ನೊಂದು ಬೆಂದವರ ಅನಾಥರ ಬಾಳಿಗೆ ಬೆಳಕಾಗಿರುವ ಡಿ.ಕೆ ಶಿವಕುಮಾರ – ಬಸನಗೌಡ ಬಾದರ್ಲಿ.
ಸಿಂಧನೂರು : ನಗರದ ಕುಷ್ಟಗಿ ರಸ್ತೆಯಲ್ಲಿರುವ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ಬುದ್ಧಿಮಾಂಧ್ಯ ಆಶ್ರಮ ವತಿಯಿಂದ ಹಮ್ಮಿಕೊಂಡಿದ್ದ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಡಿ.ಕೆ ಶಿವಕುಮಾರ ಅವರ 61 ನೇ ವರ್ಷದ ಹುಟ್ಟು ಹಬ್ಬವನ್ನು ಬಸನಗೌಡ ಬಾದರ್ಲಿ ಫೌಂಡೇಶನ್ ವತಿಯಿಂದ ಸಿರಿಧಾನ್ಯದ ಆಹಾರ ವಸ್ತುಗಳು ಹಾಗೂ ವಿವಿಧ ಬಗೆಯ ಹಣ್ಣು ಹಂಪಲಗಳನ್ನು ವಿತರಿಸಿ ಆಶ್ರಮದಲ್ಲಿನ ಅನಾಥ ಹಿರಿಯ ಜೀವಿಗಳು ಹಾಗು ವಯಸ್ಕರ ಬುದ್ಧಿಮಾಂಧ್ಯ ಜೀವಿಗಳ ಕಡೆಯಿಂದ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂದಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಹಾಗೂ ಮಾಜಿ ಯುವ ಕೆಪಿಸಿಸಿ ರಾಜ್ಯಾಧ್ಯಕ್ಷರಾದ ಬಸನಗೌಡ ಬಾದರ್ಲಿ ಮಾತನಾಡಿ ನೊಂದು ಬೆಂದವರ ಹಾಗೂ ಅನಾಥರ ಬಾಳಿಗೆ ಬೆಳಕಾಗಿರುವ ಡಿ.ಕೆ ಶಿವಕುಮಾರ ಕರ್ನಾಟಕ ಪ್ರದೇಶ ಕಾಂಗ್ರೆಸ ಪಕ್ಷದ ರಾಜ್ಯಾಧ್ಯಕ್ಷರಾಗಿ ಪಕ್ಷವನ್ನು ಬಲಗೊಳಿಸುವ ಸಮರ್ಥ ನಾಯಕರು, ಇವರು ರಾಜ್ಯಾದ್ಯಂತ ಕಾರುಣ್ಯ ಆಶ್ರಮದಂತಹ ಹಿರಿಯ ನಾಗರಿಕ ಸೇವೆ ಮಾಡುವಂತಹ ಹಲವಾರು ಸಂಸ್ಥೆಗಳಿಗೆ ವೈಯಕ್ತಿಕವಾಗಿ ದೊಡ್ಡ ದೊಡ್ಡ ಮಟ್ಟದ ಸಹಾಯ ಸೇವೆ ಮಾಡಿದ್ದಾರೆ ಇಂತಹ ಒಬ್ಬ ನಾಯಕನಿಗೆ ಕಾರುಣ್ಯ ಆಶ್ರಯ ಪಡೆದ ಎಲ್ಲಾ ಜೀವಿಗಳು ಆಶೀರ್ವದಿಸಬೇಕು ಮುಂದಿನ ಚುನಾವಣೆಯಲ್ಲಿ ಅಧಿಕಾರ ಪಡೆದುಕೊಳ್ಳಬೇಕು ಎಂದು ತಾವುಗಳೆಲ್ಲ ಆಶ್ರೀವದಿಸಬೇಕು. ಕುಟುಂಬದ ಸದಸ್ಯರಾಗಿ, ಸಹೋದರರಾಗಿ ಈ ಕಾರುಣ್ಯ ಆಶ್ರಮವನ್ನು ಮುನ್ನಡೆಸುತ್ತಿರುವ ಹರೇಟನೂರು ಗ್ರಾಮದ ಹಿರೇಮಠ ಕುಟುಂಬದ ಚನ್ನಬಸಯ್ಯ ಸ್ವಾಮಿ ಹಾಗೂ ಇವರ ಶ್ರೀಮತಿಯಾದ ಸುಜಾತ ಚನ್ನಬಸಯ್ಯ ಇವರ ಸೇವೆ ಅಪಾರವಾದುದು ಇಂತಹ ಸಮಾಜಸೇವೆಗೆ ಮೀಸಲಿಟ್ಟಂತಹ ಕುಟುಂಬದ ಜೊತೆ ಡಿ.ಕೆ ಶಿವಕುಮಾರ ಹಾಗೂ ಸಿಂಧನೂರಿನ ಕಾಂಗ್ರೆಸ್ ಪಕ್ಷ ನಿರಂತರವಾಗಿ ಬೆನ್ನೆಲುಬಾಗಿ ನಿಂತು ಸರ್ಕಾರದ ಸೌಲಭ್ಯಗಳನ್ನು ಒದಗಿಸುತ್ತದೆ.

ಇಂದಿನ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ನಮ್ಮ ಕೈಯಲ್ಲಿ ಅಧಿಕಾರವಿಲ್ಲದಿದ್ದರೂ ಸಹ ಶಕ್ತಿ ಮೀರಿ ಜನತೆಯ ಸೇವೆ ಮಾಡುತ್ತಿದ್ದೇವೆ ಮುಂದಿನ ದಿನಮಾನಗಳಲ್ಲಿ ಕಾರುಣ್ಯ ಆಶ್ರಮದ ಎಲ್ಲಾ ಹಿರಿಯ ಜೀವಿಗಳು ನಮಗೆ ಆಶೀರ್ವಾದ ಮಾಡಬೇಕು ಈ ಕಾರುಣ್ಯ ಆಶ್ರಮದ ಬಗ್ಗೆ ನಾಯಕರ ಜೊತೆ ಈಗಾಗಲೇ ಹಲವಾರು ವಿಷಯಗಳನ್ನು ಚರ್ಚಿಸಿ ಕಾರುಣ್ಯ ಆಶ್ರಮಕ್ಕೆ ಕಾಂಗ್ರೆಸ್ ಪಕ್ಷದ ವತಿಯಿಂದ ದೊಡ್ಡ ಮಟ್ಟದ ಸಹಾಯ ನೀಡುವುದಾಗಿ ಕಾಂಗ್ರೆಸ್ ಪಕ್ಷದ ಎಲ್ಲಾ ಹಿರಿಯರು ಒಪ್ಪಿಗೆ ನೀಡುವುದರ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮಾತನಾಡಿ ಡಿ.ಕೆ ಶಿವಕುಮಾರ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿ ಎಲ್ಲಾ ಹಿರಿಯ ಜೀವಿಗಳ ಆಶೀರ್ವಾದ ತೆಗೆದುಕೊಂಡರು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಶರಣು ಪಾ. ಹಿರೇಮಠ ಗೌರವಾಧ್ಯಕ್ಷರು ಕಾರುಣ್ಯ ಆಶ್ರಮ, ಮುಖ್ಯ ಅತಿಥಿಗಳಾಗಿ ವೀರೇಶ ಯಡಿಯೂರುಮಠ ಕಾರ್ಯಾಧ್ಯಕ್ಷರು ಕಾರುಣ್ಯ ಆಶ್ರಮ, ಬೂದಿ ಬಸವಸ್ವಾಮಿ ಭೂದಾನಿಗಳು ಹಾಗೂ ಸದಸ್ಯರು ಕಾರುಣ್ಯ ಆಶ್ರಮ, ಖಾಜಾಹುಸೇನ್ ರವಡಕುಂದಾ ಕಾಂಗ್ರೆಸ್ ಮುಖಂಡರು, ಇಂದುಮತಿ ಏಕನಾಥ ಮಹಿಳಾ ಕಾಂಗ್ರೆಸ್ ಮುಖಂಡರು, ಪ್ರಭು ವಿಶ್ವಕರ್ಮ ದೇವರಗುಡಿ ಕಾಂಗ್ರೆಸ್ ಯುವ ಮುಖಂಡರು, ಸುಜಾತ ಚನ್ನಬಸಯ್ಯ ಸ್ವಾಮಿ ಮೇಲ್ವಿಚಾರಕರು ಕಾರುಣ್ಯ ಆಶ್ರಮ ,ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಬಸನಗೌಡ ಬಾದಲಿ ಫೌಂಡೇಶನ್ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು….
ವರದಿ. ದುಗ್ಗಪ್ಪ ಸಿಂಧನೂರು
ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030
