ಸೂರ್ಯಕಾಂತಿ ಬಿತ್ತನೆ ಬೀಜಕ್ಕಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ನಾಡಗೌಡ…!!!

ಸೂರ್ಯಕಾಂತಿ ಬಿತ್ತನೆ ಬೀಜಕ್ಕಾಗಿ ರೈತರು ಆತಂಕ ಪಡುವ ಅಗತ್ಯವಿಲ್ಲ ಶಾಸಕ ನಾಡಗೌಡ.

ಸಿಂಧನೂರು : ಈಗಾಗಲೇ ತಾಲೂಕಿನಾಧ್ಯಂತ ಒಳ್ಳೆಯ ಮಳೆಯಾಗಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೂರ್ಯಕಾಂತಿ ಬೀಜ ಬಿತ್ತನೆ ಮಾಡುವ ಸಲುವಾಗಿ ಇನ್ನೆರಡು ದಿನಗಳಲ್ಲಿ ರೈತ ಸಂಪರ್ಕ ಕೆಂದ್ರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜಗಳು ದೊರೆಯುತ್ತವೆ. ರೈತರು ಆತಂಕ ಪಡುವ ಅಗತ್ಯವಿಲ್ಲ,ಶೇ.30 ರಷ್ಟು ಸೂರ್ಯಕಾಂತಿ ಬಿತ್ತನೆ ಮಾಡಲಾಗಿದ್ದು, ಇನ್ನೂ ಬಿತ್ತನೆಗೆ 8 ರಿಂದ 10 ದಿನಗಳ ಕಾಲ ಸಮಯಾವಕಾಶ ಇರುವುದರಿಂದ ರೈತರಿಗೆ ಬೇಕಾಗುವ ಬೀಜಗಳನ್ನು ವಿತರಣೆ ಮಾಡಲಿಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ರೈತರು ಖರೀದಿಸುವಾಗ ಕಳಪೆ ಬೀಜಗಳನ್ನು ಖರೀದಿ ಮಾಡದಂತೆ ಏಚ್ಚರವಹಿಸಬೇಕೆಂದು ಶಾಸಕ ವೆಂಕಟರಾವ್ ತಿಳಿಸಿದರು.

ಶಾಸಕರ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೈತರಿಗೆ ಗುಣಮಟ್ಟದ ಬೀಜಗಳನ್ನು ಸಿಗುವುವಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇನ್ನೂ ಹೆಚ್ಚಿನ ಅವಶ್ಯಕತೆ ಯಾದರೆ ಕೂಡ ಸಂಬಂಧಪಟ್ಟ ಅಧಿಕಾರಿಗಳ ಜೋತೆ ಸಭೆ ಮಾಡಿ ಚರ್ಚಿಸಿ ‌‌‌‌‌‌ ರೈತರಿಗೆ ಬರುವ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇಪ್ಕೋ ಕಂಪನಿಯವರು ಕ್ರೆಡಿಟ್ ಕಾರ್ಡ್ ಮೂಲಕ ಸರಬರಾಜು ಮಾಡಲು ಮುಂದೆ ಬಂದಿದ್ದಾರೆ ರೈತರು ಸದುಪಯೋಗ ಪಡಿಸಿಕೊಳ್ಳಿ ಎಂದರು.

ನಗರಕ್ಕೆ 25 ಕೋಟಿ 50 ಲಕ್ಷ ರೂ. ಸರಕಾರ ಅನುದಾನ ಬಿಡುಗಡೆ ಮಾಡಿದೆ. ಅದರಲ್ಲಿ 2 ಕೋಟಿ 26 ಲಕ್ಷ ರೂ. ವಂತಿಗೆಗಾಗಿ ಮೀಸಲಿರಿಸಿದೆ. 3 ಅಥವಾ 4 ತಿಂಗಳಲ್ಲಿ ಎಸ್ಟಿಮೆಂಟ್ ತಯಾರು ಮಾಡಿ ಟೆಂಡರ್ ಕರೆಯಲಾಗುವುದು.

ಕೆಲವರು ಮಾದ್ಯಮಗಳ ಮುಂದೆ ಬಹಳಷ್ಟು ನನ್ನ ಮೇಲೆ ಆಪಾದನೆ ಮಾಡಿದ್ದವು, ಯಾವುದೋ ಸಂದರ್ಭದಲ್ಲಿ ಸದಸ್ಯರ ಜೊತೆಗೆ ಮಾತನಾಡುವಾಗ ನಗರದಲ್ಲಿ ಓಟು ಬಿದ್ದಿಲ್ಲಾ ಕೆಲಸ ಮಾಡಿಲ್ಲಾ ಎಂದು ನನ್ನ ಮೇಲೆ ಸುಳ್ಳು ಆರೋಪ ಮಾಡಿದ್ದರು. ಆದರೆ ಅವರ ಮಾತಿಗೆ ಕಿವಿಗೊಡದೇ ಕೆಲಸದ ಮೂಲಕ ಉತ್ತರ ಕೊಟ್ಟಿದ್ದೇನೆ. ಬಹುತೇಕ ನಗರದಲ್ಲಿ 90% ರಷ್ಟು ಕೆಲಸಗಳು ಮುಗಿದಿವೆ ಶೇ 10% ರಷ್ಟು ಅಭಿವೃದ್ಧಿ ಕಾಮಗಾರಿಗಳು ನನ್ನ ಅವಧಿಯಲ್ಲಿ ಸಂಪೂರ್ಣ ಮುಗಿಸುತ್ತೇನೆ. ಕುಡಿಯುವ ನೀರಿನ ಕೆರೆಗೆ 98 ಲಕ್ಷ ರೂ. ಕೆರೆ ದುರಸ್ತಿಗೆ ಹಣ ಬಿಡುಗಡೆಯಾಗಿದೆ.

ನಗರದಲ್ಲಿ ಹಗಲು, ರಾತ್ರಿ ಕಳ್ಳತನ ಪ್ರಕರಣ ಜಾಸ್ತಿಯಾದ ಹಿನ್ನೆಲೆಯಲ್ಲಿ ಪೋಲಿಸ್ ಇಲಾಖೆಯ ಜೊತೆಗೆ ಚರ್ಚೆ ಮಾಡಿ ಎಚ್. ಕೆ. ಆರ್. ಡಿ. ಬಿ. ಯೋಜನೆಯಲ್ಲಿ ಸುಮಾರು 60 ರಿಂದ 70 ಲಕ್ಷ ರೂಪಾಯಿಗಳ ವೆಚ್ಚದಲ್ಲಿ ನಗರದಲ್ಲಿ 162 ಹೈ ಟೆಕ್ನಿನಿಸೇನ್ ಸಿಸಿ ಕ್ಯಾಮರಾಗಳನ್ನು ಅಳವಡಿಸಿ ಪೋಲಿಸ್ ಠಾಣೆಯಲ್ಲಿ ಎಲ್ಲಾ ಕಡೆ ಎನೇನು ನಡೆಯುತ್ತದೆಂದು ಪೋಲಿಸ್ ಕಂಟ್ರೋಲ್ ರೂಮಿನಲ್ಲಿ ನೋಡಬಹುದು. ಒಂದು ವೇಳೆ ಪೋಲಿಸ್ ಅಧಿಕಾರಿ ಯಾರೇ ಆಗಲಿ ಕ್ಯಾಮರಾಗಳನ್ನು ಡಿ ಆಕ್ಟಿವ್ ಮಾಡಿದರೆ ಅಂತವರ ವಿರುದ್ಧ ಸೂಕ್ತ ಕಾನೂನಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಬಸವರಾಜ ನಾಡಗೌಡ , ಜೆಡಿಎಸ್ ವಕ್ತಾರ ಚಂದ್ರುಭೂಪಾಲ್ ನಾಡಗೌಡ ,ಮುಖಂಡರಾದ ಧರ್ಮನಗೌಡ ಮಲ್ಕಾಪೂರು, ಶರಣೆಗೌಡ ರಾಗಲಪರ್ವಿ, ನಗರಸಭೆ ಸದಸ್ಯರಾದ ನದಿಮುಲ್ಲಾ,ಕೆ.ಹನುಮೇಶ, ಚಂದ್ರು ಮೈಲಾರ್, ಡಿ. ಸತ್ಯನಾರಾಯಣ ,ಎಸ್ಪಿ ಟೇಲರ್ ಹಾಗೂ ಅಲ್ಲಮಪ್ರಭು ಪೂಜಾರ,ನೀರುಪಾದಿ ನಾಗಲಾಪೂರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend