ಅಧಿಕಾರಿಗಳ ಹಾಗೂ ಗುತ್ತೇದಾರರ ವಿರುದ್ಧ ಕಾನೂನು ಕ್ರಮಕೈಗೊಳ್ಳಿ – ಪ್ರಕಾಶ್ ಪಾಟೀಲ್ ಆಗ್ರಹ
ದೇವದುರ್ಗ : ಕಳಪೆ ಕಾಮಗಾರಿ ಯಲ್ಲಿ ಶಾಮೀಲಾದ ಭ್ರಷ್ಟ ಅಧಿಕಾರಿಗಳ ಹಾಗೂ ಗುತ್ತೇದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ತಾಲೂಕು ಅಧ್ಯಕ್ಷರಾದ ಪ್ರಕಾಶ್ ಪಾಟೀಲ್ ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ವಿಶೇಷ ಅಭಿವೃದ್ಧಿ ಯೋಜನೆ 2020 – 21ರ ಅಡಿಯಲ್ಲಿ ಕೆ. ಶಿವನಗೌಡ ನಾಯಕ್ ದೇವದುರ್ಗ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಸನದೊಡ್ಡಿ ದಿಂದ ಚಡಕಲ ಗುಡ್ಡ ರಸ್ತೆ ಕಾಮಗಾರಿ, ಸುಮಾರು ಅಂದಾಜು ಮೊತ್ತ 109.00 ಲಕ್ಷಗಳು, ಗುತ್ತಿಗೆ ಮೊತ್ತ 102.47. ಲಕ್ಷಗಳು, ಪ್ಯಾಕೇಜ್ ಸಂಖ್ಯೆ: KSRDP-23-24, ಕಾಮಗಾರಿ ಪ್ರಾರಂಭ: 6-05-2021, ರಸ್ತೆ ಉದ್ದ: 2.30 ಕಿ.ಮೀ. ಅನುಷ್ಠಾನ: ಕಾರ್ಯನಿರ್ವಾಹಕ ಅಭಿಯಂತರ ಯೋಜನ ವಿಭಾಗ ರಾಯಚೂರು, ಗುತ್ತಿಗೆದಾರ: ವೀರೇಶ ಕಮತರ್ ಪ್ರಥಮ ದರ್ಜೆ ಗುತ್ತೇದಾರ ಮಸ್ಕಿ, ಈ ಡಾಂಬರೀಕರಣ ರಸ್ತೆ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಮಾಡಲಾಗಿರುತ್ತದೆ. ಈ ಕಾಮಗಾರಿಯ ಡಾಂಬರೀಕರಣ ಉತ್ತಮ ಗುಣಮಟ್ಟದಿಂದ ಕೂಡಿರುವುದಿಲ್ಲ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಸಿರವಾರ ತಾಲೂಕು ಅಧ್ಯಕ್ಷರಾದ ಪಂಪಣ್ಣ ಚಾಗಿ, ಪರಸಪ್ಪ ದೊಡ್ಡಿ, ಮಾರೇಶ ಚಾಗಿ ಸ್ಥಳ ಪರಿಶೀಲನ ಮಾಡಿ ಕಳಪೆ ಮಟ್ಟ ಮಾಡಿದ ಕಾಮಗಾರಿಯನ್ನು ಪುನಃ ಡಮಾಲಿಶ್ ಮಾಡಿ ಮರು ಡಾಂಬರೀಕರಣ ಮಾಡಬೇಕೆಂದು ಪತ್ರಿಕೆ ಹೇಳಿಕೆ ಮುಖಾಂತರ ಒತ್ತಾಯಿಸಿದ್ದಾರೆ..

ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
