ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಸಿ ನೆಟ್ಟು ಬೆಳೆಸುವುದೇ ಪರಿಹಾರ: ವೀರೇಶ ಗೋನವಾರ…!!”

ಜಾಗತಿಕ ತಾಪಮಾನ ನಿಯಂತ್ರಣಕ್ಕೆ ಸಸಿ ನೆಟ್ಟು ಬೆಳೆಸುವುದೇ ಪರಿಹಾರ: ವೀರೇಶ ಗೋನವಾರ

ಸಿಂಧನೂರು: ಜೂನ್-೫ ಅವೈಜ್ಞಾನಿಕ ಕೈಗಾರೀಕರಣ, ನಗರೀಕರಣದ ಪರಿಣಾಮ ಜಗತ್ತಿನಾದ್ಯಂತ ತಾಪಮಾನದಲ್ಲಿ ಏರುಪೇರು ಉಂಟಾಗುತ್ತಿದ್ದು, ಇದರ ನಿಯಂತ್ರಣಕ್ಕೆ ಸಸಿ ನೆಟ್ಟು ಬೆಳೆಸುವುದು ಪರಿಹಾರ ಕ್ರಮಗಳಲ್ಲಿ ಒಂದಾಗಿದೆ ಎಂದು ಪ್ರಭಾರಿ ಮುಖ್ಯಗುರು ವೀರೇಶ ಗೋನವಾರ ಹೇಳಿದರು.

ಅವರು ತಾಲೂಕಿನ ಕಲಮಂಗಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮತದಾರರ ಸಾಕ್ಷರತಾ ಕ್ಷಬ್ ಮತ್ತು ವಿಜ್ಞಾನ ಸಂಘಗಳ ಅಡಿಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ, ಕಳೆದ ದಶಕಗಳಿಂದ ಜಾಗತಿಕ ತಾಪಮಾನ ಹೆಚ್ಚಾಗುತ್ತಿದೆ. ಇದರ ಕುರಿತು ವಿಶ್ವ ಮಟ್ಟದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಭಾವಿ ನಾಗರಿಕರಾದ ಇಂದಿನ ಮಕ್ಕಳಲ್ಲಿ ಪರಿಸರದ ಬಗೆಗೆ ಕಾಳಜಿಯನ್ನುಂಟು ಮಾಡಲು ಭಾರತ ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಈ ವರ್ಷ ಮತದಾರರ ಸಾಕ್ಷರತಾ ಕ್ಲಬ್‌ಗಳ ಮೂಲಕ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುವ ಮೂಲಕ ಎಲ್ಲಾ ಮತದಾರರ ಮತದಾನ ಮಾಡುವಂತೆ ಮತ್ತು ಎಲ್ಲಾ ಅರ್ಹ ಯುವಕರು ಮತದಾರರ ಪಟ್ಟಿಗೆ ತಮ್ಮ ಹೆಸರನ್ನು ಸೇರಿಸಲು ಇದೇ ಸಂದರ್ಭದಲ್ಲಿ ಜಾಗೃತಿಯನ್ನುಂಟು ಮಾಡಲಾಗುತ್ತಿದೆ. ಇ.ಎಲ್.ಸಿ ಕ್ಲಬ್‌ವತಿಯಿಂದ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ, ಘೋಷ ವಾಕ್ಯಗಳನ್ನು ಬರೆಯುವ ಸ್ಪರ್ಧೆ ಸೇರಿದಂತೆ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬರಲಾಗಿದೆ. ಪರಿಸರದ ಸಮತೋಲನವನ್ನು ಕಾಪಾಡಿಕೊಂಡಾಗ ಮಾತ್ರ ಅತಿವೃಷ್ಠಿ, ಅನಾವೃಷ್ಠಿ, ಅತಿಯಾದ ಚಳಿ ಮತ್ತು ಬಿಸಿಲಿನಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬಹುದು. ಇದರಿಂದ ಮನುಕುಲದ ಜೊತೆಗೆ ಇತರೆ ಜೀವಸಂಕುಲ ಮತ್ತು ಜೈವಿಕ ಪರಿಸರವನ್ನು ಉಳಿಸಿದಂತಾಗುತ್ತದೆ. ಅರಣ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಸಹಯೋಗದಲ್ಲಿ ಒಂದು ವಾರದ ಕಾಲ ವಿವಿಧ ಕಾರ್ಯಕ್ರಮಗಳನ್ನು ನೆರವೇರಿಸಲಾಗುತ್ತದೆ. ಇದರಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ವರದಿಗಾರ ಕಿರಣಗೌಡ, ಸ್ನೇಹ ಸಿರಿ ಟ್ರಸ್ಟಿನ ಅಯ್ಯನಗೌಡ, ವಿಶ್ವನಾಥ ಕುಲಕರ್ಣಿ, ಶಿಕ್ಷಕ ಬಸವರಾಜ ಸೇರಿದಂತೆ ಗ್ರಾಮದ ಯುವಕರು, ಹಳೆಯ ವಿದ್ಯಾರ್ಥಿಗಳು ಮತ್ತು ಶಾಲೆಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

೧೦ನೇ ತರಗತಿಯ ಮೇಘ ಮತ್ತು ಸಿಂಧು ಪ್ರಾರ್ಥಿಸಿದರು. ಭಾರತಿ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ವಂದಿಸಿದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend