ಎಸ್.ಎಸ್.ಎಲ್.ಸಿ. ಫಲಿತಾಂಶ: ವಸತಿ ಶಾಲೆ ಮಕ್ಕಳ ಸಾಧನೆ, ಡಿ.ಸಿ.-ಎಸ್.ಪಿ. ಅವರಿಂದ ಸನ್ಮಾನ…!!!

ಎಸ್.ಎಸ್.ಎಲ್.ಸಿ. ಫಲಿತಾಂಶ:
ವಸತಿ ಶಾಲೆ ಮಕ್ಕಳ ಸಾಧನೆ, ಡಿ.ಸಿ.-ಎಸ್.ಪಿ. ಅವರಿಂದ ಸನ್ಮಾನ.
ಕಲಬುರಗಿ, ಇತ್ತೀಚೆಗೆ ಪ್ರಕಟಗೊಂಡ ಎಸ್.ಎಸ್.ಎಲ್.ಸಿ. ಫಲಿತಾಂಶದಲ್ಲಿ ಹೆಚ್ಚಿನ ಅಂಕ ಪಡೆದ
ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯ ಅಧೀನದ ವಸತಿ ಶಾಲೆಯ ವಿದ್ಯಾರ್ಥಿನಿಯರಾದ ಕು. ಸಿಂಧು ತಂದೆ ಸಿದ್ರಾಮಪ್ಪ ಮತ್ತು
ಕು. ಪೂಜಾ ಶಾಮರಾವ ರಾಠೋಡ ಅವರಿಗೆ ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಕೊಠಡಿಯಲ್ಲಿ ಡಿ.ಸಿ.ಯಶವಂತ ವಿ.
ಗುರುಕರ್ ಮತ್ತು ಎಸ್.ಪಿ ಇಶಾ ಪಂತ್ ಅವರು ಫಲ ತಾಂಬೂಲ ಜೊತೆಗೆ ಪುಸ್ತಕ ನೀಡಿ ಮಕ್ಕಳನ್ನು ಸನ್ಮಾನಿಸಿದರು.
ಚಿಂಚೋಳಿ ತಾಲೂಕಿನ ಕೋಡ್ಲಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ಸಿಂಧು ತಂದೆ ಸಿದ್ರಾಮಪ್ಪ ಅವರು 625ಕ್ಕೆ
623 ಅಂಕ ಪಡೆದು ರಾಜ್ಯಕ್ಕೆ 3ನೇ ಮತ್ತು ಜಿಲ್ಲೆಯ ವಸತಿ ಶಾಲೆಗೆ ಮೊದಲನೇ ರ್ಯಾಂಕ್ ಮತ್ತು ಕಲಬುರಗಿ ತಾಲೂಕಿನ
ಕಾಳಗಾನೂರ ಮೋರಾರ್ಜಿ ದೇಸಾಯಿ ವಸತಿ ಶಾಲೆಯ ಕು. ಪೂಜಾ ಶಾಮರಾವ ರಾಠೋಡ ಅವರು 625ಕ್ಕೆ 622 ಅಂಕ
ಪಡೆದು ಜಿಲ್ಲೆಯ ವಸತಿ ಶಾಲೆಗೆ ದ್ವಿತೀಯ ರ್ಯಾಂಕ್ ಪಡೆದು ಶಾಲೆಗೆ ಕೀರ್ತಿ ತಂದ ಹಿನ್ನೆಲೆಯಲ್ಲಿ ಸನ್ಮಾನಿಸಲಾಯಿತು
ಈ ಸಂದರ್ಭದಲ್ಲಿ ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ, ಸಮಾಜ ಕಲ್ಯಾಣ
ಇಲಾಖೆಯ ಜಂಟಿ ನಿರ್ದೇಶಕ ಎಂ.ಅಲ್ಲಾಭಕ್ಷ, ಜಿಲ್ಲಾ ಸಮನ್ವಯಾಧಿಕಾರಿ ಶಿವರಾಮ ಚವ್ಹಾಣ, ಪ್ರಾಂಶುಪಾಲರಾದ ಸುರೇಶ
ಅಲ್ದಾರ್ಥಿ, ಶಂಕರ ವಿ. ರಾಠೋಡ, ಶಿಕ್ಷಕರಾದ ಶಿವಕುಮಾರ, ಲೋಹಿತ್ ಶ್ರೀಮಾನ್, ಎಸ್.ಎ.ಪಾಟೀಲ, ಶಿವಾನಂದ ಬೀಳಗಿ,
ಸಂಜು ದೈಗೋಡಿ ಹಾಗೂ ಮಾಣಿಕರಾವ ಬಿರಾದರ ಇದ್ದರು. ಮಕ್ಕಳ ಅಪ್ರತಿಮ ಸಾಧನೆಗೆ ವಸತಿ ಶಾಲೆಯ ಪ್ರಾಂಶುಪಾಲರು,
ಶಿಕ್ಷಕರು ಹರ್ಷ ವ್ಯಕ್ತಪಡಿಸಿದ್ದಾರೆ…

ವರದಿ. ಮಹಾಂತೇಶ್, ಎಸ್, ಎಂ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend