ಅಪನಂಬಿಕೆ ಹೋಗಲಾಡಿಸಿ ಉತ್ತಮ ಸಂಬಂಧ ಕಲ್ಪಿಸುವುದೇ ಕುರಾನ್ ಪ್ರವಚನದ ಉದ್ದೇಶ – ಮುಹಮ್ಮದ್ ಕುಂಞ.
ಸಿಂಧನೂರು : ಮೇ.27. ಅಪನಂಬಿಕೆ ದ್ವೇಷ, ಅಸೂಯೆ ಕೋಮುಭಾವನೆ ಕಚ್ಚಾಟಗಳಿಂದ ಸಂಬಂಧಗಳು ದೂರವಾಗಿದ್ದು ಇದರಿಂದ ಸಮಾಜದಲ್ಲಿ,ಜನರಲ್ಲಿ ನಂಬಿಕೆ, ಶಾಂತಿ ಸಮಾಧಾನ ಇಲ್ಲದೆ ಬದುಕುವಂತಾಗಿದೆ.ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುವ ಮೂಲಕ ಅಪನಂಬಿಕೆ ಹೋಗಲಾಡಿಸಿ ಉತ್ತಮ ಸಂಬಂಧ ಕಲ್ಪಿಸುವುದೇ ಕುರಾನ್ ಪ್ರವಚನ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಮಂಗಳೂರು ಶಾಂತಿ ಪ್ರಕಾಶನ ವ್ಯವಸ್ಥಾಪಕರು ಹಾಗೂ ಪ್ರಸಿದ್ದ ಪರವಾಚನಕಾರರಾದ ಮುಹಮ್ಮದ್ ಕುಂಞ ಹೇಳಿದರು.
ನಗರದ ಆರ್ ಜಿ ಎಂ ಶಾಲಾ ಮೈದಾನದಲ್ಲಿ ಕುರಾನ್ ಪ್ರವಚನ ಸ್ವಾಗತ ಸಮಿತಿ ಹಾಗೂ ಜಮಾಹತೆ ಇಸ್ಲಾಮೀ ಹಿಂದ್ ಏರ್ಪಡಿಸಿದ್ದ ಸಾರ್ವಜನಿಕ ಕುರಾನ್ ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜಕ್ಕೆ ಉತ್ತಮ ಚಿಂತನೆಗಳನ್ನು ನೀಡುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದರು.
ಪವಿತ್ರ ಖುರಾನ್ ಎಲ್ಲರಿಗೂ ಉತ್ತಮ ಸಂದೇಶದ ಸಾರವನ್ನು ಸಾರಿ ಮನಸಿನ ಮನಸುಗಳು ಚೆನ್ನಾಗಿ ಇದ್ದಾಗ ನಾವು ಸೇರಿದಂತೆ ಇಡೀ ಸಮಾಜವೇ ಸ್ವಚ್ಛವಾಗಿರುತ್ತದೆ.ಹೊಡೆದ ಮನಸುಗಳನ್ನು ಹೊಂದುಗೂಡಿಸುವ ಕೆಲಸ ವನ್ನು ಕುರಾನ್ ಮಾಡುತ್ತದೆ. ಯಾರ ಮನಸು ಹಾಗೂ ಭಾವನೆಗಳಿಗೆ ನೋವುಂಟು ಮಾಡುವುದಿಲ್ಲ ಎಂದರು.
ಪ್ರೀತಿಯಿಂದ ಬದುಕುವ ಹೃದಯಗಳನ್ನು ಬೆಸೆಯುವ ಕುಟುಂಬ ಸಮಾಜದ ಒಂದು ಘಟಕ.ಕುಟುಂಬ ಚೆನ್ನಾಗಿ ಇದ್ದರೆ ಸಮಾಜ ಸದೃಢವಾಗಿ ದೇಶ ಸುಭಿಕ್ಷವಾಗಿರುತ್ತದೆ.ಮನೆ ಎಂದ್ರೆ ಎಲ್ಲರಿಗೂ ಶಾಂತಿ ,ಸಮಾಧಾನ ಸಿಗುವ ಸ್ಥಳವಾಗಿದೆ.ಮನೆಗಳು ಶಾಂತಿಯ ಕೇಂದ್ರಗಳಾಗಬೇಕು ಎಂದರು.
ಮೂರು ದಿನಗಳ ಕಾಲ ನಡೆಯುವ ಕುರ್ ಆನ್ ಪ್ರವಚನ ಕಾರ್ಯಕ್ರಮ ದಲ್ಲಿ ಯಾರ ಮನಸು ಭಾವನೆಗಳಿಗೆ ನೋವುಂಟು ಮಾಡದೆ ಎಲ್ಲರೂ ಒಂದೇ ಭಾರತಾಂಬೆಯ ಮಕ್ಕಳು ಎನ್ನುತ್ತಾ ಸಮಾಜದಲ್ಲಿ ಸಾಮರಸ್ಯವನ್ನು ಕಾಪಾಡಿ ಎಲ್ಲರೂ ದ್ವೇಷ ಕೋಮು ಭಾವನೆ ಬಿಟ್ಟು ಸಹೋದರರಂತೆ ಬದುಕಬೇಕು.ಹತ್ತು ವರ್ಷಗಳ ಹಿಂದೆ ಇದೇ ಜಾಗದಲ್ಲಿ ಈ ಕಾರ್ಯಕ್ರಮ ಮಾಡಿದ್ದು ಈಗ ಎರಡನೇ ಭಾರಿ ಕಾರ್ಯಕ್ರಮ ಮಾಡುತ್ತಿದ್ದು ಎಲ್ಲಾ ಸಮಾಜದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದು ನೋಡಿದರೆ ಸಿಂಧನೂರು ಸಾಮರಸ್ಯದ ಕೇಂದ್ರವಾಗಿ ದೇಶಕ್ಕೆ ಮಾದರಿಯಾಗಿದೆ.ಸಿಂಧನುರಿನ ಜನತೆಯಂತೆ ಇತರರು ಅನುಸರಿಸಬೇಕು.ಬಸವ,ರಂಜಾನ್ ಹಬ್ಬದ ಲ್ಲಿ ಹಿಂದೂ ಮುಸ್ಲಿಮರು ಸೇರಿ ಹಬ್ಬಗಳನ್ನು ಆಚರಿಸಿ ಸಮಾಜಕ್ಕೆ ಉತ್ತಮ ಸಂದೇಶವಾಗಿದೆ ಎಂದರು.
ವಳಬಳ್ಳಾರಿಯ ಸಿದ್ದಲಿಂಗ ಮಹಾಸ್ವಾಮಿಗಳು ಸಿದ್ದಲಿಂಗ ಶಿವಯೋಗಿ ಶಿವಾಚಾರ್ಯ ಮಹಾಸ್ವಾಮಿಗಳು ಕಲ್ಮಠ,ಸಿದ್ದರಾಮೇಶ್ವರ ಶರಣರು ವೆಂಕಟಗಿರಿ ಕ್ಯಾಂಪ್ ಸಮಾರಂಭದ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಹಂಪನಗೌಡ ಬಾದರ್ಲಿ, ಜೆಡಿಎಸ್ ತಾಲೂಕಾಧ್ಯಕ್ಷ ಬಸವರಾಜ ನಾಡಗೌಡ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶಿವನ ಗೌಡ ಗೊರೆಬಾಳ, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಬಾದರ್ಲಿ, ಪ್ರಭಾರಿ ತಹಶೀಲ್ದಾರರಾದ ಶ್ರುತಿ ಸೇರಿದಂತೆ ಇತರರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ಕೆ ಮರಿಯಪ್ಪ,ಬಾಬಾರ ಪಾಶ,ಶಾಶ್ವತಯ್ಯ ಸ್ವಾಮಿ ಮುಕ್ಕುಂದಿಮಠ,ಎಚ್ ಎನ್ ಬಡಿಗೇರ್,ಯಂಕೋಬ ನಾಯಕ,ರಾಜಶೇಖರ್ ಪಾಟೀಲ್,ಶರಣಪ್ಪ ತೆಂಗಿನಕಾಯಿ, ಕಾಲಿಂಗಪ್ಪ ವಕೀಲರು,ಖಾಜಿ ಮಲಿಕ್, ನದಿಮುಲ್ಲಾ,ಪತ್ರಕರ್ತರಾದ ಅಶೋಕ್ ಬೆನ್ನೂರ್, ಮಹ್ಮದ್ ಮುಸ್ತಫ್,ಗೌತಮ್ ಮೆಹ್ತಾ,ಶರಣಪ್ಪ ಮರಳಿ,ಎಂ ಭಾಸ್ಕರ್,ಸೇರಿದಂತೆ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು…

ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
