ಕಂಚಿಕೇರಿ ಕ್ಷೇತ್ರವನ್ನು ಜಿಲ್ಲಾ ಕ್ಷೇತ್ರವನ್ನಾಗಿ ಮಾಡಲು ರಸ್ತೆ ತಡೆದು ಪ್ರತಿಭಟನೆ……
ಹರಪನಹಳ್ಳಿ :ಜು 6 ಕಂಚಿಕೇರಿ ಗ್ರಾಮವನ್ನು ಜಿಲ್ಲಾಪಂಚಾಯಿತಿ ಕ್ಷೇತ್ರ ಮಾಡುವಂತೆ ಒತ್ತಾಯಿಸಿ ಕಂಚಿಕೇರಿ,ಹಳ್ಳಿಕೇರಿ, ಕೊಡಿತಂಡ ಹಳ್ಳಿಕೇರಿ ಕ್ಯಾಂಪ್, ವಡರಹಳ್ಳಿ, ಕೊರಚರಹಟ್ಟಿ, ಬೆಂಡಿಗೇರಿ,ಅರಸೀಕೆರೆ, ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರ ನೇತೃತ್ವದಲ್ಲಿ ದಾವಣಗೆರೆ ಮುಖ್ಯ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿ ವಿಜಯ ನಗರಕ್ಕೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಪಿ ಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ. ಬಿದಿರಿ ಕೊಟ್ರೇಶ್ ಮಾತನಾಡಿ ಕಂಚಿಕೇರಿ ಗ್ರಾಮ ಬೌಗೋಳಿಕ ವಾಗಿ ಅಂಕೆ ಸಂಖ್ಯೆಯಲ್ಲಿ ಬಹು ದೊಡ್ಡ ಗ್ರಾಮವಾಗಿದ್ದು,6000 ಮತದಾರರು ಇದ್ದು, 12000 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇದ್ದು, ಪ್ರಾಥಮಿಕ ಶಿಕ್ಷಣದಿಂದ ಪದವಿ ಪೂರ್ವ ಕಾಲೇಜು ಇದ್ದು ಸುಸ್ಸಾಜೀತವಾದ ಗ್ರಾಮ ಪಂಚಾಯಿತಿ ಸರಕಾರಿ ಆಸ್ಪತ್ರೆ ಐತಿಹಾಸಿಕ ದೇವಸ್ಥಾನಗಳುಈ ಗ್ರಾಮದಲ್ಲಿದ್ದು, ಮುಖ್ಯವಾಗಿ ಹರಪನಹಳ್ಳಿ, ಕೊಟ್ಟರು, ಅರಸೀಕೆರೆ, ದಾವಣಗೆರೆಗೆ ಹೋಗಿಬರಲು ಪ್ರಮುಖ ರಸ್ತೆಗಳ ಸಂಪರ್ಕ ಕಲ್ಪಿಸುವ ಗ್ರಾಮವಾಗಿದ್ದು ಈ ಗ್ರಾಮಕ್ಕೆ ಹಳ್ಳಿಕೇರೆ, ಕೊಡಿತಾಂಡ, ಹೊನ್ನೇನಹಳ್ಳಿ, ಒಡ್ಡೆರಹಳ್ಳಿ,
ವಿ, ಕೊರಚರಹಟ್ಟಿ, ಹಳ್ಳಿಕೇರೆ ಕ್ಯಾಂಪ್, ಸೇರಿದಂತೆ ಸುಸಜ್ಜಿತ ಗ್ರಾಮ ಪಂಚಾಯಿತಿ ಇದ್ದು ಇತ್ತೀಚಿಗೆ ಕಂಚಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರ ಬಿಟ್ಟು ಹೋಗಬಾರದು ಎಂದು ಸರ್ವ ಸದಸ್ಯರು ತೀರ್ಮಾನ ಮಾಡಿಕೊಂಡಿರುತ್ತಾರೆ.ಈ ಎಲ್ಲಾ ವ್ಯವಸ್ಥೆಯುಳ್ಳ ಕಂಚಿಕೇರಿ ಜಿಲ್ಲಾ ಪಂಚಾಂಯಿತಿ ಕ್ಷೇತ್ರವನ್ನು ತಪ್ಪಿಸಲು ಸಾಧ್ಯವಿಲ್ಲ ಎಂದರು.
ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಪ್ಪ ಬೋವಿ ಸಮಾಜದ ತಾಲೂಕು ಅಧ್ಯಕ್ಷ ಎಂಬಿ ಅಂಜಿನಪ್ಪ ಮಾತನಾಡಿ ಕಂಚಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಯಡಹಳ್ಳಿ ಗುಂಡಗತ್ತಿ ತೌಡೂರು ಪಂಚಾಯಿತಿಗಳನ್ನು ಸೇರಿಸಿ ಜಿಲ್ಲಾಪಂಚಾಯಿತಿ ಕ್ಷೇತ್ರವನ್ನಾಗಿ ಕೇಂದ್ರೀಕರಿಸಿತ್ತು. ನಂತರದಲ್ಲಿ ಯಡಿಹಳ್ಳಿ ಮತ್ತು ಗುಂಡಗತ್ತಿ ಪಂಚಾಯಿತಿಗಳನ್ನು ಕಂಚಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಅವರು ಅಣಜಿಗೆರೆ ಮಾದಿಹಳ್ಳಿ ಪಂಚಾಯಿತಿ ಸೇರಿಸಿ ಕಂಚಿಕೆರೆ ಜಿಲ್ಲಾಪಂಚಾಯಿತಿ ಕೇಂದ್ರೀಕರಿಸಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಅನಿರ್ದಿಷ್ಟ ಅಸಂಬದ್ಧ ಹಾಗೂ ಅವೈಜ್ಞಾನಿಕ ತೀರ್ಮಾನಗಳು ಹಾಗೂ ವಿಚಾರಗಳನ್ನು ಒಳಗೊಂಡ ಕಂಚಿಕೇರಿ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನು ತೆಗೆದು ಹೊಸದಾಗಿ ಹಿರೇಮೇಗಳಗೆರೆ ಜಿಲ್ಲಾ ಪಂಚಾಯಿತಿ ಕ್ಷೇತ್ರವನ್ನಾಗಿ ಕೇಂದ್ರೀಕರಿಸಿದ್ದು ಸರಿಯಲ್ಲ.
ಪ್ರಸ್ತುತ ಕಂಚಿಕೇರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳನ್ನು ಕಂಚಿಕೇರಿ ಯನ್ನು ಉಚ್ಚಂಗಿದುರ್ಗ ಜಿಲ್ಲಾ ಪಂಚಾಯಿತಿಗೆ ಸೇರಿಸುವ ವೈಜ್ಞಾನಿಕ ತೀರ್ಮಾನ ಸರಿಯಲ್ಲ. ಆದ್ದರಿಂದ ಕಳೆದ 15 ವರ್ಷಗಳಿಂದ ಜಿಲ್ಲಾ ಪಂಚಾಯಿತಿ ಕ್ಷೇತ್ರವಾಗಿರುವ ಕಂಚಿಕೇರಿ ಯನ್ನು ಜಿಲ್ಲಾ ಪಂಚಾಯಿತಿಯನ್ನಾಗಿ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಕಚೇರಿಯಿಂದ ಹರಪನಹಳ್ಳಿಯ ವರೆಗೆ ಪಾದಯಾತ್ರೆ ಮೂಲಕ ವಿನೂತನ ಪ್ರತಿಭಟನೆ ಮಾಡಲಾಗುವುದು ಎಂದು ಸರ್ಕಾರಕ್ಕೆ ಎಚ್ಚರಿಸಿದರು.
ಪಿಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ರೆಡ್ಡಿ ಶಾಂತಕುಮಾರ್ ಮಾತನಾಡಿ ಹುಲಿ ಇರುವ ಕಂಚಿಕೇರಿ ಜಿಲ್ಲಾ ಪಂಚಾಯಿತಿ ಗಳನ್ನು ತೆಗೆದು ಇನ್ನೊಂದು ಜಿಲ್ಲಾ ಪಂಚಾಯಿತಿಗೆ ಸೇರಿಸುವಾಗ ಸ್ಥಳೀಯ ಮುಖಂಡರಿಗೆ ಸ್ಥಳೀಯ ಪ್ರಜೆಗಳಿಗೆ ತಿಳಿಸಿ ಕ್ಷೇತ್ರ ಮರುವಿಂಗಡನೆ ಮಾಡಬೇಕೆಂಬ ನಿಯಮ ಇದ್ದರೂ ಕೂಡ ಆ ನಿಯಮವನ್ನು ಗಾಳಿಗೆತೂರಿ ಜಿಲ್ಲಾ ಪಂಚಾಯಿತಿಯನ್ನು ತೆಗೆದಿರುವುದು ಸರಿಯಾದ ನಿರ್ಧಾರವಲ್ಲ.
ಆದ್ದರಿಂದ ಸರ್ಕಾರ ಈ ಕೂಡಲೇ ಯಥಾವತ್ತಾಗಿ ಕಂಚಿಕೇರಿ ಜಿಲ್ಲಾ ಪಂಚಾಯಿತಿಯನ್ನು ಇಲ್ಲೇ ಉಳಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಕಂಚಿಕೇರಿ ಗ್ರಾಮ ಮುಖಾಂಡುಗಳಾದ ಸುನಿಲ್ ಕುಮಾರ್ ಬಿದ್ರಿ. ಸದ್ಯೋಜಾತಪ್ಪ.
ನ್ಯಾಯವಾದಿ ಹಲಗೇರಿ ಮಂಜಪ್ಪ. ಕೊಟ್ರೇಶ್. ಬೋವಿ ಚೆನ್ನಪ್ಪ. ಕೆ. ಸಿ. ಶಿವಕುಮಾರ್. ಈಡಿಗ ವೆಂಕಟೇಶ್. ಪೂಜಾರ್ ಮಂಜುನಾಥ್. ಜಿ. ಎಂ. ಕರಿಬಸಯ್ಯ್. ಜೋಗಳಪ್ಪರ ಬಸಪ್ಪ. ಮಂಜಪ್ಪ. ಭೀಮಪ್ಪ. ವೈ. ಅಂಜಿನಪ್ಪ. ಜ್ಯೋತೆಪ್ಪ. ಕೆ ಹನುಮಂತಪ್ಪ ಹಾಲಳ ಹನುಮಂತಪ್ಪ ಹಲಗೇರಿ ನಾಗರಾಜ್ ಸೇರಿದಂತೆ ಇತರರು ಭಾಗಿಯಾಗಿದ್ದರು…

ವರದಿ.ಪ್ರತಾಪ್. ಸಿ. ಹರಪನಹಳ್ಳಿ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
