ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು.
ತಾಯಕನಹಳ್ಳಿ ಗ್ರಾಮ.
ವಿವಿಧ ಬೇಡಿಕೆಗಳ ಕುರಿತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ.
ಹೂಡೇO ಗ್ರಾಮ ಪಂಚಾಯತಿಗೆ ಸೇರಿದ ತಾಯಕನಹಳ್ಳಿ ಗ್ರಾಮ ಹಾಗೂ ನಡವಲಹಟ್ಟಿ ಗ್ರಾಮದ ಸಾರ್ವಜನಿಕರಿಂದ ಮಾನ್ಯ ಸಂಸದರಾದ ದೇವೇಂದ್ರಪ್ಪ ನವರಿಗೂ ಹಾಗೂ ವಿಜಯನಗರ ಜಿಲ್ಲಾಧಿಕಾರಿಗಳಿಗೆ ಮನೆ ಮಂಜೂರಾತಿ ಗಾಗಿ, ಹಾಗೂ ವಿವಿಧ ಬೇಡಿಕೆಗಳ ಕುರಿತು ಹೂ ಡೇOಗ್ರಾಮ ಪಂಚಾಯತಿ ಅಧ್ಯಕ್ಷರಾದ ಕರಿಬಸಮ್ಮ ದುರಗಪ್ಪ ಇವರ ಮುಖಂಡತ್ವದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿಮನವಿ ಪತ್ರವನ್ನು ಸಲ್ಲಿಸಲಾಯಿತು.ಈ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕರಿಬಸಮ್ಮ ದುರುಗಪ್ಪ ಇವರು ಮಾತನಾಡಿ ತಾಯಕನಹಳ್ಳಿ ಗ್ರಾಮವು ಹೆಚ್ಚಿನ ಜನಸಂಖ್ಯೆ ಹೊಂದಿದ್ದು ವಾಸಿಸಲುಮನೆಗಳ ಅವಶ್ಯಕತೆ ಇದೆ.ಮನೆಗಳನ್ನು ನಿರ್ಮಿಸಿಕೊಳ್ಳಲು ಸರ್ಕಾರಿ ಜಮೀನು ಇದ್ದು ಈ ಜಮೀನಿನಲ್ಲಿ ತಾಯಕನಹಳ್ಳಿ ಗ್ರಾಮಸ್ಥರು ಮನೆಗಳನ್ನು ಕಟ್ಟಿ ಕೊಳ್ಳಲು ವಸತಿರಹಿತರಿಗೆ ಯಾವುದಾದರೂ ಯೋಜನೆ ಅಡಿಯಲ್ಲಿ ಮುಂಜೂರು ಮಾಡಿಕೊಟ್ಟು ಅನುಕೂಲ ಮಾಡಿಕೊಡುವಂತೆ ಮಾನ್ಯ ಜಿಲ್ಲಾಧಿಕಾರಿಗಳಲ್ಲಿ ಹಾಗೂ ಸಂಸದರಲ್ಲಿ ಕೇಳಿಕೊಂಡರು. ನಂತರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ನಡುವಲ ಹಟ್ಟಿ ಗ್ರಾಮದ ಲ್ಲಿ ದೇವಸ್ಥಾನಸಹಾಗೂ ಶಾಲೆಯಲ್ಲಿ ಸೌಚಾಲಯ ದ ವ್ಯವಸ್ಥೆ ಮಾಡಿಕೊಡುವಂತೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಬುಲ್ಲೋಡ್ಲೊ ಸಣ್ಣ ಬೋರಯ್ಯ ನವರು ಮನವಿ ಮಾಡಿದರು.

ಮಾನ್ಯ ಜಿಲ್ಲಾಧಿಕಾರಿಗಳು ಮನವಿಪತ್ರ ಸ್ವೀಕರಿಸಿ ಮಾತನಾಡಿ ಗ್ರಾಮದಲ್ಲಿ
ಸ್ಥಳಪರಿಶೀಲನೆ ಮಾಡಿ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು ಎಂದು ಹೇಳಿದರು. ಮಾನ್ಯ ಸಂಸದರು ಮಾತನಾಡಿ ಸುಮಾರು ಬಾರಿಈ ವಿಷಯ ನನ್ನ ಗಮನಕ್ಕೆ ಬಂದಿರುತ್ತದೆ. ಅತಿ ಶೀಘ್ರದಲ್ಲಿ ತಾಯಕನಹಳ್ಳಿ ಗ್ರಾಮದ ವಸತಿರಹಿತರಿಗೆ ಸ್ಥಳ ಪರಿಶೀಲನೆ ಮಾಡಿ ಮೂಲಭೂತ ಸೌಕರ್ಯಗಳು ಹಾಗೂ ವಸತಿರಹಿತರಿಗೆ ವಸತಿ ಸೌಲಭ್ಯಗಳನ್ನು ಒದಗಿಸಿಕೊಡಲಾಗುವುದು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ತಾಯಕನಹಳ್ಳಿ ಕರಿಬಸಮ್ಮ ದುರುಗಪ್ಪ. ನಡುವುಲ ಹಟ್ಟಿ ಬುಲ್ಲೋಡ್ಲೊ ಸಣ್ಣ ಬೋರಯ್ಯ. ಕರಿ ದೊಡ್ಡಯ್ಯ. ಎಸ್ ಡಿ ಕುಮಾರ ಸೇರಿದಂತೆ ತಾಯಕನಹಳ್ಳಿ ಹಾಗೂ ನೋಡು ವಲ ಹಟ್ಟಿ ಗ್ರಾಮಸ್ಥರು ಇತರರು ಇದ್ದರು…
ವರದಿ. ಡಿ. ಎಂ. ಈಶ್ವರಪ್ಪ ಸಿದ್ದಾಪುರ
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
