ವಾಲ್ಮೀಕಿ 7.5% ಮೀಸಲಾತಿಗಾಗಿ ಮೇ 20 ಹೋರಾಟ – ವೆಂಕೋಬ ನಾಯಕ.
ಸಿಂಧನೂರು : ಮೇ.15. ವಾಲ್ಮೀಕಿ ನಾಯಕ ಸಮಾಜಕ್ಕೆ 7.5 % ಮೀಸಲಾತಿಗಾಗಿ ಆಗ್ರಹಿಸಿ ಸಮಾಜದ ಪ್ರಸನ್ನನಂದಾ ಮಹಾಸ್ವಾಮಿಗಳು ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಹೋರಾಟ ಮಾಡುತ್ತಿದ್ದರೂ ಸಹ ಕನಿಷ್ಠ ಸೌಜನ್ಯ ತೋರಿಸದ ಸರಕಾರದ ನಡೆಯನ್ನು ವಾಲ್ಮೀಕಿ ಸಮಾಜ ಉಗ್ರ ವಾಗಿ ಖಂಡಿಸುತ್ತದೆ ಎಂದು ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷರಾದ ವೆಂಕೋಬ ನಾಯಕ ರಾಮಾತ್ನಾಳ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮಾಜದ ಜಂಟಿಯಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ 7.5% ಮೀಸಲಾತಿ ಕೊಡುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಮಾತು ಕೊಟ್ಟ ಯಡಿಯೂರಪ್ಪ ಮತ್ತು ಶ್ರೀರಾಮುಲು ಈಗ ಮಾತು ಈಡೇರಿಸದೇ ವಚನ ಭ್ರಷ್ಟಾರಾಗಿದ್ದಾರೆ ಎಂದರು.
ಮೇ 20 ರಂದು ಹೋರಾಟಕ್ಕೆ ಬೆಂಬಲಿಸಿ ಇಡೀ ರಾಜ್ಯಾದ್ಯಂತ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮಿಸಲಾತಿಗಾಗಿ ಆಗ್ರಹಿಸಿ ಎಸ್ ಸಿ ,ಎಸ್ ಟಿ ಜನಾಂಗದಿಂದ ಬೃಹತ್ ಪ್ರಮಾಣದಲ್ಲಿ ಗಣೇಶ ದೇವಸ್ಥಾನದಿಂದ ಹಿಡಿದು ಗಾಂಧಿ ವೃತ್ತದಲ್ಲಿ ಮಾನವ ಸರಪಳಿ ಮೂಲಕ ಹೋರಾಟವನ್ನು ಮಾಡಿ ತಹಶೀಲ್ದಾರರ ಮೂಲಕ ಸರಕಾರವನ್ನು ಒತ್ತಾಯಿಸಲಾಗುತ್ತದೆ ಎಂದರು.
7.5 ಮೀಸಲಾತಿಗಾಗಿ ಆಗ್ರಹಿಸಿ ಸಮಾಜದ ಸ್ವಾಮೀಜಿಗಳು ಬೆಂಗಳೂರು ಫ್ರಿಡಂ ಪಾರ್ಕನಲ್ಲಿ ಹೋರಾಟ ಮಾಡುತ್ತಿದ್ದು ಮೇ 20ಕ್ಕೆ 100 ದಿನಗಳಾಗಲಿದ್ದು ಸರಕಾರದ ನಿರ್ಲಕ್ಷ್ಯದ ವಿರುದ್ಧ ಸ್ವಾಮಿಗಳ ಹೋರಾಟಕ್ಕೆ ಬೆಂಬಲಿಸಿ ಮೇ 20ರಂದು ರಾಜ್ಯಾದ್ಯಂತ ಹೋರಾಟ ಮಾಡಲಾಗುತ್ತದೆ.ಸಮಾಜದ ಬಗ್ಗೆ ಕಳಕಳಿ ಇರುವ ಸಮಾಜದ ಚುನಾಯಿತ ಪ್ರತಿನಿಧಿಗಳು ಪಕ್ಷಭೇದ ಮರೆತು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಸಮಾಜದ ಮುಖಂಡರಾದ ಆರ್ ವೆಂಕಟೇಶ್ ನಾಯಕ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಹಾಗೂ ದಲಿತ ಸಮಾಜದ ಮುಖಂಡರುಗಳಾದ ಎಚ್ ಎನ್ ಬಡಿಗೇರ್ ,ನರಸಪ್ಪ ಕಟ್ಟಿಮನಿ, ದುರುಗಪ್ಪ ಮಲ್ಲದಗುಡ್ಡ,ಹಂಸರಾಜ್ ಮಾಡಸಿರಿವಾರ,ತಿಮ್ಮಣ್ಣ ನಾಯಕ, ಹನುಮಂತ ಪುಲದಿನ್ನಿ,ವೆಂಕೋಬ ನಾಯಕ ಕಣ್ಣೂರು,ಮಹಾದೇವ ನಾಯಕ ,ಮೌನೇಶ ನಾಯಕ್, ಕನಕಪ್ಪ ನಾಯಕ,ಕರೇಗೌಡ ಕುರಕುಂದಿ,ಡಾ.ಬಸವರಾಜ, ಶಂಕರ್ ವಾಲಿಕಾರ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿ ಇದ್ದರು..
ವರದಿ.ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
