ಕುಟುಂಬ ರಕ್ಷಣೆ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಿ – ನಾಡಗೌಡ…!!!

ಕುಟುಂಬ ರಕ್ಷಣೆ ಜೊತೆಗೆ ಮಕ್ಕಳ ಭವಿಷ್ಯ ರೂಪಿಸಿ – ನಾಡಗೌಡ.

ಸಿಂಧನೂರು :ಮೇ.11.ಕಾರ್ಮಿಕರು ಪ್ರತಿದಿನ ದುಡಿದ ಹಣವನ್ನು ದುಶ್ಚಟಗಳಿಗೆ ಖರ್ಚು ಮಾಡದೆ ಕುಟುಂಬವನ್ನು ರಕ್ಷಣೆ ಮಾಡುವ ಜೊತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಹಣ ಖರ್ಚುಮಾಡಿ ಭವಿಷ್ಯ ರೂಪಿಸಬೇಕಾಗಿದೆ ಎಂದು ಟೋಲ್ ಕಿಟ್ ವಿತರಿಸಿ ಮಾಜಿ ಸಚಿವ ಹಾಗೂ ಶಾಸಕ ವೆಂಕಟರಾವ್ ನಾಡಗೌಡ ಮಾತನಾಡಿದರು.

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು, ಕಾರ್ಮಿಕ ಇಲಾಖೆ ಸಿಂಧನೂರು ರವರ ಸಂಯುಕ್ತ ಆಶ್ರಯದಲ್ಲಿ ತಾಲೂಕು ಪಂಚಾಯತ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಟೋಲ್ ಕಿಟ್ ವಿತರಿಸಿ ಮಾತನಾಡಿದ ಅವರು ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಆರು ಸಾವಿರ ಕೋಟಿ ರೂಪಾಯಿ ಹಣ ಇದ್ದು ಈ ನಿಧಿ ಕಾರ್ಮಿಕರಿಗಾಗಿ ಸದುಪಯೋಗವಾಗಬೇಕೆ ಹೊರತು ದೂರುಪಯೋಗವಾಗಬಾರದು ಎಂದರು.
ಕಲ್ಯಾಣ ಮಂಡಳಿ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಮ್ ಕೋರ್ಟ್ನಲ್ಲಿ ಸೂಕ್ತ ದಾಖಲಾತಿಗಳೊಂದಿಗೆ ಸರಿಯಾಗಿ ವಾದ ಮಂಡನೆ ಮಾಡದೆ ಇರುವುದರಿಂದ ಸುಪ್ರೀಂಕೋರ್ಟ್ನೆಲ್ಲಿ ಕೇಸ್ ವಜಾಗೊಂಡಿದೆ.ನನಗೆ ಸೂಕ್ತ ದಾಖಲಾತಿಗಳನ್ನು ಕೊಟ್ಟರೆ ಸದನದ ಒಳಗೆ ಹೋರಾಟ ಮಾಡುತ್ತೇನೆ ಹಾಗೂ ಕಾರ್ಮಿಕರ ಹೋರಾಟದಲ್ಲಿ ಪಾಲ್ಗೊಂಡು ಹೋರಾಟ ಮಾಡುವ ಮೂಲಕ ಕಾರ್ಮಿಕರ ಪರವಾಗಿ ನಿಲ್ಲುತ್ತೇನೆ ಎಂದು ಕಾರ್ಮಿಕರಿಗೆ ನೈತಿಕ ಬೆಂಬಲ ನೀಡಿದರು.
ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸೌಲಭ್ಯ ಸಿಗುತ್ತಿಲ್ಲ. ಒಬ್ಬರನ್ನು ಬಿಡದೇ ಪ್ರತಿಯೊಬ್ಬ ಕಾರ್ಮಿಕರನ್ನು ನೊಂದಣಿ ಮಾಡಿಸಿ ಸೌಲಭ್ಯ ಕೊಡಿಸುವ ಜವಾಬ್ದಾರಿ ಕಾರ್ಮಿಕ ಸಂಘಟನೆಗಳ ಮುಖಂಡರ ಮೇಲಿದೆ.

ಕಾರ್ಮಿಕರ ಕಲ್ಯಾಣ ಮಂಡಳಿ ಕಾರ್ಮಿಕರಿಗೆ ನಿಧಿ ಇದ್ದಂತೆ ಈ ನಿಧಿ ನಿಮ್ಮದೇ ಇದರಿಂದ ಮಕ್ಕಳ ಶಿಕ್ಷಣ ಮದುವೆ ಆರೋಗ್ಯ ಸೇರಿದಂತೆ ಇನ್ನಿತರ ಸೌಲಭ್ಯಕ್ಕಾಗಿ ನಿಧಿಯಿಂದ ಹಣ ಬಳಸಿಕೊಳ್ಳಬಹುದು.ಕಾರ್ಮಿಕರಿಂದ ಕಾರ್ಮಿಕ ಮಂತ್ರಿಗೆ ಗೌರವ ಬಂದಿದೆ ಎಂಬುದನ್ನು ಮರೆಯಬಾರದು.ಕಾರ್ಮಿಕರನ್ನು ಮರೆಯದೇ ಅವರ ಪರವಾಗಿ ಕೆಲಸ ಮಾಡಬೇಕು ಎಂದು ಕಾರ್ಮಿಕ ಮಂತ್ರಿಗಳಿಗೆ ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ ಸಲಹೆ ನೀಡಿದರು.
ಕಾರ್ಮಿಕ ಸಂಘಟನೆ ಮುಖಂಡರಾದ ಶೇಕ್ಷಾಖಾದ್ರಿ ಹನುಮೇಶ ಭಂಗಿ ,ಮುಕ್ತಾರ್ ಪಾಶ,ಮುನಿಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ಗೋಪಾಲ ದುವಾಲ ಸೇರಿದಂತೆ ಇನ್ನಿತರರು ಕಿಟ್ ವಿತರಣೆ ಸಂಧರ್ಭದಲ್ಲಿ ಹಾಜರಿದ್ದರು…

ವರದಿ.ದುಗ್ಗಪ್ಪ ಸಿಂಧನೂರು

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

 

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

ಸುದ್ದಿ ಹಾಗೂ ಜಾಹಿರಾತಿಗಾಗಿ ಸಂಪರ್ಕಿಸಿ :-9972422030

Leave a Reply

Your email address will not be published. Required fields are marked *

Send this to a friend