ಗಬ್ಬು ನಾರುತ್ತಿರುವ ಸಾರ್ವಜನಿಕ ಶೌಚಾಲಯ,ಮತ್ತು ನಮ್ಮ ದೇಶದ ಹೆಮ್ಮೆಯ ಪ್ರಧಾನಿಯವರು ಇಡೀ ವಿಶ್ವಕ್ಕೆ ತಿಳಿಸಿದಂತೆ ನಮ್ಮ ದೇಶ ಸ್ವಚ್ಚ ಭಾರತ್ ಯೋಜನೆಯಲ್ಲಿ ಬೇರೆ ದೇಶಗಳಿಗೆ ಮಾದರಿ ಎನ್ನುತ್ತಾರೆ ನಿಜ ಆದರೆ ಇಲ್ಲೊಂದು ಗ್ರಾಮಪಂಚಾಯಿತಿ ಸ್ವಚ್ಚತೆಯ ಬಗ್ಗೆ ಸ್ವಲ್ಪ ನೋಡಿದರೆ ಇಲ್ಲಿರುವ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಆಡಳಿತ ವರ್ಗಕ್ಕೆ ಸ್ವಚ್ಛ ಭಾರತ್ ಎನ್ನುವ ಒಂದು ಮಾತಿನ ಅರ್ಥ ಗೊತ್ತಿದೆಯೋ, ಗೊತ್ತಿದ್ದರು ನಮ್ಮನ್ನು ಯಾರೇನು ಮಾಡಿಕೊಳ್ಳುತ್ತಾರೆ ಎನ್ನುವ ದುರಂಕಾರವೊ ನೋಡೋಣ ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಮಾಕನಡಕು ಗ್ರಾಮ ಪಂಚಾಯಿತಿ ಚಿಕ್ಕಜೋಗಿಹಳ್ಳಿ ಗ್ರಾಮದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಇರುವ ಸಾರ್ವಜನಿಕ ಶೌಚಾಲಯ ತುಂಬಾ ಅವ್ಯವಸ್ಥೆಯಿಂದ ಕೂಡಿದ್ದು ಸಾರ್ವಜನಿಕರು ಮೂತ್ರಕ್ಕೆ ಹೋಗುವುದಕ್ಕೂ ತುಂಬಾ ಮುಜುಗರ ವ್ಯಕ್ತಪಡಿಸುತ್ತಿದ್ದು ಕಾರಣ ಈ ಗ್ರಾಮದ ಕೇಂದ್ರಬಿಂದುವಾದ ಬಸ್ ಸ್ಟ್ಯಾಂಡ್ ನಲ್ಲಿ ಪ್ರಯಾಣಿಕರು ಕುಳಿತುಕೊಳ್ಳುವುದಕ್ಕೂ ತುಂಬಾ ವಾಸನೆಯಿಂದ ಕೂಡಿರುತ್ತದೆ ಶೌಚಾಲಯದಲ್ಲಿ ಬರೀ ಮಧ್ಯದ ಪೌಚ್ ಗಳು ಕಾಣಸಿಗುತ್ತವೆ.

ಈ ಗ್ರಾಮದ ಇತಿಹಾಸದ ಪುಟವನ್ನು ತೆಗೆದಾಗ ಇಡೀ ಭಾರತ ದೇಶವೇ ತಿರುಗಿ ನೋಡುವ ಹಾಗೆ ಇದ್ದು ನಮ್ಮ ನಮ್ಮ ರಾಜ್ಯದಲ್ಲಿ ಮಾದರಿ ಗ್ರಾಮವಾಗಿ ಹೆಸರುವಾಸಿಯಾಗಿತ್ತು, ಈ ಈ ಗ್ರಾಮವು ಸುತ್ತಮುತ್ತ ಹಳ್ಳಿಗಳ ಕೇಂದ್ರಸ್ಥಾನವಾಗಿ ರುವುದರಿಂದ ಅಂದರೆ ಶೈಕ್ಷಣಿಕವಾಗಿ, ಸಮುದಾಯ ಆರೋಗ್ಯ ಕೇಂದ್ರ ವಾಗಿರಬಹುದು ಇನ್ನಿತರೆ ಸರ್ಕಾರಿ ಕಚೇರಿಗಳು ಈ ಗ್ರಾಮದಲ್ಲಿ ಇರುತ್ತವೆ, ಇಷ್ಟೆಲ್ಲಾ ಸೌಲಭ್ಯಗಳನ್ನು ಒಳಗೊಂಡಿರುವ ಗ್ರಾಮದಲ್ಲಿ ಇರುವ ಒಂದೇ ಒಂದು ಸಾರ್ವಜನಿಕ ಶೌಚಾಲಯ ಜನಗಳಿಗೆ ಉಪಯೋಗಕ್ಕೆ ಬಾರದೆ ಅವ್ಯವಸ್ಥೆಯಿಂದ ಕೂಡಿದ್ದು, ಕೂಡಲೇ ಸ್ಥಳೀಯ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕೂಡಲೇ ಎಚ್ಚೆತ್ತು ಈ ಶೌಚಾಲಯವನ್ನು ಸ್ವಚ್ಛಗೊಳಿಸಿ ಸಾರ್ವಜನಿಕರ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ…
ವರದಿ. ಬಸಪ್ಪ ಬಣವಿಕಲ್ಲು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
