ಮಾಜಿ ಪ್ರಧಾನ ಮಂತ್ರಿ ಶ್ರೀ ಗುಲ್ಜಾರಿ ಲಾಲ್ ನಂದಾ ಅವರು ನಮ್ಮನ್ನು ಅಗಲಿ ಇಂದಿಗೆ 23 ವಷ೯ಗಳಾದವು…!!!

ಮಾಜಿ ಪ್ರಧಾನ ಮಂತ್ರಿ ಶ್ರೀ ಗುಲ್ಜಾರಿ ಲಾಲ್ ನಂದಾ ಅವರು ನಮ್ಮನ್ನು ಅಗಲಿ ಇಂದಿಗೆ 23 ವಷ೯ಗಳಾದವು……

ಲಾಹೋರ್, ಆಗ್ರಾ ಮತ್ತು ಅಲಹಾಬಾದ್ನಲ್ಲಿ ಶಿಕ್ಷಣವನ್ನು ಪಡೆದರು. ಅಲಹಾಬಾದ್ ವಿಶ್ವವಿದ್ಯಾಲಯದಲ್ಲಿ 1920ರಿಂದ 21ರವರಗೆ ಕಾರ್ಮಿಕ ಸಮಸ್ಯೆಗಳ ಕುರಿತು ಸಂಶೋಧನಾ ವಿದ್ಯಾಥಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ. ನಂದಾ ಬಳಿಕ 1921ರಲ್ಲಿ ಅರ್ಥಶಾಸ್ತ್ರ ಉಪನ್ಯಾಸಕರಾಗಿ ಮುಂಬಯಿಯ ನ್ಯಾಷನಲ್ ಕಾಲೇಜನ್ನು ಸೇರಿದರು. ಅದೇ ವರುಷ ಅವರು ಅಸಹಕಾರ ಚಳುವಳಿಯನ್ನು ಸೇರಿದರು. 1922ರಲ್ಲಿ ಅಹಮದಾಬಾದ್ ಜವುಳಿ ಕಾರ್ಮಿಕರ ಸಂಘದ ಕಾರ್ಯದರ್ಶಿಯಾದರು. 1946ರವರಗೆ ಶ್ರೀ ನಂದಾ ಅಲ್ಲೇ ಕಾರ್ಯ ನಿರ್ವಹಿಸಿದರು. 1932ರಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡದಕ್ಕಾಗಿ ಶ್ರೀ ನಂದಾ ಅವರನ್ನು ಬಂಧಿಸಲಾಯಿತು. 1942ರಿಂದ 1944ರವರೆಗೆ ಮತ್ತೆ ಅದೇ ಕಾರಣಕ್ಕಾಗಿ ಅವರನ್ನು ಬಂಧಿಸಲಾಯಿತು.

ಶ್ರೀ ನಂದಾ 1937ರಲ್ಲಿ ಮುಂಬಯಿ ವಿಧಾನಸಭೆಗೆ ಚುನಾಯಿತರಾದರು. 1937 ರಿಂದ 1939ರವೆರೆಗೆ ಅವರು ಮುಂಬಯಿ ಸರ್ಕಾರದ ಸಂಸದೀಯ ಕಾರ್ಯದರ್ಶಿ (ಕಾರ್ಮಿಕ ಮತ್ತು ಅಬಕಾರಿ)ಯಾಗಿದ್ದರು. ಬಳಿಕ ಮುಂಬಯಿ ಸರ್ಕಾರದಲ್ಲಿ ಕಾರ್ಮಿಕ ಸಚಿವರಾಗಿ (1946ರಿಂದ 1950) ರಾಜ್ಯ ಸಭೆಗೆ ಕಾರ್ಮಿಕ ವಿವಾದಗಳ ಮಸೂದೆಯನ್ನು ಪ್ರಾಯೋಗಿಕವಾಗಿ ಪರಿಚಯಿಸಿದರು. ಅವರು ಕಸ್ತೂರ ಬಾ ಸ್ಮಾರಕ ಟ್ರಸ್ಟ್ನ ಟ್ರಸ್ಟಿಯಾಗಿ, ಹಿಂದೂಸ್ಥಾನ್ ಮಜ್ದೂರ್ ಸೇವಕ್ ಸಂಘದ ಕಾರ್ಯದರ್ಶಿಯಾಗಿ ಮತ್ತು ಮುಂಬಯಿ ವಸತಿ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ರಾಷ್ಟ್ರೀಯ ಯೋಜನಾ ಸಮಿತಿಯ ಸದಸ್ಯರಾಗಿಯೂ ಇದ್ದರು. ಶ್ರೀ ನಂದಾ ಅವರು ಭಾರತೀಯ ರಾಷ್ಟ್ರೀಯ ಟ್ರೇಡ್ ಯೂನಿಯನ್ ಕಾಂಗ್ರೆಸ್ನ ಆಯೋಜನೆಯಲ್ಲಿ ಸಕ್ರಿಯರಾಗಿದ್ದು ಬಳಿಕ ಅದರ ಅಧ್ಯಕ್ಷರಾದರು.

1947ರಲ್ಲಿ ಅಂತರಾಷ್ಟ್ರೀಯ ಕಾರ್ಮಿಕ ಸಮಾವೇಶಕ್ಕೆ ಸರ್ಕಾರಿ ಪ್ರತಿನಿಧಿಯಾಗಿ ಶ್ರೀ ಗುಲ್ಜಾರಿ ನಂದಾ ಅವರು ಜಿನೆವಾಗೆ ತೆರಳಿದರು. ಸಮಾವೇಶ ನೇಮಿಸಿದ ‘ ದಿ ಫ್ರೀಡಮ್ ಆಫ್ ಅಸೋಸಿಯೇಶನ್ ಕಮಿಟಿ’ಯಲ್ಲೂ ಅವರು ಕಾರ್ಯ ನಿರ್ವಹಿಸಿದರು. ಬಳಿಕ ವಸತಿ ಮತ್ತು ಕಾರ್ಮಿಕ ಸ್ಥಿತಿಗತಿಗಳ ಅಧ್ಯಯನ ನಡೆಸಲು ಅವರು ಸ್ವೀಡನ್, ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಬೆಲ್ಜಿಯಮ್ ಮತ್ತು ಇಂಗ್ಲೆಂಡ್ ರಾಷ್ಟ್ರಗಳಿಗೆ ಭೇಟಿ ನೀಡಿದರು.

ಮಾರ್ಚ್ 1950ರಲ್ಲಿ ಅವರು ಯೋಜನಾ ಆಯೋಗದ ಉಪಾಧ್ಯಕ್ಷರಾಗಿ ನೇಮಕಗೊಂಡರು. ಮುಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರದ ಯೋಜನಾ ಸಚಿವರಾಗಿ ನೇಮಕಗೊಂಡರು. ಇದರ ಜತೆ ನೀರಾವರಿ ಮತ್ತು ಇಂಧನ ಖಾತೆಗಳ ಹೆಚ್ಚುವರಿ ಅಧಿಕಾರವನ್ನು ಅವರಿಗೆ ನೀಡಲಾಯಿತು. 1952ರ ಸಾಮಾನ್ಯ ಚುನಾವಣೆಯಲ್ಲಿ ಮುಂಬಯಿಯ ಹೌಸ್ ಆಫ್ ದಿ ಪೀಪಲ್ಗೆ ಚುನಾಯಿತರಾದರು. 1955ರಲ್ಲಿ ಸಿಂಗಾಪುರದಲ್ಲಿ ನಡೆದ ಯೋಜನಾ ಸಲಹಾ ಸಮಿತಿ ಮತ್ತು ಜಿನೆವಾದಲ್ಲಿ 1959ರಲ್ಲಿ ನಡೆದ ಅಂತರಾಷ್ಟ್ರೀಯ ಕಾರ್ಮಿಕ ಸಮಾವೇಶದ ಭಾರತೀಯ ನಿಯೋಗದ ಮುಂದಾಳತ್ವ ವಹಿಸಿದರು.

1957ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶ್ರೀ ನಂದಾ ಅವರು ಚುನಾಯಿತರಾದರು ಹಾಗೂ ಕಾರ್ಮಿಕ, ಉದ್ಯೋಗ ಮತ್ತು ಯೋಜನಾ ಖಾತೆಗಳ ಕೇಂದ್ರ ಸಚಿವರಾಗಿಯೂ ನೇಮಕಗೊಂಡರು. ಬಳಿಕ ಯೋಜನಾ ಆಯೋಗದ ಉಪಾಧ್ಯಕ್ಷರಾದರು. 1959ರಲ್ಲಿ ಅವರು ಜರ್ಮನಿ, ಯುಗೋಸ್ಲಾವಿಯಾ ಮತ್ತು ಆಸ್ಟ್ರಿಯಾಗಳಿಗೆ ಭೇಟಿ ನೀಡಿದರು.

ಪಂಡಿತ್ ನೆಹರೂ ಅವರ ಸಾವಿನ ಬಳಿಕ ಮೇ 27, 1964ರಂದು ಶ್ರೀ. ನಂದಾ ಅವರು ಭಾರತದ ಪ್ರಧಾನ ಮಂತ್ರಿಯಾದರು. ಬಳಿಕ ಪುನಃ 1966ರ ಜನವರಿ 11ರಂದು ಟಾಶ್ಕೆಂಟ್ನಲ್ಲಿ ಶ್ರೀ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಸಾವಿನ ಬಳಿಕ ಎರಡನೆಯ ಅವಧಿಗೆ ಪ್ರಧಾನ ಮಂತ್ರಿಯಾದರು.

ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ಓವ೯ ವೃದ್ಧನು ಬಾಡಿಗೆಯ ಹಣವನ್ನು ಬಾಕಿ ಉಳಿಸಿದ್ದರಿಂದ , ಮನೆಯ ಮಾಲೀಕ ಆತನನ್ನು ತನ್ನ ಮನೆಯಿಂದ ಹೊರಗೆ ಹಾಕಿದ್ದನು. ಆ ಮುದುಕನ ವಯಸ್ಸು 94 ವಷ೯ . ವೃದ್ಧನ ಹತ್ತಿರ ಒಂದು ಹಳೆಯದಾದ ಕಬ್ಬಿಣದ ಪಲಂಗು , ಒಂದೆರಡು ಅಲ್ಯುಮಿನಿಯಂ ತಟ್ಟೆ, ಪ್ಲಾಸ್ಟಿಕ್ ನ ಬಕೆಟ್ಟು ಹಾಗೂ ಹರಿದ ಹಾಸಿಗೆ ಹೊದಿಕೆ ಇವು ಅವರ ಹತ್ತಿರ ಇದ್ದುದನ್ನು ಮನೆಯ ಮಾಲೀಕ ರಸ್ತೆಯಲ್ಲಿ ಎಸೆದಿದ್ದ.

ಮುದುಕನು ಮನೆಯ ಮಾಲೀಕನಿಗೆ ಸ್ವಲ್ಪ ಸಮಯ ಕೊಡಿ ಎಂದು ಬೇಡಿಕೊಳ್ಳತೊಡಗಿದನು. ಇನ್ನಿತರ ಜನರಿಗೂ ವೃದ್ಧನ ಬಗ್ಗೆ ಕರುಣೆಯಾಗಿ ಮನೆಯ ಮಾಲೀಕನಿಗೆ ವೃದ್ಧನಿಗೆ ಕೆಲವು ದಿನಗಳವರೆಗೆ ಸಮಯ ಕೊಡಲು ಹೇಳಿದರು.

ಮನೆಯ ಮಾಲೀಕ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡ. ಅಲ್ಲಿ ಕೂಡಿದ ಜನರಲ್ಲಿ ಕೆಲವರು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ವ್ರಧ್ಧನ ಸಾಮಾನುಗಳನ್ನು ಮತ್ತೇ ಮನೆಯ ಒಳಗೆ ಒಯ್ದು ಇಟ್ಟರು.

ಅಲ್ಲಿಂದಲೇ ಹೋಗುತ್ತಿದ್ದ ಓವ೯ ಪತ್ರಕತ೯ನೋವ೯ನು ಈ ಘಟನೆಯನ್ನು ನೋಡುತ್ತಾನೆ. ಒಬ್ಬ ವ್ರಧ್ಧನ ಮೇಲೆ ಈ ರೀತಿಯ ದೌರ್ಜನ್ಯ ನಡೆದಿರುವುದನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯಲ್ಲಿ ಪ್ರಕಟಿಸಬೇಕೆಂಬ ಯೋಚನೆಯಿಂದ ತನ್ನ ಪತ್ರಿಕಾ ಕಾಯಾ೯ಲಯಕ್ಕೆ ಹೋಗುತ್ತಾನೆ. ಜೊತೆಗೆ ಅಲ್ಲಿನ ಘಟನಾವಳಿಗಳ ಕೆಲವು ಫೋಟೋಗಳನ್ನೂ ತೆಗೆದುಕೊಂಡು ಹೋಗಿರುತ್ತಾನೆ.

ಆತ ಅದರ ಬಗ್ಗೆ ಸುದ್ದಿ ಬರೆಯುತ್ತಾನೆ. ಅದಕ್ಕೊಂದು ತಲೆಬರಹ ಹಾಕುತ್ತಾನೆ. “ಕ್ರೂರ ಮನೆಯ ಮಾಲೀಕನಿಂದ ವ್ರಧ್ಧನ ಮೇಲೆ ಅನ್ಯಾಯ ” !

ಇದೆಲ್ಲ ಘಟನಾವಳಿಗಳ ಬಗ್ಗೆ ತಾನು ಬರೆದ ಎಲ್ಲ ಲೇಖನವನ್ನು ತಾನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕರಿಗೆ ತೋರಿಸುತ್ತಾನೆ.

ತನ್ನ ವರದಿಗಾರನು ತಂದ ವರದಿ ಓದಿ , ಅಲ್ಲಿನ ಘಟನಾವಳಿಯ ಫೋಟೋ ನೋಡಿ , ಪತ್ರಿಕೆಯ ಸಂಪಾದಕರು ಒಂದು ಕ್ಷಣ ಗರಬಡಿದಂತೆ ದಿಗ್ಮೂಢರಾಗುತ್ತಾರೆ. ಅವರು ತನ್ನ ವರದಿಗಾರನಿಗೆ ಕೇಳುತ್ತಾರೆ.

“ಈ ಫೋಟೋದಲ್ಲಿರುವ ಮುದುಕನ ಪರಿಚಯ ಇದೆಯೇ ? ”

ವರದಿಗಾರ “ಇಲ್ಲ ” ಅಂತ ತಲೆ ಅಲ್ಲಾಡಿಸುತ್ತಾನೆ.

ಮರುದಿನ ಆತನ ದಿನಪತ್ರಿಕೆಯಲ್ಲಿ ಮುಖಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ವರದಿ ಪ್ರಕಟವಾಗಿರುತ್ತದೆ.

” ಗುಲ್ಜಾರಿಲಾಲ್ ನಂದಾ ; ಭಾರತದ ಮಾಜಿ ಪ್ರಧಾನಿ, ದಯನೀಯ ಸ್ಥಿತಿಯಲ್ಲಿ ! ” ಎಂಬ ತಲೆಬರಹದಲ್ಲಿ ಪ್ರಕಟಗೊಂಡಿರುತ್ತದೆ.

ಆ ವರದಿಯಲ್ಲಿ , ಮಾಜಿ ಪ್ರಧಾನಿ ನಂದಾ ಅವರು ಮನೆಯ ಮಾಲೀಕನಿಗೆ ಬಾಡಿಗೆ ಕೊಡಲು ಶಕ್ಯವಿಲ್ಲದ ಪ್ರಸಂಗ , ಅವರ ಹಾಸಿಗೆ ಹೊದಿಕೆಯನ್ನು ಮಾಲಿಕನು ರಸ್ತೆಗೆ ಎಸೆದಿದ್ದರ ಬಗ್ಗೆ ಬರೆಯಲಾಗಿರುತ್ತದೆ.

ಅದರಲ್ಲಿ ಮುಂದುವರೆದು , ಇಂದು ಒಂದೇ ಸಲ ಆರಿಸಿ ಬಂದವರೂ ಕೂಡ ಕೋಟ್ಯಾಧೀಪತಿಗಳಾಗಿರುತ್ತಾರೆ. ಆದರೆ ಎರಡು ಬಾರಿ ಹಂಗಾಮಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ಹಾಗೂ ಬಹಳಷ್ಟು ವರ್ಷಗಳ ಕಾಲ ಕೇಂದ್ರದ ಮಂತ್ರಿಯಾಗಿದ್ದ ವ್ಯಕ್ತಿಯ ಹತ್ತಿರ ವಾಸಿಸಲು ಸ್ವಂತದ್ದು ಅಂತ ಒಂದು ಮನೆಯೂ ಇಲ್ಲ.

ವಾಸ್ತವಿಕವಾಗಿ ಗುಲ್ಜಾರಿಲಾಲ್ ನಂದಾ ಅವರಿಗೆ ಪ್ರತಿ ತಿಂಗಳು ಐದು ನೂರು ರೂಪಾಯಿ ಭತ್ತೆ ಇತ್ತು. ಆದರೆ ತಾನು ಆ ಭತ್ತೆಗಾಗಿ ಸ್ವಾತಂತ್ರ್ಯ ಹೋರಾಟಗಾರನಾಗಿರಲಿಲ್ಲ ಎಂದು ಹೇಳಿ ಐದು ನೂರು ರೂಪಾಯಿ ಭತ್ಯೆಯನ್ನು ಪಡೆಯಲು ನಿರಾಕರಿಸಿದ್ದರು. ಆದರೆ ನಂತರ ಅವರ ಕೆಲವು ಗೆಳೆಯರು, ನೀವು ಐದು ನೂರು ರೂಪಾಯಿಯ ಭತ್ಯೆಯನ್ನು ನಿರಾಕರಿಸಿದರೆ ನಿಮ್ಮ ಹೊಟ್ಟೆಗೆ ಏನು ಮಾಡುವಿರೀ ಎಂದೆಲ್ಲಾ ಅವರಿಗೆ ತಿಳಿಹೇಳಿ , ಆ ಭತ್ಯೆಯನ್ನು ಅವರು ತೆಗೆದುಕೊಳ್ಳುವ ಹಾಗೆ ನೋಡಿಕೊಂಡಿದ್ದರು.

ಆ ವರದಿ ಪ್ರಕಟವಾದ ಮರುದಿನವೇ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳು ಅವರು ವಾಸಿಸುತ್ತಿದ್ದ ಮನೆಗೆ ಧಾವಿಸಿದರು. ಅಧಿಕಾರಿಗಳು ಹಾಗೂ ಅವರ ಜೊತೆಗೆ ಬಂದಿದ್ದ ಸರ್ಕಾರಿ ವಾಹನಗಳ ಭರಾಟೆ ನೋಡಿ , ಮನೆಯ ಮಾಲೀಕ ಅವಕ್ಕಾಗುತ್ತಾನೆ. ಆಗ ಆತನಿಗೆ ತಿಳಿಯುತ್ತದೆ. ತನ್ನ ಮನೆಯಲ್ಲಿ ಬಾಡಿಗೆಗೆ ಇದ್ದ ವ್ರಧ್ಧ ಬೇರಾರೂ ಅಲ್ಲ. ಅವರು ಮಾಜಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಎಂದು. ತಕ್ಷಣ ಆತ ತನ್ನನ್ನು ಕ್ಷಮಿಸುವಂತೆ ಗುಲ್ಜಾರಿಲಾಲ್ ನಂದಾ ಅವರು ಕಾಲು ಹಿಡಿಯುತ್ತಾನೆ.

ಅಧಿಕಾರಿಗಳು ನಂದಾ ಅವರಿಗೆ ಸರ್ಕಾರಿ ನಿವಾಸ ಹಾಗೂ ಸರ್ಕಾರಿ ಸವಲತ್ತು ಪಡೆಯಲು ವಿನಂತಿಸಿಕೊಳ್ಳುತ್ತಾರೆ. ಆದರೆ ಗುಲ್ಜಾರಿಲಾಲ್ ನಂದಾ ಅವರು ಅಷ್ಟೇ ನಯವಿನಯದಿಂದ ತಿರಸ್ಕರಿಸುತ್ತಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ಅವರು ಓರ್ವ ಸಾಮಾನ್ಯ ನಾಗರಿಕನಂತೆ ಜೀವನ ಕಳೆಯುತ್ತಾರೆ.

1997 ರಲ್ಲಿ ಅವರಿಗೆ ” ಭಾರತ ರತ್ನ ” ನೀಡಿ ಗೌರವಿಸಲಾಯಿತು.

ಸ್ವಾರ್ಥ ಸಾಧನೆ, ಸ್ವಹಿತಾಸಕ್ತಿ, ಹಾಗೂ ಭ್ರಷ್ಟಾಚಾರದಿಂದ ದೇಶದ ಸಂಪತ್ತನ್ನು ಲೂಟಿ ಹೊಡೆದು ಮೆರೆಯುತ್ತಿರುವ ಇಂದಿನ ರಾಜಕಾರಣಿಗಳು ಹಾಗೂ ಅಧಿಕಾರಿಗಳು ಇಂತಹ ಮಹಾನುಭಾವರ ಆದರ್ಶಮಯ ಜೀವನ ಚರಿತ್ರೆಯನ್ನು ಓದಿ ಪಾಠ ಕಲಿಯಬೇಕು. ಇಂತಹ ಧೀಮಂತ ವ್ಯಕ್ತಿತ್ವದ ಮಹಾನ್ ಚೇತನದ ಜೀವನದ ತುಲನೆ ಇಂದಿನ ರಾಜಕಾರಣಿಗಳ ಜೊತೆಗೆ ಎಳ್ಳಷ್ಟೂ ಆಗುವುದಿಲ್ಲ.
ಅವರು ನಮ್ಮನ್ನು ಅಗಲಿ ಇಂದಿಗೆ 23 ವಷ೯ಗಳಾದವು. ಇಂತಹ ಮಹಾನುಭಾವರ ಆದರ್ಶಗಳನ್ನು ನಾವು ಭಾರತೀಯರಾಗಿ ನಮ್ಮ ಜೀವನದಲ್ಲೂ ಅಳವಡಿಸಿ ಕೊಳ್ಳಲು ಪ್ರಯತ್ನಿಸಿ, ನಮ್ಮ ಭಾರತ ದೇಶವನ್ನು ಭ್ರಷ್ಟಾಚಾರ ಹಾಗೂ ಭ್ರಷ್ಟರಿಂದ ಸಂರಕ್ಷಿಸೋಣ….

 

ವರದಿ. ಪ್ರತಾಪ್, ಸಿ, ಹರಪನಹಳ್ಳಿ

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend