ಸರಕಾರದ ನೀತಿಯಿಂದ ಗ್ರಾ.ಪಂ ನೌಕರರು ಬಿದಿ ಪಾಲು-ನಾಡಗೌಡ…!!!

ಸರಕಾರದ ನೀತಿಯಿಂದ ಗ್ರಾ.ಪಂ ನೌಕರರು ಬಿದಿ ಪಾಲು-ನಾಡಗೌಡ.

ಸಿಂಧನೂರು. ಮೇ 13. ಕೇಂದ್ರ ಬಿಜೆಪಿ ಸರಕಾರದ ಆರ್ಥಿಕ, ಜನ ಹಾಗೂ ನೌಕರರ ವಿರೋಧಿ ನೀತಿಗಳಿಂದ ಗ್ರಾಮ ಪಂಚಾಯಿತಿ ನೌಕರರು ಇಂದು ಬೀದಿಗೆ ಬರುವ ಸಂದರ್ಭ ಒದಗಿ ಬಂದಿದೆ. ಅದಕ್ಕಾಗಿ ನೌಕರರು ಒಗ್ಗಟ್ಟಿನಿಂದ ಸರಕಾರದ ವಿರುಧ್ಧ ಪ್ರತಿಭಟನೆ ಮಾಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕು ಎಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಮುಖಂಡರಾದ ಆರ್ ಎಸ್ ಬಸವರಾಜ ನೌಕರರಿಗೆ ಕರೆ ನೀಡಿದರು.
ನಗರದ ಸ್ತ್ರೀ ಶಕ್ತಿ ಭವನದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ವಿಭಾಗ ಮಟ್ಟದ ನೌಕರರ ವಿಸ್ತೃತ ಸಭೆ ಉದ್ಘಾಟಿಸಿ ಮಾತನಾಡಿದ ಅವರು ನೌಕರರು ಒಗ್ಗಟ್ಟಾಗಿ ಹೋರಾಟ ಮಾಡಿದಾಗ ಮಾತ್ರ ನಮಗೆ ಉಳಿಗಾಲವಿದ್ದು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನೌಕರರು ನೌಕರಿ ಕಳೆದುಕೊಂಡು ಮನೆಗೆ ಹೋಗುವ ಸಮಯ ಬರಬಹುದು ಎಂದರು.
ರಾಜ್ಯದಲ್ಲಿ ಸುಮಾರು 65 ಸಾವಿರ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದು ಸಮಯಕ್ಕೆ ಸರಿಯಾಗಿ ವೇತನ ಇಲ್ಲದೇ ಸರ್ಕಾರದ ಯೋಜನೆಗಳನ್ನು ಗ್ರಾಮ ಪಂಚಾಯಿತಿ ನೌಕರರು ಜನರ ಮನೆ ಬಾಗಿಲಿಗೆ ಮುಟ್ಟಿಸುವ ನಿಶ್ವಾರ್ಥ ಕೆಲಸ ಮಾಡುತ್ತಿದ್ದಾರೆ.ಆದರೆ ಸರಕಾರ ಮಾತ್ರ ನೌಕರರ ಬೇಡಿಕೆಗಳನ್ನು ಈಡೇರಿಸಲಾಗದೆ ನಿರ್ಲಕ್ಷ್ಯ ಮಾಡುತ್ತಾ ಬಂದಿದೆ ಎಂದು ಗ್ರಾಮ ಪಂಚಾಯಿತಿ ನೌಕರ ಸಂಘದ (ಸಿಐಟಿಯು)ರಾಜ್ಯ ಉಪಾಧ್ಯಕ್ಷ ಎಂ ಬಿ ನಾಡಗೌಡ ಹೇಳಿದರು.
ಬೆಲೆ ಏರಿಕೆ ಅನುಗುಣವಾಗಿ ಸರ್ಕಾರ ನೌಕರರ ವೇತನ ಹೆಚ್ಚಳ ಮಾಡದೇ ನಿರ್ಲಕ್ಷ್ಯ ಮಾಡಿದ ಕಾರಣ ನೌಕರರು ಬದುಕು ಆತಂತ್ರವಾಗಿದ್ದು ಎಲ್ಲಾ ನೌಕರರು ಯಾರಿಗೂ ಹೆದರದೆ ಸಂಘಟಿತರಾಗಿ ಹೋರಾಟ ಮಾಡುವ ಮೂಲಕ ನಮ್ಮ ಬೇಡಿಕೆಗಳನ್ನು ಈಡೇರಿಸಿಕೊಂಡಾಗ ಮಾತ್ರ ಮಾರುತಿ ಮಾನ್ಪಡೆ ಅವರ ಕನಸು ನನಸು ಆಗುತ್ತದೆ ಎಂದು ಹೇಳಿದರು.
ನೌಕರರ ಸಂಘದ ಮುಖಂಡರಾದ ಅಶೋಕ ಧಣಿ,ಶೇಕ್ಷಾಖಾದ್ರಿ,ದೇವೇಂದ್ರ ಗೌಡ ,ಮಲ್ಲಿಕಾರ್ಜುನ ಸ್ವಾಮಿ, ವೀರೇಶ ಸ್ವಾಮಿ,ಮೌನೇಶ, ಸೇರಿದಂತೆ ವಿಜಯನಗರ, ಬಳ್ಳಾರಿ,ಕೊಪ್ಪಳ,ರಾಯಚೂರು ಜಿಲ್ಲೆಗಳ ಗ್ರಾಮ ಪಂಚಾಯಿತಿ ನೌಕರರು ಸಭೆಯಲ್ಲಿ ಭಾಗವಹಿಸಿದ್ದರು…

ವರದಿ. ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend