ಠಾಣೆಯ ವೀರೇಶ್ PSI ರವರ ಹಾಗೂವಿಶ್ವೇಶ್ವರಯ್ಯ ASI ಮತ್ತು ಇಟ್ಟಿಗಿ ಪೋಲಿಸ್ ಠಾಣೆಯ ಸಿಬ್ಬಂದಿಗಳ ಈ ಕಾರ್ಯವೈಖರಿಗೆ ಡಾ:ಅರುಣ್ ಕೆ.IPS ಪೋಲಿಸ್ ಅಧೀಕ್ಷಕರು,ವಿಜಯನಗರ ಜಿಲ್ಲೆರವರು ಶ್ಲಾಘಿಸಿದ್ದಾರೆ. ಇಂತಹ ಇನ್ನೂ ಅನೇಕ ಕಾರ್ಯಾಚರಣೆಗಳು ನಡೆದು ಅಕ್ರಮಗಳು ನಿಲ್ಲಲಿ ಎನ್ನುವುದೊಂದೆ ನಮ್ಮ ಪತ್ರಿಕೆಯ ಸದಾಶಯ.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
