ವಿದ್ಯಾರ್ಥಿನಿ ಕಾಣೆ ಪತ್ತೆಗೆ ಪೋಷಕರ ಮನವಿ…!!!

ವಿದ್ಯಾರ್ಥಿನಿ ಕಾಣೆ ಪತ್ತೆಗೆ ಪೋಷಕರ ಮನವಿ.

ಸಿಂಧನೂರು : ಮೇ.19 ನರ್ಸಿಂಗ್ ಓದುತ್ತಿರುವ 23 ವರ್ಷದ ವಿದ್ಯಾರ್ಥಿನಿ ಕಾಣೆಯಾಗಿದ್ದು ಪತ್ತೆಗಾಗಿ ಪೋಷಕರು ಪೋಲೀಸ್ ಠಾಣೆಗೆ ದೂರು ನೀಡಿ ಹುಡಕಿ ಕೊಡುವಂತೆ ಮನವಿ ಮಾಡಿಕೊಂಡಿದ್ದಾರೆ.

ತಾಲೂಕಿನ ಮುದ್ದಾಪುರ ಕ್ರಾಸ್ ನ ಸುಮಿತ್ರಾ ತಂದೆ ಅಯ್ಯಪ್ಪ ಗೀಣಿವಾರ ವಯಸ್ಸು 23 ವರ್ಷ ಕಾಣೆಯಾದ ವಿದ್ಯಾರ್ಥಿನಿ ಯಾಗಿದ್ದು ಪರೀಕ್ಷೆ ಬರೆಯಲು ಹೋದವಳು ಹತ್ತು ತಿಂಗಳಾದರೂ ಇನ್ನು ಮನೆಗೆ ಬಂದಿಲ್ಲ ಎನ್ನಲಾಗಿದೆ.
27.7.2021 ರಂದು ನರ್ಸಿಂಗ್ ಪರೀಕ್ಷೆ ಬರೆಯಲು ಮನೆಯಿಂದ ಬೆಂಗಳೂರಿಗೆ ಹೋದವಳು ಇನ್ನು ಮರಳಿ ಮನೆಗೆ ಬಾರದೆ ಇರುವುದರಿಂದ ಕಾಣೆಯಾಗಿದ್ದಾಳೆ ಎಂದು ಅನುಮಾನ ಗೊಂಡ ಪೋಷಕರು ತುರ್ವಿಹಾಳ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಪೋಷಕರ ದೂರಿನ ಮೇರೆಗೆ ತುರ್ವಿಹಾಳ ಠಾಣೆಯ ಪೋಲೀಸರು ಪ್ರಕರಣ ದಾಖಲಿಸಿಕೊಂಡು ವಿದ್ಯಾರ್ಥಿನಿ ಪತ್ತೆಗಾಗಿ ಹುಡುಕಾಟ ನಡೆಸಿದ್ದು ಎಲ್ಲಿಯಾದರೂ, ಯಾರಿಗಾದರು ಮಾಹಿತಿ ಸಿಕ್ಕಲ್ಲಿ ಈ ದೂರವಾಣಿ ನಂಬರಿಗೆ 0835.244233 ಕರೆ ಮಾಡಿ ಮಾಹಿತಿ ನೀಡಬೇಕು ಎಂದು ತುರ್ವಿಹಾಳ ಠಾಣೆಯ ಪೋಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend