ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಶ್ರೀ ಮತಿ ದೊಡ್ಡಮನೆ ಪುಷ್ಪಾನಾಗರಾಜ್ ಆಯ್ಕೆ. ವಿಜಯನಗರ ಜಿಲ್ಲೆ ಹೂವಿನ ಹಡಗಲಿ ತಾಲ್ಲೂಕಿನ ಇಟ್ಟಿಗಿ ಗ್ರಾಮ ಪಂಚಾಯತಿಯಲ್ಲಿ ಸದಸ್ಯ ಸ್ಥಾನದಲ್ಲಿದ್ದ ಮಹಾಜನದಹಳ್ಳಿ ಗಂಗಮ್ಮ ಇವರ ಆತ್ಮಕ್ಕೆ ಚಿರಶಾಂತಿ ಕೋರುತ್ತಾ, ಇವರ ನಿಧನದ ನಂತರ ತೆರವಾದ ಇಟ್ಟಿಗಿಯ 4ನೇ ವಾರ್ಡಗೆ ಚುನಾವಣಾ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಿ ದಿನಾಂಕ -20/5/2022ರಂದು ನಡೆದ ಗ್ರಾಮ ಪಂಚಾಯತಿ ಉಪ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಬಿಜೆಪಿ ಅಭ್ಯರ್ಥಿ ಶ್ರೀ ಮತಿ ದೊಡ್ಡ ಮನೆ ಪುಷ್ಪಾನಾಗರಾಜ್ ಅವರಿಗೆ ದಿನಾಂಕ-23/5/2022ರಂದು ಚುನಾವಣೆ ಅಧಿಕಾರಿಯಾದ ಶ್ರೀ ಆನಂದ ಡೊಳ್ಳಿನ ಇವರಿಂದ ಸದಸ್ಯತ್ವ ಪ್ರಮಾಣ ಪತ್ರವನ್ನು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀ ಮತಿ ಷುಷ್ಪಾ ಎಂ ಹಾಗೂ ಉಪಾಧ್ಯಕ್ಷರಾದ ಸಿದ್ದಪ ಮತ್ತು ಸರ್ವ ಸದಸ್ಯರುಗಳು ಹಾಗೂ ಇಟ್ಟಿಗಿ ಗ್ರಾಮದ ಹಿರಿಯ ಗಣ್ಯಮಾನ್ಯರ ಸಮ್ಮುಖದಲ್ಲಿ ನೀಡಿದರು.

ವರದಿ-ಪ್ರಕಾಶ್ ಆಚಾರ್ ಇಟ್ಟಿಗಿ.
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
